

ಕೆಲವು ವಿಶೇಶ ಹಿತಾಸಕ್ತರು ಡಾ.ರಾಜ್‍ಕುಮಾರರನ್ನು ಒಪ್ಪಿಕೊಳ್ಳುತ್ತಾರೆ, ಒಪ್ಪಿಕೊಂಡಂತೆ ಮಾತನಾಡುತ್ತಲೇ ನಿಧಾನವಾಗಿ ಡಾ. ರಾಜ್ ರಾಜ್ ಕುಮಾರ ಕುಟುಂಬ ರಾಜ್ಯ ದೇಶಕ್ಕೇನು ಕೊಟ್ಟಿದೆ ಎಂದು ಪ್ರಶ್ನಿಸುತ್ತಾರೆ. ರಾಜ್‍ಕುಮಾರ್ ಕೊಡುಗೆ ಎಲ್ಲರಿಗೂ ತಿಳಿದಿರಬೇಕೆಂದೇನೂ ಇಲ್ಲ ಆದರೆ ಉದ್ದೆಶಪೂರ್ವಕವಾಗಿ ಅವರ ಬಗ್ಗೆ ಉಪಾಯದಿಂದ ತಕರಾರು ಎತ್ತಿ ವಿಮರ್ಶಿಸುವವರು ಅವರ ಕೊಡುಗೆ, ಸಾಧನೆ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡುವುದಿಲ್ಲ.
ಇಂಥದ್ದೇ ತಕರಾರುಗಳು ಅವರ ಕುಟುಂಬ,ಮಕ್ಕಳ ಮೇಲಿವೆ.

