ಗುರುಗಳೇ… ನಾವೇ ಧನ್ಯರು….. ಗುರುಗಳಿಗೆ ಪ್ರಶಸ್ತಿ ಬಂದರೆ.. ಶಿಷ್ಯರಿಗೆ ಧನ್ಯತೆ!

ನಮ್ಮ ಗುರುಗಳು ಅಸಂಖ್ಯ.. ಲೋಹಿಯಾ, ಕುವೆಂಪು, ಲಂಕೇಶ್‌,ಅನಂತಮೂರ್ತಿ, ನಾಗೇಶ್‌ ಹೆಗಡೆ, ಡಾ. ವಿ.ಎಸ್.ಬಿ. ತೇಜಸ್ವಿ, ಬ್ರೆಕ್ಟ್‌, ದಿನೇಶ್‌ ಅಮೀನ್‌ ಮಟ್ಟು ಇತ್ಯಾದಿ.. ಇವರಲ್ಲಿ ಬಹುತೇಕರು ಮಾನಸ ಗುರುಗಳು. ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಪದವಿ ವರೆಗೆ ನಮಗೆ ಸಿಕ್ಕ ಬಹುತೇಕ ಗುರುಗಳೆಲ್ಲರೂ ಶ್ರೇಷ್ಠರೇ ನಾವೇನಾದರೂ ಕಲಿತರೆ, ಕಲಿತಿದ್ದರೆ ಅದು ಅವರ ಶ್ರೇಷ್ಠತೆ, ನಮ್ಮ ದೋಷಗಳೆಲ್ಲಾ ನಮ್ಮವೇ…. ಅದರಲ್ಲಿ ನಮ್ಮ ಗುರುಗಳ ಕಿಂಚಿತ್‌ ಕಾಣಿಕೆಯೂ ಇಲ್ಲ.

ನಮ್ಮ ಬಹುತೇಕ ಶ್ರೇಷ್ಠ ಗುರುಗಳಿಗೆ ಪ್ರಶಸ್ತಿ-ಪುರಸ್ಕಾರಗಳು ಸಿಕ್ಕಿದ್ದು ಕಡಿಮೆಯೇ ಆದರೆ ಅವರೆಲ್ಲಾ ಈ ಜಿಲ್ಲಾ ಮಟ್ಟದ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತರಿಗಿಂತ ಕಡಿಮೆ ಏನಲ್ಲ ಈ ಬಾರಿ ನಮಗೆ ಗುರುಸಮಾನರಾದ ಅನೇಕರಿಗೆ ಪ್ರಶಸ್ತಿ ಪುರಸ್ಕಾರಗಳು ಅರಸಿ ಬಂದಿವೆ ಅವರಿಗೆಲ್ಲಾ ಅಂತರಾಳದ ಅಭಿನಂದನೆಗಳನ್ನು ಸಲ್ಲಿಸುತ್ತಾ ನಮ್ಮ ಗುರು ಮಹೇಶ್‌ ಬಗ್ಗೆ ಕೆಲವು ಸಾಲು.

ಮಹೇಶ್‌ ನಾಯಕ ಹಿಚ್ಕಡರಿಗೆ ಈ ಬಾರಿಯ ರಾಜ್ಯಮಟ್ಟದ ಪ್ರಶಸ್ತಿಯೊಂದು ವಿಳಂಬವಾಗಿಯಾದರೂ ದಕ್ಕಿದೆ. ಅವರ ಹುಟ್ಟೂರು ಸುಂದರ ಹಿಚ್ಕಡ. ಹಿಚ್ಕಡವೆಂದರೆ ಅಂಕೋಲಾ ಮತ್ತು ಉತ್ತರ ಕನ್ನಡ ಜಿಲ್ಲೆಯ ಸ್ವರ್ಗ. ದ್ವೀಪದಂಥ ಈ ಪುಟ್ಟ ಗ್ರಾಮದಲ್ಲಿ ರಮಾನಂದ ನಾಯಕ, ಶಾಂತರಾಮ ನಾಯಕ ನಮ್ಮ ಸ್ನೇಹಿತ ಹರೀಶ್‌ ನಾಯಕ ಸೇರಿದಂತೆ ಅನೇಕರು ಜನಿಸಿದ್ದಾರೆ. ಈ ಊರಿನಿಂದ ಉದಯಿಸಿಬಂದ ಮಹೇಶ್‌ ನಾಯಕ ಎತ್ತರದ ನಿಲುವಿನ, ಎತ್ತರದ ವ್ಯಕ್ತಿತ್ವದ ಅಣ್ಣನಂಥ ಗುರು.

