ಅಂಕೋಲಾ ಇತಿಹಾಸ

ಬ್ರಿಟಿಷರ ಆಳ್ವಿಕೆಗೂ ಪೂರ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಅಂಕೋಲಾ ಪ್ರಾಂತ್ಯವೆಂದು ಕರೆಯುತ್ತಿದ್ದರು.ಅಂಕೋಲಾ ದ ಭಾವಿಕೇರಿ ಗ್ರಾಮದಲ್ಲಿ ಕ್ರಿ.ಶ 1362 ರ ವಿಜಯನಗರ ಬುಕ್ಕರಾಯನ ಕಾಲದ ಶಾಸನ ದೊರಕಿದ್ದು ಅದರಲ್ಲಿ ಅಂಕೋಲಾ ನಾಡು ಎಂದು ನಮೂದಿಸಲಾಗಿದೆ ಅಂದರೆ ವಿಜಯನಗರ ಕಾಲದ ಪ್ರಾಂತ್ಯವಾಗಿತ್ತು,ಅಂಕೋಲೆಯ ಕೋಟೆಯೂ ಸಹ ಅದೇ ಕಾಲಕ್ಕೆ ಸೇರಿದ್ದು.ವಿಜಯನಗರ ಅರಸರು ಅರಬ್ ದೇಶಗಳಿಂದ ಕುದುರೆಗಳನ್ನು ಅಂಕೋಲೆಯ ಮೂಲಕ ತರಿಸಿಕೊಳ್ಳುತ್ತಿದ್ದರು ಅವುಗಳಿಗೆ ಅಂಕೋಲೆಯ ಜಮಗೊಡಿನಲ್ಲಿ ತರಭೇತಿಯನ್ನು ನೀಡಲಾಗುತ್ತಿತ್ತು.ಅಂಕೋಲೆಯ ನಾಡವರು ವಿಜಯನಗರದ ಅಶ್ವದಳ ಸೈನಿಕರಾಗಿದ್ದರು.

೧೫೬೫ರ ತಾಳಿಕೊಟೆ ಯುದ್ಧ ದಿಂದ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಅಂಕೋಲಾ ಕೋಟೆಯೂ ಗೇರುಸೊಪ್ಪೆಯ ಜೈನ ಅರಸರ ಆಳ್ವಿಕೆಗೆ ಒಳಪಟ್ಟಿತು.ಅ ಕಾಲದಲ್ಲಿ ಪೋರ್ಚುಗೀಸರು ಕರಾವಳಿ ಭಾಗದಲ್ಲಿ ಆಗಾಗ ಆಕ್ರಮಣ ನಡೆಸುತ್ತಿದ್ದು ಅದನ್ನು ಗೆರುಸೊಪ್ಪೆಯ ರಾಣಿ ಚೆನ್ನಭೈರಾದೇವಿ ಯಶಸ್ವಿಯಾಗಿ ಎದುರಿಸಿದಳು.

ಗೆರುಸೊಪ್ಪೆಯ ಸೈನಿಕರಾಗಿದ್ದ ನಾಡವರು ಗೋಕರ್ಣವನ್ನು ಆಕ್ರಮಿಸಿಕೊಂಡಿರುವ ಪೋರ್ಚುಗಿಸರನ್ನು ಓಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.ಕೆಳದಿಯ ನಾಯಕರು ಗೇರು ಸೋಪ್ಪೆಯನ್ನು ಗೆದ್ದುಕೊಂಡ ನಂತರ ಅಂಕೋಲಾ ಕೋಟೆಯು ಕೆಳದಿಯ ನಾಯಕರ ಆಳ್ವಿಕೆಗೆ ಒಳಪಟ್ಟಿತು(೧೬೪೫ ರಿಂದ ೧೬೬೦ )ಹಳೆಪೈಕರು (ನಾಮಧಾರಿಗಳು)ಕೆಳದಿ ರಾಜ್ಯದ ಸೈನಿಕರಾಗಿದ್ದರು.೧೬೬೦ ರ ನಂತರ ಅಂಕೋಲಾ ಕೋಟೆಯು ಬಿಜಾಪುರದ ಸುಲ್ತಾನನ ಆಳ್ವಿಕೆಗೆ ಒಳಪಟ್ಟಿತು.೧೬೬೪ರಲ್ಲಿ ಅಂಕೋಲಾ ಕೋಟೆಯೂ ಬಿಜಾಪುರ ಸುಲ್ತಾನನ ಸುಬೇದಾರನಾದ ರುಸ್ತುಂ ಇ ಜಮಾನ್ ನ ಆಳ್ವಿಕೆಗೆ ಒಳ ಪಟ್ಟಿತ್ತು. (ಅಧಾರ Shivaji and his Times by PROF. JADUNATH SARKAR.page no. 271)

