
ಲಾಕ್‌ಡೌನ್ ನಡುವೆಯೇ ರೆಸಾರ್ಟ್‌ನಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಅನುವು ಮಾಡಿಕೊಟ್ಟ ಕಾರಣ ನಟ, ನಿರೂಪಕ ಅಕುಲ್ ಬಾಲಾಜಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ದೊಡ್ಡಬಳ್ಳಾಪುರ: ಲಾಕ್‌ಡೌನ್ ನಡುವೆಯೇ ರೆಸಾರ್ಟ್‌ನಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಅನುವು ಮಾಡಿಕೊಟ್ಟ ಕಾರಣ ನಟ, ನಿರೂಪಕ ಅಕುಲ್ ಬಾಲಾಜಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ ಜಾರಿಗೊಳಿಸಿರುವ ಲಾಕ್‌ಡೌನ್ ನಡುವೆ ಅಕುಲ್ ಬಾಲಾಜಿಗೆ ಸೇರಿದ ರೆಸಾರ್ಟ್‌ನಲ್ಲಿ ಮದುವೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಅಕುಲ್ ಒಡೆತನದ ಲಘುಮೇನಹಳ್ಳಿ ಬಳಿಯ ಸನ್‌ಶೈನ್ ರೆಸಾರ್ಟ್ ನಲ್ಲಿ ಏಪ್ರಿಲ್ 18ರಂದು ರಾತ್ರಿ 10.30ಕ್ಕೆ ಜನ ಸೇರಿದ್ದರು ಎನ್ನಲಾಗಿದ್ದು ಬೆಂಗಳೂರಿನಿಂದ 20ಕ್ಕೂ ಅಧಿಕ ಮಂದಿ ರೆಸಾರ್ಟ್‌ಗೆ ಬಂದು ಯಾವುದೇ ಅನುಮತಿ ಇಲ್ಲದೆ ಮದುವೆಗೆ ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ.
