
ವಾಹನಗಳ ಹಾಗೂ ಮನೆಯ ( ಶೌಚಾಲಯ ಮತ್ತು ಎಲ್ಲಾ ಕೋಣೆಗಳ) ಬಾಗಿಲುಗಳನ್ನು ಎಡಗೈಯಿಂದಲೇ ಮುಟ್ಟಿರಿ. ಏಕೆಂದರೆ, ನಾವುಗಳು ಹೆಚ್ಚಾಗಿ ಮುಖದ ಸಂಪರ್ಕವನ್ನು ಬಲಗೈಯಿಂದಲೇ ಮಾಡುವುದು. ಇದನ್ನು ಕೋರಿಯಾದಲ್ಲಿ ಪಾಲಿಸಿದ್ದರಿಂದ ಕರೊನಾ ನಿಯಂತ್ರಣ ಮಾಡಲು ಸಾಧ್ಯವಾಯಿತು.
ಕೆ.ಎಫ್.ಡಿ. ವಾಸ್ತವಾಂಶ ಮುಚ್ಚಿಡುವ
ಬದಲು ಬೇಕಿದೆ ಶಾಶ್ವತ ಟಾಸ್ಕ್ಫೋರ್ಸ್!
ಕೆ.ಎಫ್.ಡಿ. ಟಾಸ್ಕ್ಫೋರ್ಸ್ನಂತಹ ಶಾಶ್ವತ ವ್ಯವಸ್ಥೆಗಳು ಆಗದೇ ಹೋದರೆ, ತಮ್ಮ ಮೇಲಿನ ಒತ್ತಡ ಕಡಿಮೆ ಮಾಡಿಕೊಳ್ಳಲು ಅಥವಾ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾವು ಮತ್ತು ನೋವಿನ ಕುರಿತ ವಾಸ್ತವಾಂಶಗಳನ್ನು ಮುಚ್ಚಿಡುವ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಗಳ ಸರ್ಕಸ್ ಮುಂದುವರಿಯುತ್ತಲೇ ಇರುತ್ತದೆ.
ಇಡೀ ರಾಜ್ಯದ ತುಂಬಾ ಕರೋನ ವೈರಸ್ ಭೀತಿ ಹಬ್ಬಿದೆ. ಹಲವು ಜಿಲ್ಲೆಗಳಲ್ಲಿ ೧೪೪ ಸೆಕ್ಷನ್ ಜಾರಿ ಮೂಲಕ ಜನಜಂಗುಳಿ ತಡೆಯುವ ಪ್ರಯತ್ನಗಳು ನಡೆಯುತ್ತಿವೆ.