ಸಹ್ಯಾದ್ರಿ ಪರ್ವತದ ಗುಂಟ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದ್ದ ಶಿವಾಜಿ ಪೊಂಡ ಕೋಟೆಯನ್ನು ಬಿಜಾಪುರದ ಸುಲ್ತಾನನಿಂದ ಗೆದ್ದ ನಂತರ ಅಂಕೋಲಾ,ಕಡವಾದ ಹಾಗೂ ಶಿವೆಶ್ವರದ ಕೋಟೆಗಳನ್ನು ವಶಪಡಿಸಿಕೊಳ್ಳಲು ಹವಣಿಸುತ್ತಿದ್ದ ಈ ಉದ್ದೇಶಕ್ಕಾಗಿ ಅಂಕೋಲೆಯ ಹತ್ತಿರದ ಗುಡ್ಡದಲ್ಲಿ ಕೋಟೆಯನ್ನು ನಿರ್ಮಿಸುತ್ತಾನೆ (ಈ ಕೋಟೆ ಇರುವ ಗುಡ್ಡವನ್ನು ಜನರು ಗಡದ ಗುಡ್ಡ ಎಂದು ಕರೆಯುತ್ತಾರೆ ,ಇಲ್ಲಿ ವಿಶಾಲವಾದ ಕೋಟೆ ,ಶಿವನ ದೇವಾಲಯ ಹಾಗೂ ನೂರಾರು ಮನೆಗಳ ಅವಶೇಷಗಳಿವೆ).ನಂತರ ಶಿವಾಜಿ ೧೬೬೫ರಲ್ಲಿ ಅಂಕೋಲಾ ಕೋಟೆಯನ್ನು ಗೆದ್ದುಕೊಳ್ಳುತ್ತಾನೆ ಹಾಗೂ ಈ ಪ್ರದೇಶವನ್ನು ಅಂಕೋಲಾ ಸುಭ (ಪ್ರಾಂತ್ಯ) ವೆಂದು ಹೆಸರಿಸುತ್ತಾನೆ (ಅಧಾರ Shivaji and his Times by PROF. JADUNATH SARKAR.page no. 274-276)

