
ಗೇಣಿ_ಪದ್ಧತಿ ಎಂಬ ಹೇಯ ಮತ್ತು ಅಮಾನವೀಯ ಜಮೀನ್ದಾರಿ ಶೋಷಕ ವ್ಯವಸ್ಥೆಯನ್ನು ವಿರೋಧಿಸಿ ನಿರಕ್ಷರಕುಕ್ಷಿ ಬಡ ಗೇಣಿದಾರ ರೈತರನ್ನು ಸಂಘಟಿಸಿ ಸ್ವತಂತ್ರ ಭಾರತದ ಮೊಟ್ಟಮೊದಲ ರೈತ ಕ್ರಾಂತಿಗೆ ನಾಂದಿ ಹಾಡಿದ ಹೋರಾಟಗಾರ ಇವರು.#ಎಚ್_ಗಣಪತಿಯಪ್ಪ, ಗಾಡಿ ಗಣಪತಿಯಪ್ಪ ಎಂದೇ ಹೆಸರಾದ ಈ ಮಹಾನ್ ಬಂಡಾಯಗಾರನ ಮಹತ್ವ ಕೇವಲ #ಕಾಗೋಡು_ಚಳವಳಿಯ ಕಟ್ಟಿದ್ದಷ್ಟೇ ಅಲ್ಲ; 1969ರಲ್ಲಿ ಇಂಥಹದ್ದೆ ಜಮೀನ್ದಾರಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಹಿಂಸಾ ಕ್ರಾಂತಿಗೆ ಕಾರಣವಾದ ಪಶ್ಚಿಮಬಂಗಾಳದ #ನಕ್ಸಲ್ಬಾರಿ_ಚಳವಳಿಗೆ ಸುಮಾರು ಎರಡು ದಶಕ ಮುನ್ನವೇ(1951) ಭೂಮಾಲೀಕರ ಅಟ್ಟಹಾಸದ ಹಿಂಸಾ ದಬ್ಬಾಳಿಕೆಯ ನಡುವೆಯೂ ರಕ್ತರಹಿತ, ಹಿಂಸೆರಹಿತ ಚಳವಳಿಯಾಗಿ #ಕಾಗೋಡು_ಚಳವಳಿ ಕಟ್ಟಿದ್ದು ನಿಜವಾದ ಹೆಗ್ಗಳಿಕೆ.
ಅವರ ಆ ಅಹಿಂಸಾ ಚಳವಳಿಗೆ #ಸಮಾಜವಾದಿ_ಹೋರಾಟ ಮತ್ತು ಅದರ ಮುಂಚೂಣಿಯಲ್ಲಿದ್ದ #ಶಾಂತವೇರಿ_ಗೋಪಾಲಗೌಡರು, ಜಿ ಆರ್ ಜಿ ನಗರ್ ಕರ್ ಅವರಂಥ ಸ್ಥಳೀಯ ನಾಯಕರು ಮತ್ತು #ಡಾ_ರಾಮಮನೋಹರ_ಲೋಹಿಯಾ ಅವರಂಥ ರಾಷ್ಟ್ರೀಯ ನಾಯಕರು ನೀಡಿದ ಸೈದ್ಧಾಂತಿಕ ಮತ್ತು ತಾತ್ವಿಕ ಚೌಕಟ್ಟು ಕೂಡ ದೊಡ್ಡದು.ಇವತ್ತು ಹೈಫೈ ಮೊಬೈಲ್ ಹಿಡಿದು ಶೋಷಕ ವ್ಯವಸ್ಥೆಯ ಪರ ಟ್ರೋಲ್ ಮಾಡುವ ಮಂದಿ, ಕೇವಲ ಏಳು ದಶಕದ ಹಿಂದೆ ಕಾಲಿಗೆ ಮೆಟ್ಟು ಹಾಕಲಾಗದ, ಮೊಣಕಾಲಿನ ಕೆಳಗೆ ಪಂಚೆ ಬಿಡಲಾಗದ, ಭೂ ಒಡೆಯರ ಮುಂದೆ ತಲೆ ಎತ್ತಿ, ಕೈಕಟ್ಟಿ ನಿಲ್ಲಲಾಗದ ತಮ್ಮ ಪೂರ್ವಜರ ಎದೆಯಲ್ಲಿ ಸ್ವಾಭಿಮಾನದ ಬೀಜ ನೆಟ್ಟ ಈ ಅಜ್ಜ ಮತ್ತು ಕಾಗೋಡು ಚಳವಳಿಯನ್ನು ಒಮ್ಮೆ ನೆನಪು ಮಾಡಿಕೊಳ್ಳಲಿ..
ಸಮಾನತೆ, ವ್ಯಕ್ತಿ ಸ್ವಾತಂತ್ರ್ಯ, ಆಸ್ತಿ ಹಕ್ಕು, ದುಡಿಮೆಯ ಹಕ್ಕುನಂತಹ ಸಂವಿಧಾನಿಕ, ಪ್ರಜಾಪ್ರಭುತ್ವದ ಆಶಯಗಳನ್ನು ಅದರ ನೈಜ ಸದಾಶಯದೊಂದಿಗೆ ಜಾರಿಗೆ ತಂದ ಗಣಪತಿಯಪ್ಪ, ಇಂದು ನಮ್ಮ ನಡುವೆ ಇಲ್ಲ, ಆದರೆ ಅವರ ಹೋರಾಟದ ಫಲವಾಗಿ ಸಿಕ್ಕ ಭೂಮಿ ಕೊಟ್ಟ ಆರ್ಥಿಕ, ಸಾಮಾಜಿಕ, ರಾಜಕೀಯ ಬಲ ಮತ್ತು ಸ್ವಾಭಿಮಾನ ನಮ್ಮ ಇಂದಿನ ನೆಮ್ಮದಿಯ(ಕೆಲವೊಮ್ಮೆ ಇತಿಹಾಸ ಮರೆಯುವ ಧಿಮಾಕಿನ) ಬದುಕಿಗೆ ಕಾರಣ ಎಂಬುದನ್ನು ಮರೆಯದಿರೋಣ.
#ಉಳುವವನೇ_ಹೊಲದೊಡೆಯ ಎಂಬ ಭೂಸುಧಾರಣಾ ಕಾನೂನು ಮೂಲಕ ರಾಜ್ಯವಷ್ಟೇ ಅಲ್ಲದೇ ದೇಶಾದ್ಯಂತ ದುಡಿಯುವ ರೈತನ ಬೆವರಿಗೆ ಭೂಮಿಯ ಒಡೆತನದ ಫಲಕೊಟ್ಟ #ಕಾಗೋಡು_ಚಳವಳಿ_ಚಿರಾಯುವಾಗಲಿ#ಪೂರ್ವಾಸೂರಿಗಳ_ಹೋರಾಟ_ತೆರೆಮರೆಗೆ_ಸರಿಯದಿರಲಿ

