

ನಿಶ್ಚಿತ ಉದ್ಯೋಗವಿಲ್ಲದೆ ಕೋಟ್ಯಾಂತರ ದುಡಿಯವ ನಾಲ್ಕು ಜನ ಯುವಕರ ವ್ಯವಹಾರಗಳನ್ನು ಗಮನಿಸಿದ ಸಾರ್ವಜನಿಕರು ಪೊಲೀಸ್‌ರಿಗೆ ನೀಡಿದ ಖಚಿತ ಮಾಹಿತಿ ಆಧರಿಸಿ ತನಿಖೆ ನಡೆಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಅಂತರ್ ರಾಜ್ಯ, ವಿದೇಶಗಳಿಗೆ ಮಾದಕ ಬ್ರೌನ್‌ಶುಗರ್ ಸಾಗಿಸುವ ತಂಡವೊಂದನ್ನು ಅಂಕೋಲಾದಲ್ಲಿ ಸೆರೆಹಿಡಿದು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ನಾಲ್ವರಲ್ಲಿ ಸಿದ್ದಾಪುರದ ವೀರಭದ್ರ ಹೆಗಡೆ ಮತ್ತು ಪ್ರವೀಣ ಭಟ್ ಸೇರಿರುವುದು ವಿಶೇಶ. ಅಂಕೋಲಾದ ವ್ಯಕ್ತಿಗಳಿಬ್ಬರು ಮತ್ತು ಸಿದ್ಧಾಪುರದ ಎರಡುಜನ ಯುವಕರು ಎರಡು ಕಾರ್‌ಗಳನ್ನು ಬಳಸಿ ಮಾದಕ ಬ್ರೌನ್‌ಶುಗರ್ ಸಾಗಿಸುವ ಮಾಹಿತಿ ಉತ್ತರಕನ್ನಡ ಜಿಲ್ಲಾ ಅಪರಾಧ ನಿಗ್ರಹ ದಳಕ್ಕೆ ಸಿಕ್ಕಿತ್ತು. ಕೆಲವು ದಿವಸಗಳಿಂದ ಬಲೆಬೀಸಿದ್ದ ಈ ಪೊಲೀಸರು ಅಂಕೋಲಾದ ಗುನಗಾ, ಭಾಗ್ವತ್ ರೊಂದಿಗೆ ಸಿದ್ದಾಪುರದ ವೀರಭದ್ರ ಮತ್ತು ಪ್ರವೀಣ ಮಾಡುತ್ತಿರುವ ವ್ಯವಹಾರ, ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು.
ಸಾರ್ವಜನಿಕರು, ಇಲಾಖೆಯ ಮಾಹಿತಿಗಳು ತನಿಖಾ ದಳಕ್ಕೆ ಸಿಗುತ್ತಿದ್ದಂತೆ ಜಾಗೃತರಾದ ತನಿಖಾ ದಳದ ಅಧಿಕಾರಿಗಳು ಮಾಲಿನೊಂದಿಗೆ ಆರೋಪಿಗಳನ್ನು ಹಿಡಿಯಲು ಹೊಂಚುಹಾಕಿದ್ದರು. ನಿರೀಕ್ಷೆಯಂತೆ ಗೋವಾದಿಂದ ಕಾರವಾರ ಮೂಲಕ ಘಟ್ಟದ ಮೇಲೆ ಸಾಗಬೇಕಾಗಿದ್ದ ಈ ವಾಹನಗಳಲ್ಲಿದ್ದ ೨.೫ ಕೋಟಿ ಮೌಲ್ಯದ ಮಾದಕ ವಸ್ತುಗಳೊಂದಿಗೆ ಈ ನಾಲ್ವರು ಅಂಕೋಲಾ ಬಾಳೆಗುಳಿ ಬಳಿ ಪೊಲೀಸರ ಕೈಗೆ ಸಿಕ್ಕರು.
ಈ ಬಗ್ಗೆ ವಿಶೇಶ ಮಾಹಿತಿ ಕಲೆಹಾಕಿ, ತನಿಖೆ ನಡೆಸಿದ ಪೊಲೀಸರು ನಾಲ್ಕುಜನ ಅಫೀಮು ಸಾಗಾಟಗಾರರೊಂದಿಗೆ ಎರಡುಕಾರ್ ಗಳು ಹಾಗೂ ೨.೫ ಕೋಟಿ ಮೌಲ್ಯದ ಬ್ರೌನ್‌ಶುಗರ್ ವಶ ಪಡಿಸಿಕೊಂಡಿದ್ದಾರೆ.
ಯುವರತ್ನ,
ಜೇಮ್ಸ್ ಟ್ರೆಂಡಿಂಗ್
ಬೆಂಗಳೂರು,ಮಾ.೧೮- ಮಾ.೧೭ ರಂದು ಸರಳವಾಗಿ ಜನ್ಮದಿನ ಆಚರಿಸಿಕೊಂಡ ಪುನೀತ್‌ರಾಜ್‌ಕುಮಾರರ ಎರಡು ಹೊಸ ಸಿನೆಮಾಗಳ ಟೀಜರ್ ಮಂಗಳವಾರ ಬಿಡುಗಡೆಯಾಗಿವೆ.
ಬಿಡುಗಡೆಯಾಗಿ ಒಂದುದಿವಸದೊಳಗೆ ಕೋಟ್ಯಾಂತರ ಜನರು ಈ ಟೀಜರ್ ಗಳನ್ನು ನೋಡಿ ಖುಷಿಪಟ್ಟಿದ್ದರೆ, ಬಿಡುಗಡೆಯಾಗಿ ಒಂದು ತಾಸಿನೊಳಗೆ ೫ ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿ ಟ್ರೆಂಡಿಂಗ್ ಆಗಿದೆ.
ಸಂತೋಷ್ ಆನಂದರಾಮ್ ನಿರ್ಧೇಶನದ ಯುವರತ್ನದ ಡೈಲಾಗ್
ಸೀಟಿಗೆ ಹೊಡೆದಾಡುವವನು ಡಾನ್ ಅದರಲ್ಲಿ ಕೂಡ್ರುವವನು ನಾನ್
ಅಪಾರ ಜನಮೆಚ್ಚುಗೆ ಗಳಿಸಿದೆ.
ಇನ್ನೊಂದು ನೂತನ ಚಿತ್ರ ಜೇಮ್ಸ್ ನ ವಿಡಿಯೋ ಟೀಜರ್ ಕೂಡಾ ಟ್ರೆಂಡಿಂಗ್ ಆಗಿದ್ದು ಪುನೀತ್‌ರಾಜ್ ಮಿಷನ್‌ಗನ್‌ನಿಂದ ವಾಹನವೊಂದನ್ನು ಉಡಾಯಿಸುವ ಚಿತ್ರವನ್ನು ಒಂದೇ ದಿನದಲ್ಲಿ ೨೦ ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿ ಟ್ರೆಂಡಿಂಗ್ ಆಗಿದೆ.





