

ಭಾರತದ ನೌಕಾಪಡೆಯ 20 ಕ್ಕೂ ಹೆಚ್ಚು ಸಿಬ್ಬಂದಿಗಳಲ್ಲಿ ರೊರೊನಾ ಸೋಂಕು ಧೃಢ ಪಟ್ಟಿದೆ ಎಂದು ಬಹಿರಂಗವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ವಿಶ್ವಾಸನೀಯ ಮೂಲಗಳು ನೌಕಾಪಡೆಯ ಸಿಬ್ಬಂದಿಗಳಲ್ಲಿ ಕೆಲವರಲ್ಲಿ ಕೊರೊನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ನೌಕಾಪಡೆ ವಿಶೇಶ ಮುತುವರ್ಜಿ ವಹಿಸಿದೆ ಎಂದಿದ್ದಾರೆ.


ಅಮೇರಿಕಾ ನೌಕಾಪಡೆಯ ಸಿಬ್ಬಂದಿಗಳಿಗೂ ಕೊರೊನಾ ಸೋಂಕು ತಗುಲಿರುವ ಮಾಹಿತಿ ಬಹಿರಂಗವಾದ ಬೆನ್ನಲ್ಲೇ ಈ ವಿಚಾರ ಬಹಿರಂಗವಾಗಿದೆ. ಭಾರತೀಯ ನೌಕಾಪಡೆಯ ಕೊರೊನಾ ಸೋಂಕಿತರು ಮುಂಬೈನ ನೌಕಾಪಡೆಯ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಮನವಿ-
ಉತ್ತರಕನ್ನಡ ಜಿಲ್ಲೆಯ ಹಳಿಯಾಳದ ಕೆಲವು ಜನರು ಮುಂಬೈನ ಹಡಗಿನಲ್ಲಿ ಕೆಲಸ ಮಾಡುತಿದ್ದು ಅವರಿಗೆ ಸೂಕ್ತ ಆಹಾರ,ವೈದ್ಯಕೀಯ ವ್ಯವಸ್ಥೆ ಮಾಡುವಂತೆ ಮಾಜಿ ಸಚಿವ, ಶಾಸಕ ಆರ್.ವಿ ದೇಶಪಾಂಡೆ ಆಗ್ರಹಿಸಿದ್ದಾರೆ..