ಆದರೆ ೧೬೬೫ರ ಪುರಂದರ ಒಪ್ಪಂದದಂತೆ ಶಿವಾಜಿ ಓರಂಗಜೆಬನಿಗೆ 23 ಕೋಟೆಗಳನ್ನು ಬಿಟ್ಟು ಕೊಡಬೇಕಾಗುತ್ತದೆ ಅದರಲ್ಲಿ ಅಂಕೋಲಾ ಕೋಟೆಯು ಸೇರಿರುತ್ತದೆ (ಅಧಾರ Shivaji and his Times by PROF. JADUNATH SARKAR.page no. 143) ಓರಂಗಜೆಬನ ಸೈನ್ಯವು ಹಿಂದಿರುಗಿದ ಮೇಲೆ ಅಂಕೋಲಾ ಕೋಟೆಯೂ ಪುನಃ ಬಿಜಾಪುರ ಸುಲ್ತಾನನ ಆಳ್ವಿಕೆಗೆ ಒಳಪಡುತ್ತದೆ.ಆಗ್ರಾದಿಂದ ತಪ್ಪಿಸಿಕೊಂಡ ಶಿವಾಜಿ ಪುನಃ ತಾನು ಕಳೆದುಕೊಂಡ ಕೋಟೆಗಳನ್ನು ಒಂದೊಂದಾಗಿ ಗೆಲ್ಲಲು ತೊಡಗುತ್ತಾನೆ ೧೬೭೫ರಲ್ಲಿ (ಎಪ್ರಿಲ್24ರಿಂದ ಮೇ 15 ) ಶಿವಾಜಿ ೩ ಸಾವಿರ ಕಾಲಾಳು ಹಾಗೂ ಅಷ್ಟೇ ಸಂಖ್ಯೆಯ ಕುರುರೆಗಳ ಸಹಾಯದಿಂದ ಅಂಕೋಲಾ ಕೋಟೆಯನ್ನು ಮುತ್ತುತ್ತಾನೆ.ಬಿಜಾಪುರದ ಸುಬೇದಾರನಾದ ಇನಾಯತ ಖಾನನು ೫೦ ತೋಪುಗಳ ಸಹಾಯದಿಂದ ಕೋಟೆಯನ್ನು ರಕ್ಷಿಸಿ ಕೊಳ್ಳುತ್ತಿರುತ್ತಾನೆ ಅನೇಕ ದಿನಗಳ ಹೋರಾಟದ ನಂತರ ಕೋಟೆಯೂ ಶಿವಾಜಿಯ ವಶವಾಗುತ್ತದೆ.(ಅಧಾರ Shivaji the Great by Dr.Balakrishna page no.105)ಶಿವಾಜಿಯು ಹೋರಾಡಿದ ಒಟ್ಟು ೨೨೩ ಯುದ್ದಗಳಲ್ಲಿ ಅಂಕೋಲೆಯ ಯುದ್ದವು 161 ನೆ ಯುದ್ದವಾಗಿ ನಮುದಿಸಲ್ಪತ್ತಿದೆ (ಅಧಾರ http://www.scribd.com/Battles of Shivaji Maharaj)

ಶಿವಾಜಿಯು ಪಟ್ಟಾಭಿಷೇಕದ ಸಮಯದಲ್ಲಿ ತನ್ನ ಸಾಮ್ರಾಜ್ಯವನ್ನು ಹತ್ತು ಪ್ರಾಂತ್ಯಗಳನ್ನಾಗಿ ವಿಂಗಡಿಸಿದ್ದು ಅದರಲ್ಲಿ ಅಂಕೋಲಾ ೧೦ನೆ ಪ್ರಾಂತ್ಯ ವಾಗಿತ್ತು ಇದರಲ್ಲಿ 7 ಕೋಟೆಗಳು ಬರುತ್ತಿದ್ದು ವಾರ್ಷಿಕ ಒಂದು ಲಕ್ಷ ಹೊನ(ಚಿನ್ನದ ನಾಣ್ಯ)ದಷ್ಟು ಆದಾಯ ಬರುತ್ತಿತ್ತು (ಅಧಾರ Shodhganga; Provincial divisions And Administration of Maratha province During 17th to 18th Centuries page no.84)೧೭೧೪ ರಲ್ಲಿ ಬಾಲಾಜಿ ವಿಶ್ವನಾಥ ಮೊಗಲದೊರೆಯೊಂದಿಗೆ ಒಪ್ಪಂದ ಮಾಡಿಕೊಂಡು 34 ಪ್ರಾಂತ್ಯಗಳ ಸ್ವರಾಜ್ಯಕ್ಕೆ ಮಾನ್ಯತೆ ಪಡೆಯುತ್ತಾನೆ ಇದನ್ನು ಸ್ವರಾಜ್ಯಚೆ ಸನದು ಅನ್ನುತ್ತಾರೆ ಅ 34 ಪ್ರಾಂತ್ಯಗಳಲ್ಲಿ ಅಂಕೋಲಾ ಪ್ರಾಂತ ಕೂಡ ಸೇರಿತ್ತು ,ಇ ಪ್ರಾಂತ್ಯದಲ್ಲಿ 5 ತಾಲೂಕಗಳಿದ್ದವು. ೧೭೩೪ರಲ್ಲಿ ಸತಾರ ಹಾಗೂ ಕೊಲ್ಹಾಪುರ ಎಂದು ರಾಜ್ಯ ವಿಭಜನೆಯಾದಾಗ ಸಾಹು ಅಂಕೋಲಾ ಪ್ರಾಂತವನ್ನು ಕೊಲ್ಹಾಪುರ ಸಂಸ್ಥಾನಕ್ಕೆ ನಿಡಿರುತ್ತಾನೆ.