ಪಂಪನ ನೆನೆವುದೆನ್ನ ಮನಂ ಬನವಾಸಿ ದೇಶಮಂ…. ಕೇಶಿರಾಜನ ಹಳೆಗನ್ನಡದ ಸಾಲುಗಳು, ಕನ್ನಡದ ರತ್ನತ್ರಯರು ಇವರ ನಾಲಿಗೆ ಮೇಲೆ ನಲಿದಾಡುತ್ತಾರೆ. ಅಪ್ಪ ಸ್ನೇಹಿತನಂತಿರಬೇಕು ಗುರು ತಾಯಿಯಂತಿರಬೇಕೆಂಬ ಒಂದು ಹೇಳಿಕೆಇದೆ. ಮಹೇಶಣ್ಣ ಅಮ್ಮನಂಥ ಗುರು. ಒಳ್ಳೆಯದಕ್ಕೆ ಕೋಮಲ, ಕೆಟ್ಟದ್ದಕ್ಕೆ ವಜ್ರ, ಸತ್ಯಕ್ಕೆ ಮಿತ್ರ, ಸುಳ್ಳು ನಾಟಕಗಳಿಗೆ ಶತ್ರು. ಇಂತಿಪ್ಪ ಮಹೇಶಣ್ಣ ಎನ್ನುವ ನನ್ನ ಗುರು. ಆಗತಾನೆ ಆಗ್ಲಮಾಧ್ಯಮ ವಿದ್ಯಾರ್ಥಿಯಾಗಿದ್ದ ನನಗೆ ನನ್ನಂಥ ಅನೇಕ ಸ್ನೇಹಿತರಿಗೆ ಕನ್ನಡ ಓದಲು ಉತ್ತೇಜನವಾದವರು. ನೀನು ಯಾವ ವಿಷಯವನ್ನಾದರೂ ಆಯ್ಕೆ ಮಾಡಿಕೊ ಆದರೆ ನನ್ನ ಕನ್ನಡ ತಗೊಳ್ಳೋದೆ… ಎಂದು ಅನೇಕ ಪ್ರತಿಭಾವಂತರನ್ನು ಕನ್ನಡಕ್ಕೆ ಕರೆತಂದ ನಮ್ಮ ಕನ್ನಡಪ್ಪ ಗುರು.

ಕಾಲೇಜಿನ ಪಾಠ-ಪ್ರವಚನಗಳೊಂದಿಗೆ ಕನ್ನಡ ಸಾಹಿತ್ಯಕ್ಕೆ ತಮ್ಮ ಆತ್ಮೀಯತೆ, ಶಿಷ್ಯಪ್ರೀತಿಯಿಂದಲೇ ಸೇವೆ ಸಲ್ಲಿಸಿದ ಮಹಾನುಭಾವರು. ನಮ್ಮ ಚಿಂತನೆ, ಬರವಣಿಗೆ, ಕನ್ನಡಪ್ರೀತಿ, ಮಾತುಗಾರಿಕೆ, ಸಮಾಜಮುಖೀ ನಡೆಗಳ ಹಿಂದೆ ಮಹೇಶ ನಾಯಕರೂ ಸೇರಿ ಹಲವರ ಪ್ರೀತಿಇದೆ.

ಬುದ್ಧಿವಂತ ವೈದ್ಯನಿಗಿಂತ ಮಾನವೀಯ ವೈದ್ಯ ಹೆಚ್ಚು ಜನಮುಖಿ ಹಾಗೆಯೇ ಶಿಸ್ತಿನ ಶಿಕ್ಷಕ, ಗುರುಗಿಂತ ಶಿಷ್ಯರನ್ನು ಮಕ್ಕಳಂತೆ ಪ್ರೀತಿಸುವ ಗುರು ಶ್ರೇಷ್ಠ. ನಮ್ಮ ಗುರು ಶ್ರೇಷ್ಠರಲ್ಲಿ ಮಹೇಶ್‌ ನಾಯಕ ಕಾಲೇಜಿಗೆ ಬಾರದವರನ್ನು ಕಾಲೇಜಿಗೆ ಕರೆದ, ಪ್ರತಿಭಾವಂತರನ್ನು ನಿನ್ನಲ್ಲಿ ಪ್ರತಿಭೆ ಇದೆ ಮುನ್ನುಗ್ಗು ಎಂದು ಉತ್ತೇಜಿಸಿದ, ಹಿಂಜರಿಕೆಯವರನ್ನು ಉತ್ತಮತೆಗೆ ಪ್ರೋತ್ಸಾಹಿಸಿದ ನಾಯಕ ನಮ್ಮ ಗುರು ಎನ್ನಲು ನಮಗೆ ಹೆಮ್ಮೆ. ಇವರೊಂದಿಗಿದ್ದ ಒಂದು ಡಜನ್‌ ಗೂ ಹೆಚ್ಚು ಜನ ನಮ್ಮ ಗುರುಗಳೂ ಇವರಂತೆಯೇ ಪ್ರಶಸ್ತಿ,ಪುರಸ್ಕಾರ, ಅಭಿನಂದನೆಗಳಿಗೆ ಅರ್ಹರು. ಇವರ ದೊಡ್ಡತನ, ಇವರ ಸಂಪ್ರೀತಿಯ ದೊಡ್ಡ ಬಳಗ ಇವರ ಹೃದಯ ವೈಶ್ಯಾಲ್ಯಕ್ಕೆ ಪ್ರತಿಬಿಂಬ. ಇಂಥ ಗುರುಗಳನ್ನು ಪಡೆದ ನಾವೆಲ್ಲ ಧನ್ಯರು. ಅಭಿನಂದನೆ ಮಹೇಶ್‌ ಸರ್.

ಮರೆಯುವ ಮುನ್ನ- ಎರಡು ಐಚ್ಛಿಕ ಆಂಗ್ಲಮಾಧ್ಯಮ ಇಂಗ್ಲೀಷ್‌ ಬೇಸಿಕ್‌ ಜೊತೆ ನಮ್ಮೆಲ್ಲಾ ಕನ್ನಡ ಉಪನ್ಯಾಸಕರ ಪ್ರೀತಿಯ ಒತ್ತಾಸೆಯ ಕಾರಣಕ್ಕೆ ಕನ್ನಡ ಐಚ್ಛಿಕ ಆಯ್ಕೆ ಮಾಡಿದ ನನಗೆ ಮೊಟ್ಟ ಮೊದಲೆಂಬಂತೆ ಸೆಮಿನಾರ್‌ ಮಾಡಲು ಆದೇಶಿಸಿದರು ಮಹೇಶ್‌ ಸರ್‌, ಕನ್ನಡ ಸಾಹಿತ್ಯದ ಪ್ರಬಂಧದೊಂದಿಗೆ ಪಾಠ ಮಾಡಿದ ನನಗೆ ಕನ್ನಡ ಪ್ರೀತಿಯ ನಮ್ಮ ಸ್ನೇಹಿತರೆಲ್ಲಾ ಪ್ರಶ್ನೆ ಕೇಳಿ ಗೋಳುಹೊಯ್ದುಕೊಳ್ಳಲು ಪ್ರಯತ್ನಿಸಿ ಪ್ರಶ್ನೆಗಳ ಬಾಣ ಬಿಡತೊಡಗಿದರು. ನಾನೂ ಹುಂಬತನದಿಂದಲೇ ಪ್ರತ್ಯುತ್ತರಿಸತೊಡಗಿದೆ. ಈ ವಾಗ್ವಾದದ ರೋಚಕತೆ ಅನುಭವಿಸಿದ ಮಹೇಶ್‌ ಸರ್.‌ ಒಳಗೊಳಗೆ ನಗುತ್ತಾ ಸಾಕು, ಸಾಕು. ಎಂದು ನಿಯಂತ್ರಿಸಿದವರೆ… ಗ್ರೇಟ್..‌ ಹುಚ್ಚುತನಕ್ಕೆ ನೀನು ಕೊಟ್ಟ ವಿವರಣೆ ಕೇಳಿ ನಾನು ಮಾಸ್ತರೋ? ನೀನೋ ಎಂದು ನಕ್ಕು ನಮ್ಮ ಸೆಮಿನಾರ್‌ ಹಾಲ್‌ ನಲ್ಲೇ ಅಪ್ಪಿಕೊಂಡು ಬೆನ್ನುತಟ್ಟಿಆಶೀರ್ವದಿಸಿದರು. ನನ್ನಂಥ ಅನೇಕ ಶಿಷ್ಯರು ಮಹೇಶ್‌ ಸರ್‌, ಮಾಂಗಳೇಕರ್‌, ಶ್ರೀಧರ ನಾಯಕ, ಸಂಜೀವ ನಾಯಕ, ಜೈಕರ್‌ ಭಂಡಾರಿ, ಬಾಲೀಶ್‌ ನಾಯಕ, ಗಣೇಶ್‌ ವಿ.ಜಿ. ಜಗದೀಶ್‌ ಸರ್‌, ರಾಜೇಂದ್ರ ಸರ್‌ ಸೇರಿದಂತೆ ಅನೇಕ ಗುರುಗಳ ಬೆಚ್ಚನೆಯ ಆಶೀರ್ವಾದದ ಪ್ರೀತಿ ಜೊತೆ ಅವರ ಕ್ರೀಯಾಶೀಲ ನಿರಂತರತೆಯ ಶ್ರಮದ ತ್ಯಾಗ ಪಡೆದಿದ್ದೇವೆ. ಇಂಥ ಗುರುಗಳಲ್ಲಿ ಅನೇಕರಿಗೆ ಪ್ರಶಸ್ತಿಗಳು ಹುಡುಕಿ ಬರುತ್ತಿರುವುದು ಆ ಪ್ರಶಸ್ತಿಗಳ ಮೌಲ್ಯಕ್ಕೆ ಸಾಕ್ಷಿ. ನಾವಂತೂ ಧನ್ಯರು…- ಕನ್ನೇಶ್‌ ಕೋಲಶಿರ್ಸಿ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *