

ಕರೋನಾ ಭಯ,ಮುನ್ನೆಚ್ಚರಿಕೆ ಹಿನ್ನೆಲೆಗಳಲ್ಲಿ ಇಡೀ ವಿಶ್ವದ ವೈದ್ಯಕೀಯ ಕ್ಷೇತ್ರ ಪುಟಿದೆದ್ದಿದ್ದರೆ ಉತ್ತರ ಕನ್ನಡ ಜಿಲ್ಲೆಯ ಆಯುಷ್ ಇಲಾಖೆ ಸರ್ಕಾರದ ರೀತಿ-ನೀತಿಗಳನ್ನೇ ಗಾಳಿಗೆ ತೂರಿ ರಾಜಕೀಯ ಮಾಡುತ್ತಾ ಕಾಲಹರಣ ಮಾಡುತ್ತಿರುವ ವಿದ್ಯಮಾನ ಈಗ ಚರ್ಚೆಯ ವಿಷಯವಾಗಿದೆ.

ಜಿಲ್ಲಾ ಪಂಚಾಯತ್ ಅಧೀನದಲ್ಲಿ ಕಾರ್ಯನಿರ್ವಹಿಸುವ ಜಿಲ್ಲಾ ಆಯುಷ್ ಇಲಾಖೆ ರಾಜಕೀಯ ಕಾರಣಗಳಿಂದಾಗಿ ಶಿರಸಿ ಪ್ರೇರಿತ ರಾಜಕೀಯ ಹಿತಾಸಕ್ತರ ಕೊಂಪೆಯಾಗಿ ಈ ಇಲಾಖೆ ಜಾತಿ ಆಧಾರಿತ ಶ್ರೀಮಂತರ ಹಿತಾಸಕ್ತಿ ಕಾಪಾಡುವ ಸಂಘನಿಷ್ಠೆಯಿಂದ ತನ್ನ ಕರ್ತವ್ಯ, ಉದ್ಧೇಶ ಮರೆತ ವ್ಯವಸ್ಥೆಯಾಗಿ ಜಿಲ್ಲೆಯ ಆಯುಷ್ ಇಲಾಖೆಯನ್ನು ದೂರುವಂತಾಗಿದೆ.
ಈ ಬಗ್ಗೆ ಈಗಾಗಲೇ ಜಿ.ಪಂ. ಮುಖ್ಯ ಕಾರ್ಯದರ್ಶಿಯವರೆಗೂ ದೂರು ಹೋಗಿದ್ದರೂ ಶಿರಸಿಯನ್ನು ಕರ್ಮಠರ ವಠಾರವನ್ನಾಗಿಸಿಕೊಂಡು ಧಾರ್ಮಿಕತೆಯ ಹೀನ ರಾಜಕಾರಣ ಮಾಡುವ ಇಲ್ಲಿಯ ಜನಪ್ರತಿನಿಧಿಗಳು ತಮ್ಮ ಸಂಘದ ಕೂಟ, ಜಾತಿರಾಜಕೀಯಕ್ಕಾಗಿ ಆಯುಷ್ ಇಲಾಖೆಯನ್ನೇ ಬಲಿ ಕೊಡುತಿದ್ದಾರೆ ಎನ್ನುವ ಗುರುತರ ಆರೋಪಗಳಿವೆ.
ಆಯುಷ್ ಇಲಾಖೆಯಲ್ಲಿ ಸೀನಿಯರ್ ಎನ್ನುವ ಶಿರಸಿಯ ವೈದ್ಯರೊಬ್ಬರು ಶಿರಸಿ, ಬೈರುಂಬೆ, ಅಲ್ಲಿಂದ ಪರೋಕ್ಷವಾಗಿ ಪ್ರಕೃತಿ ಚಿಕಿತ್ಸೆಯ ಆಸ್ಫತ್ರೆಗೆ ಓಡಾಡುತಿದ್ದು ಇವರ ಈ ಕರ್ತವ್ಯಲೋಪಕ್ಕೆ ಸ್ಥಳಿಯ ಜನಪ್ರತಿನಿಧಿಗಳೇ ನೆರವಾಗುತ್ತಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ.
