ಸಾಮಾಜಿಕ ಜಾಲತಾಣಗಳ
ಹಸಿ ಸುಳ್ಳುಗಳನು ನಂಬಿಕೊಂಡು
ಉದ್ರಿಕ್ತ ದ್ವೇಷಪ್ರೇಮಿಗಳಾಗದೆ
ಪ್ರೀತಿ, ದಯೆ ,ಕರುಣೆ ,
ಮಾನವತೆಯ ತುಂಬಿಕೊಂಡ
ನೈಜ ದೇಶಪ್ರೇಮಿಗಳಾಗೋಣ.
ಯಾರದೋ ಸಂಚಿಗೆ ಬಲಿಯಾಗಿ
ಸುಖಾಸುಮ್ಮನೆ ವಿಷ ಕಕ್ಕುವ
ಅಂಧ ದ್ವೇಷಪ್ರೇಮಿಗಳಾಗದೆ
ಸ್ವಾತಂತ್ರ್ಯ ,ಸಮಾನತೆ ,ಬ್ರಾತೃತ್ವ
ನ್ಯಾಯ,ನೀತಿ ,ಮಾತೃತ್ವ ತುಂಬಿದ
ನೈಜ ದೇಶಪ್ರೇಮಿಗಳಾಗೋಣ
ಕತ್ತಿ ಹಿಡಿವವರಿಗೆ
ಕತ್ತಿಯಿಂದಲೇ ನಾಶವಂತೆ
ದ್ವೇಷ ಉಗುಳುವವರಿಗೆ
ಕಾಲವೇ ಯಮ ಪಾಶವಂತೆ .
ನಾವೇ ಮೇಲೆನ್ನುವ
ಮತಾಂಧತೆಯು ಮಣ್ಣಾಗಿ
ಭಾರತೀಯತೆ ಚಿಗರೊಡೆಯಲಿ .
#ದ್ವೇಷಪ್ರೇಮಿಗಳಾಗದೆ ದೇಶಪ್ರೇಮಿಗಳಾಗೋಣ
-ಮನು ಪುರ