

ಕರೋನಾ ಭಯ, ಮುನ್ನೆಚ್ಚರಿಕೆಗಳ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಬಾಡಿಗೆ ವಾಹನ ಚಾಲಕರಿಗೆ ತಲಾ 5 ಸಾವಿರ ಮಾಸಿಕ ಧನಸಹಾಯ, ಆಂಧ್ರ, ಕೇರಳಗಳು ಕ್ರಮವಾಗಿ 10,20 ಸಾವಿರ ರೂಪಾಯಿಗಳ ನೆರವು ನೀಡಿವೆ.
ರಾಜ್ಯದಲ್ಲಿ ಖಾಸಗಿಯಾಗಿ ಅನೇಕರು ನೆರವು ನೀಡುತಿದ್ದಾರೆ. ಸರ್ಕಾರ ಈ ಖಾಸಗಿ ಬಾಡಿಗೆ ವಾಹನ ಚಾಲಕರಿಗೆ ಇಂಥ ಯಾವ ಅನುಕೂಲವನ್ನೂ ಮಾಡಿಲ್ಲ. ಕುಮಟಾದಲ್ಲಿ ಅಲ್ಲಿಯ ಶಾಸಕರು ಆಟೋ ಚಾಲಕರಿಗೆ ತಲಾ ಒಂದು ಸಾವಿರ ರೂಪಾಯಿ ನೆರವು ನೀಡಿದ್ದಾರೆ.
ಶಿರಸಿಯಲ್ಲಿ ಉದ್ಯಮಿ ಉಪೇಂದ್ರ ಪೈ ಆಟೋ ಚಾಲಕರಿಗೆ ಆಹಾರಧಾನ್ಯ ವಿತರಿಸಿದ್ದಾರೆ. ಇವರ ನಡುವೆ ಅನೇಕರು ತಮ್ಮ ಮಿತಿಯಲ್ಲಿ ಬೇರೆಬೇರೆ ಕ್ಷೇತ್ರದ ಜನರಿಗೆ ನೆರವು ನೀಡಿ ಫೋಟೋ ತೆಗೆಸಿಕೊಂಡಿದ್ದಾರೆ.
ರಾಜಕಾರಣಿಗಳು,ಉದ್ಯಮಿಗಳ ನಡುವೆ ಸಿದ್ಧಾಪುರ ಶಿಕ್ಷಣ ಪ್ರಸಾರಕ ಸಮೀತಿಯಿಂದ ಯುವ ರಾಜಕಾರಣಿ ಡಾ.ಶಶಿಭೂಷಣ ಹೆಗಡೆ 2ಲಕ್ಷ ರೂಪಾಯಿಗಳನ್ನು ಕರೋನಾ ಪರಿಹಾರ ನಿಧಿಗೆ ನೀಡುವ ಮೂಲಕ ತಮ್ಮ ಸಾಮಾಜಿಕ ಜವಾಬ್ಧಾರಿ ಮೆರೆದಿದ್ದಾರೆ.


