

#ಕ್ಯೂಬಾದ ವೈದ್ಯಕೀಯ ವಿದ್ಯಾರ್ಥಿಯ #ಪತ್ರ☆
ಪ್ರೀತಿಯ #ಟ್ರಂಪ್ ಅಂಕಲಿಗೆ,
ನಿಮ್ಮ ಶ್ವಾಸಕೋಶಗಳಲ್ಲಿ ನೀರು ತುಂಬಿದೆ
ನಮ್ಮ ಕಣ್ಣುಗಳಲ್ಲಿ ಆಶ್ರು ತುಂಬಿದೆ
ವ್ಯಂಗ್ಯಕ್ಕಿದು ಕಾಲವಲ್ಲ
ನಮ್ಮ ಕೈಗಳು ನಿಮ್ಮ ಆರೈಕೆಗೆ ಸಿದ್ಧವಾಗಿವೆ
ಆದರೆ ನಮ್ಮ ಕೈಗಳು ನಮ್ಮಲಿಲ್ಲ
ನಮ್ಮ ಕೈಗಳನ್ನು ಕತ್ತರಿಸಲಾಗಿದೆ
ಆ ಕೈಯ್ಯೊಂದು ನಿಮ್ಮಲ್ಲಿದೆ
ನಮ್ಮ ಬೇಡಿಯನ್ನು ಕಳಚಿದ ಕೈಯ್ಯೊಂದು ನಿಮ್ಮಲ್ಲಿದೆ
ನಮ್ಮ ಕಣ್ಣೀರನೊರೆಸಿದ ಕೈಯ್ಯೊಂದು ನಿಮ್ಮಲ್ಲಿದೆ
ನಮ್ಮನ್ನು ಅಪ್ಪಿ ಮುದ್ದಿಸಿದ್ದ ಕೈಯ್ಯೊಂದು ನಿಮ್ಮಲ್ಲಿದೆ
ದಯವಿಟ್ಟು ಆ ಕೈಯ್ಯೊಂದನು ಮರಳಿಸಿ
ಅಂದು ಬೊಲಿವಿಯಾದಲ್ಲಿ ಸೆರೆಸಿಕ್ಕಾಗ
ನೀವು ಕತ್ತರಿಸಿ ಕೊಂಡೊಯ್ದ ಆ ಕೈಯ್ಯನು
ಒಮ್ಮೆ ಮರಳಿಸಿ,
ನೀವು ಕತ್ತರಿಸಿದ*
ನಮ್ಮ ಚೇ ಗುವಾರನ
ಕೈಯ್ಯನ್ನೊಮ್ಮೆ ಮರಳಿಸಿ
— ಪುನೀತ್ ಅಪ್ಪು
08-04-2020
*ಬೊಲಿವಿಯಾದಲ್ಲಿ ಅಮೇರಿಕಾ ಸೇನೆಗೆ ಸೆರೆಸಿಕ್ಕ ಚೆ ಗುವೇರಾನನ್ನು ಗುಂಡು ಹಾರಿಸಿಕೊಂದ ಬಳಿಕ ಅಮೇರಿಕನ್ ಸೈನಿಕರು ಆತನ ಎರಡೂ ಹಸ್ತಗಳನ್ನು ಕತ್ತರಿಸಿ ಅಮೇರಿಕಾ ದೇಶಕ್ಕೆ ಕೊಂಡೊಯ್ದಿದ್ದರು.