ಶಿರಸಿ ಪ್ರೇರಿತ ಸಂಘ,ರಾಜಕೀಯ, ಮಾಧ್ಯಮಗಳ ಬೆಂಬಲದಿಂದ ಕೊಬ್ಬಿರುವ ಹಿರಿಯ ವೈದ್ಯ,ನೌಕರರ ಸಂಘದ ಜಿಲ್ಲಾಧ್ಯಕ್ಷ ಅವರೊಂದಿಗಿನ ಕೆಲವು ಅವಕಾಶವಾದಿಗಳು ಆಯುಷ್ ಇಲಾಖೆ ಮತ್ತು ಸಾರ್ವಜಜನಿಕ ಆರೋಗ್ಯವ್ಯವಸ್ಥೆಗೇ ಕಂಟಕರಾಗಿದ್ದು ಇವರನ್ನು ಪೋಶಿಸುತ್ತಿರುವ ಶಿರಸಿ ರಾಜಕಾರಣಿಗಳು ಸ್ಥಳಿಯ ರೋಗಿಗಳು ಮತ್ತು ಜಿಲ್ಲೆಯ ಆರೋಗ್ಯವ್ಯಸ್ಥೆಯನ್ನೇ ಕೆಡಿಸುತ್ತಿರುವ ಬಗ್ಗೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ವರೆಗೆ ದೂರು ಹೋಗಿದೆ.
ಶಿರಸಿ ಕೇಂದ್ರವನ್ನಾಗಿಸಿಕೊಂಡು ಉತ್ತರಕನ್ನಡದಿಂದ ರಾಜ್ಯದ ವರೆಗೆ ರಾಜಕಾರಣ ಮಾಡುವ ಇಲ್ಲಿಯ ಹಿರಿಯ ವೈದ್ಯ, ಜಿಲ್ಲೆಯ ನೌಕರರ ಸಂಘದ ಅಧ್ಯಕ್ಷರು ಆಯುಷ್ ಇಲಾಖೆಯನ್ನು ಅನಾರೋಗ್ಯದ ತಾಣವನ್ನಾಗಿಸಿದ್ದು ಇದರಿಂದ ಇವರನ್ನು ರಕ್ಷಿಸುವ ರಾಜಕಾರಣಿಗಳಿಗೆ ಪರೋಕ್ಷ ಲಾಭವಾಗುವುದಾದರೂ ಇವರಿಂದ ಶಿರಸಿಯ ಖಾಸಗಿ ಆಸ್ಫತ್ರೆಗಳು ಸ್ಥಳಿಯ ರೋಗಿಗಳನ್ನು ಸುಲಿಯಲು ಅನುಕೂಲವಾಗಿರುವ ಬಗ್ಗೆ ದಾಖಲೆಗಳೊಂದಿಗೆ ಸರ್ಕಾರಕ್ಕೆ ದೂರಲಾಗಿದೆ.
ಶಿರಸಿ-ಉತ್ತರ ಕನ್ನಡದಲ್ಲಿ ಧರ್ಮಾಧಾರಿತ ರಾಜಕಾರಣ ಮಾಡುತ್ತಾ ಸ್ವಜಾತಿ ಶ್ರೀಮಂತರನ್ನೇ ಕೊಬ್ಬಿಸುತ್ತಿರುವ ರಾಜಕಾರಣಿಗಳು ತಮ್ಮ ಸ್ವಾರ್ಥ,ಸ್ವಜಾತಿ ಹಿತಕ್ಕಾಗಿ ಅಸಹಾಯಕ ರೋಗಿಗಳನ್ನು, ಕೆಳವರ್ಗದವರು, ದುರ್ಬಲರನ್ನೇ ಶೋಶಿಸುತಿದ್ದು ಈ ಸಂಘನಿಷ್ಠ ಜಾತಿ-ಲಾಭದ ಪಟ್ಟಭದ್ರರ ಜುಗಲ್ ಬಂಧಿಯನ್ನು ಭೇದಿಸುವ ಮೂಲಕ ಸ್ಥಳಿಯರ ಹಿತಕಾಪಾಡಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಈ ಬಗ್ಗೆ ಸ್ಥಳೀಯರು ರೋಸಿ ಹೋಗಿದ್ದು ಆಯುಷ್ ಇಲಾಖೆಯನ್ನು ರಾಜಕಾರಣ, ಶೋಷಣೆಯ ತಾಣ, ಅಕ್ರಮ, ಅವ್ಯವಹಾರಗಳ ಕೇಂದ್ರವಾಗಿಸಿ ರಾಜಕೀಯ ವ್ಯಕ್ತಿಗಳ ನೆರವಿನಿಂದ ಅರಾಜಕತೆ ಸೃಷ್ಟಿಸಿರುವ ವಿರುದ್ಧ ಸಂಘಟತ ಪ್ರತಿಭಟನೆಗೆ ಸಜ್ಜಾಗಿರುವ ಬಗ್ಗೆ ಸಮಾಜಮುಖಿಗೆ ಮಾಹಿತಿ ದೊರೆತಿದೆ.

