21 ದಿನಗಳ ವರೆಗೆ ಭಾರತದ ಪ್ರತಿಪ್ರಜೆಗೂ ಗೃಹಬಂಧನ ವಿಧಿಸಿರುವ ಪ್ರಧಾನಮಂತ್ರಿ ಮೋದಿ ಈ 21 ದಿವಸಗಳ ಅವಧಿಯಲ್ಲಿ ಕರೋನಾ ನಿಯಂತ್ರಣವಾಗದಿದ್ದರೆ ಈ ಸಮಯಮಿತಿ ವಿಸ್ತರಿಸುವ ಸುಳಿವನ್ನೂ ನೀಡುವ ಮೂಲಕ ಕರೋನಾ ನಿಯಂತ್ರಣಕ್ಕೆ ಮದ್ದು ಎಂದು ಬಣ್ಣಿಸಿದ್ದಾರೆ.
ಈ ಉಪಕ್ರಮದ ಬಗ್ಗೆ ಸ್ವಾಗತ ವ್ಯಕ್ತವಾಗಿದ್ದರೆ ಪ್ರಧಾನಿ ಮೋದಿ ಭಾರತದ 130 ಕೋಟಿ ಜನರಿಗೆ ಕರೋನಾ ಔಷಧೋಪಚಾರಕ್ಕಾಗಿ 15 ಸಾವಿರ ಕೋಟಿ ಘೋಶಿಸಿರುವುದರ ಬಗ್ಗೆ ವಿರೋಧ ವ್ಯಕ್ತವಾಗಿದೆ.
ಕಳೆದ ವಾರ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳದ ಕರೋನಾ ಪರಿಹಾರ ಪ್ಯಾಕೇಜ್ ಆಗಿ ಘೋಶಿರುವ 20 ಸಾವಿರ ಕೋಟಿ ಮುಂದೆ ಇದು ನಗಣ್ಯ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಕರೋನಾ 2-3 ನೇ ಹಂತದಲ್ಲಿದ್ದು ಮುಂದಿನ ಮೂರುವಾರಗಳಲ್ಲಿ ಸಾಮಾಜಿಕ ಅಂತರ ಕೆಲಸಮಾಡಿದರೆ ಕರೋನಾ ಹಿಮ್ಮೆಟ್ಟಿಸುವ ಸಾಧ್ಯತೆ ನಿಚ್ಚಳವಾಗಿದೆ. ಆದರೆ ಭಾರತದಂಥ ಬೃಹತ್ ರಾಷ್ಟ್ರಕ್ಕೆ 15 ಸಾವಿರ ಕೋಟಿಗಳ ಕರೋನಾ ಪ್ಯಾಕೇಜ್ ಆನೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಸರ್ಕಾರ ವಿಧಿಸಿರುವ ಈ ಗೃಹಬಂಧನ ಏಫ್ರಿಲ್14 ರ ವರೆಗೆ ನಿಗಧಿಯಾಗಿದ್ದು ಇಂದು ಮಧ್ಯರಾತ್ರಿಯಂದಲೇ ಜಾರಿಯಾಗಲಿದೆ. ಈ 21 ದಿವಸ ರಸ್ತೆಮೇಲೆ ಬರದೆ ನೀವು, ನಿಮ್ಮ ಕುಟುಂಬ ಸುರಕ್ಷಿತವಾಗಿರಬಹುದು ಈ ನಿಬಂಧನೆ ಪಾಲಿಸದಿದ್ದರೆ 21 ವರ್ಷ ಹಿಂದೆ ಹೋಗುವ ಪಾಯ ಅರಿತು ನಿಮಗಾಗಿ ಈ ಗೃಹಬಂಧನ ವಿಧಿಸಿಕೊಳ್ಳಿ ಎಂದು ಪ್ರಧಾನಿ ಮನವಿ ಮಾಡಿದ್ದಾರೆ.
ಕರೋನಾ 144,ಲಾಕ್‍ಔಟ್, ಜನಪ್ರತಿನಿಧಿಗಳು ಉತ್ತರದಾಯಿಗಳಲ್ಲವೆ?
ಕರೋನಾ ನಿಯಂತ್ರಣದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯ, ದೇಶದಾದ್ಯಂತ ಹೈ ಅಲರ್ಟ್ ಘೋಶಿಸಲಾಗಿದೆ. ಭಟ್ಕಳದಲ್ಲಿ ಇಂದು ದೃಢಪಟ್ಟ 2 ಕರೋನಾ ಪ್ರಕರಣಗಳು ಸೇರಿದಂತೆ ಭಟ್ಕಳ ಮೂಲದ ಮೂರು ಜನರಿಗೆ ಈ ವರೆಗೆ ಕರೋನಾ ಪತ್ತೆಯಾಗಿದೆ.