ಈ ರಾಜ್‍ಕುಮಾರ, ಕುವೆಂಪು, ಲಂಕೇಶ್ ರ ಕೊಡುಗೆ, ಸಾಧನೆ, ಸಮಾಜಮುಖೀ ಚಟುವಟಿಕೆಗಳ ಬಗ್ಗೆ ಕೇಳಿ, ವಿಮರ್ಶಿಸುವವರು ಇತ್ತೀಚೆಗೆ ಪ್ರಕಾಶ್ ರೈ ಎಂಬ ಕನ್ನಡಿಗರ ಹೆಮ್ಮೆಯ ವ್ಯಕ್ತಿಯ ಬಗ್ಗೆಯೂ ತಕರಾರೆತ್ತುವುದಿದೆ.
ಇವರ ಸಮಸ್ಯೆ ಅವರ ಸಾಧನೆ, ಪ್ರಸಿದ್ಧಿ, ಕೊಡುಗೆಗಳ ಬಗ್ಗೆ ಅಲ್ಲ ಯಾಕೆಂದರೆ ಇವರ ಬಗ್ಗೆ ತಕರಾರು ಎತ್ತಿ, ವಿಮರ್ಶಿಸುವವರು ಒಂದೋ ಅವರು ಇವರ ಬಗ್ಗೆ ತಿಳಿದುಕೊಂಡು ಕೊಂಕು ನುಡಿಯುವ ನವಭಾರತದ ಮತಾಂಧ ವೈಚಾರಿಕತೆಯವರಿರುತ್ತಾರೆ, ಅಥವಾ ತಮ್ಮ ದೇವರು, ಧರ್ಮ,ನಂಬಿಕೆಗಳ ಸುಲಭ ಜೀವನೋಪಾಯದ ವಂಚಕ ಪರಿವಾರದವರಿರುತ್ತಾರೆ. ಇಂಥವರು ಈಗಿನ ಕರೋನಾ ಸಂಕಷ್ಟ ಕಾಲದಲ್ಲಿ ಯಾರ್ಯಾರು ಏನೇನು ಮಾಡುತಿದ್ದಾರೆ ಎಂದು ಗಮನಿಸಿದರೆ ಅವರ ಲಾಗಾಯ್ತಿನ ವೈರಸ್ ಗೆ ಮದ್ದು ಕಂಡುಕೊಂಡಂತಾಗುತ್ತದೆ.
ಈಗಿರುವ ಮಾಹಿತಿಗಳ ಪ್ರಕಾರ ರಾಜ್ ಪುತ್ರ ಶಿವರಾಜ್ ಕುಮಾರ ಚಿತ್ರರಂಗದ 5000 ಜನ ಸಿನಿ ಕಾರ್ಮಿಕರಿಗೆ ನಿತ್ಯ ಊಟೋಪಚಾರದ ವ್ಯವಸ್ಥೆ ಮಾಡುತಿದ್ದಾರೆ.
ಪುನೀತ್ ರಾಜ್ ಕುಮಾರ್ ಮುಖ್ಯಮಂತ್ರಿ ಕರೋನಾ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿದೇಣಿಗೆ ನೀಡಿದ್ದಾರೆ.
ಪ್ರಕಾಶ್‍ರಾಜ್ 250 ಜನ ದಿನಗೂಲಿ ಕಾರ್ಮಿಕರಿಗೆ ನಿತ್ಯ ಊಟೋಪಚಾರದ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ತಮ್ಮ ಮನೆಕೆಲಸದವರಿಗೆ ಎರಡು ತಿಂಗಳ ಮುಂಚಿತ ವೇತನ ನೀಡಿ ರಜೆ ನೀಡಿದ್ದಾರೆ.
ಹೀಗೆ ಸಿನಿಕಲಾವಿದರು, ಸಮಾಜಮುಖಿ ವ್ಯಕ್ತಿಗಳು ಅವರವರ ಸಾಮಥ್ರ್ಯಕ್ಕೆ ತಕ್ಕಂತೆ ಉದಾರವಾಗಿ ನೆರವಾಗುತಿದ್ದಾರೆ.
ಇಂಥ ನೆರವು, ಸಹಾಯ,ನಾಯಕತ್ವ, ಸಮಾಜಸೇವೆ ಮಾಡಿದ ಅನೇಕ ಸೆಲಿಬ್ರಿಟಿಗಳು ನಮ್ಮೆದುರಿಗಿದ್ದಾರೆ. ಆದರೆ ನಂಜುಕಾರುವ ಪರಿವಾರ ಮತ್ತವರ ಬೆಂಬಲಿಗರು ಸದಾ ತಮ್ಮ ಒಳಿತು ನೋಡುತ್ತಾ ಇಂಥ ಕಲಾವಿದರು, ಸಮಾಜಮುಖಿ ವ್ಯಕ್ತಿಗಳ ವಿರುದ್ಧ ಮಾತನಾಡುವ, ಕೆಲಸ ಮಾಡುವ ವಿದ್ಯಮಾನವನ್ನು ನೋಡುತಿದ್ದೇವೆ. ಸರ್ಕಾರದ ಕ್ಷೇತ್ರ ಅಭಿವೃದ್ಧಿ ನಿಧಿಯನ್ನೇ ಕರೋನಾ ಪರಿಹಾರ ನಿಧಿ ಗೆ ನೀಡಿ ಪ್ರಚಾರ ಪಡೆಯುತ್ತಿರುವ ಈಗಿನ ಸರ್ಕಾರದ ಸಂಸದರು, ಶಾಸಕರು, ಸಚಿವ ಕಲಾವಿದರ ನಡುವೆ ಪ್ರಚಾರವಿಲ್ಲದೆ ಕೆಲಸ ಮಾಡುತ್ತಿರುವ ನಿಜಕಲಾವಿದರು ಗ್ರೇಟ್ ಅಲ್ಲವೆ? ಅಷ್ಟಕ್ಕೂ ಈ ಕಲಾವಿದರು ಜನಸಾಮಾನ್ಯರ ಮತ ಪಡೆದು, ಜನಸಾಮಾನ್ಯರ ತೆರಿಗೆಯ ಸರ್ಕಾರದ ಸೌಲತ್ತು, ವೇತನ, ಅವಕಾಶ, ಅನುಕೂಲಗಳನ್ನು ಪಡೆದುಕೊಂಡವರಲ್ಲವಲ್ಲ, ಮತ ಪಡೆದು ಅಧಿಕಾರ ಪಡೆ ದು ಮನೆಯಲ್ಲಿ ಸುಖ, ಶಾಂತಿ ಪಡೆಯುತ್ತಿರುವ ಜನಪ್ರತಿನಿಧಿಗಳ ಎದುರು ಕಲಾವಿದರ ಸಮಾಜಮುಖೀ ವ್ಯಕ್ತಿತ್ವ ಗೌರವಕ್ಕೆ ಅರ್ಹ ಅಲ್ಲವೆ?





_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