ಮುಂದೆ ಪೇಶ್ವೆಗಳು ಉತ್ತರ ಭಾರತದಲ್ಲಿ ಸಾಮ್ರಾಜ್ಯ ವಿಸ್ತರಿಸಿರುವದರಿಂದ ದಕ್ಷಿಣದ ಕಡೆ ಗಮನ ಹರಿಸಲಿಲ್ಲ ಆಗ ಅಂಕೋಲಾ ಕೋಟೆಯೂ ಸೋಂದೆ ರಾಜರ ಆಳ್ವಿಕೆಗೆ ಒಳ ಪಟ್ಟಿತು.ಕುಮಾರ ಪಂಥರು (ಕುಮಾರ ಪೈಕರು )ಸೋಂದೆ ರಾಜ್ಯದ ಸೈನಿಕರಾಗಿದ್ದರು.1764 ರಲ್ಲಿ ಮೈಸೂರಿನ ಹೈದರ ಅಲಿ ಕೆಳದಿ ಹಾಗೂ ಸೊಂಧೆ ಸಂಸ್ಥಾನಗಳನ್ನು ವಶಪಡಿಸಿಕೊಂಡಾಗ ಅಂಕೋಲಾ ಕೋಟೆ ಮೈಸೂರು ಸಂಸ್ಥಾನಕ್ಕೆ ಸೇರುತ್ತದೆ.ಮೂರನೇ ಮೈಸೂರು ಯುದ್ದದ ನಂತರ ಟೀಪು ಸುಲ್ತಾನ ಅಂಕೋಲಾ ಪ್ರಾಂತ್ಯವನ್ನು ೧೭೯೨ ರಲ್ಲಿ ಮರಾಠರಿಗೆ ಬಿಟ್ಟು ಕೊಡುತ್ತಾನೆ.೧೮೧೯ರ ಮೂರನೇ ಆಂಗ್ಲೋ ಮರಾಠ ಯುದ್ದದ ತನಕ ಅಂಕೋಲಾ ಪ್ರಾಂತ್ಯವು ಪುನಾ ದ ಪೇಶ್ವೆಯ ಆಳ್ವಿಕೆಗೆ ಒಳಪಟ್ಟಿರುತ್ತದೆ.೧೮೧೯ರ ನಂತರ ಬ್ರಿಟಿಷರ ಕೈವಶವಾದ ಮೇಲೆ ಅವರು ಸಂಪೂರ್ಣ ಕರ್ನಾಟಕ ಕರಾವಳಿ ಪ್ರದೇಶವನ್ನು ಕೆನರಾ ಎಂದು ಕರೆದರು ನಂತರ ಅದನ್ನು ಉತ್ತರ ದಕ್ಷಿಣ ಎಂದು ವಿಂಗಡಿಸಿ ಉತ್ತರ ಕನ್ನಡಕ್ಕೆ ಸಮುದ್ರ ದಡದಲ್ಲಿ ಕಾರವಾರ ಎನ್ನುವ ಹೊಸ ಊರನ್ನು ಸೃಷ್ಟಿಸಿ ಅದನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿದರು.

– ದೇವಿದಾಸ ಪ್ರಭು

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *