

ಕೋವಿಡ್-19 ಸಂಬಂಧಪಟ್ಟಂತೆ ಹೊರ ರಾಜ್ಯದಿಂದ ಬರುವವರು ಪಾಸ್ ಪಡೆದು ಬರಬೇಕು. ಒಂಮ್ಮೆ ಪಾಸ್ ಪಡೆಯದೇ ಇದ್ದಲ್ಲಿ ನೇರವಾಗಿ ನಮಗೆ ಮಾಹಿತಿ ನೀಡಬೇಕು. ಹಾಗೆಯೇ ಮಾಡದೇ ಇದ್ದಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು. ಒಂದೊಮ್ಮೆ ಅವರು ಮನೆಗೆ ಹೋಗಿ ಬಂದರೆ ಮನೆಯವರ ಮೇಲೂ ಪ್ರಕರಣ ದಾಖಲಿಸಲಾಗುವುದು. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವಿಕೆ ಈ ಎಲ್ಲ ಕಾನೂನು ಸಂಬಂಧಿಸಿದಂತೆ ಯಾವುದೇ ರಾಜಿ ಇಲ್ಲ. ಸಾರ್ವಜನಿಕರು ಸಹಕರಿಸಬೇಕು ಎಂದರು. ಈ ಸಂದರ್ಭದಲ್ಲಿ ಸಹಾಯಕ ಕಮೀಷನರ್ ಡಾ|| ಈಶ್ವರ ಉಳ್ಳಾಗಡ್ಡಿ, ತಹಶೀಲ್ದಾರ ಮಂಜುಳಾ ಭಜಂತ್ರಿ ಮುಂತಾದವರು ಇದ್ದರು.
ಸಿದ್ದಾಪುರಪಟ್ಟಣದ ತಿಮ್ಮಪ್ಪ ನಾಯಕ ವೃತ್ತದ ಬಳಿ ಸ್ವಂತ ಮನೆಯಲ್ಲಿ ಕಾನೂನು ಬಾಹೀರವಾಗಿ ಪಟಾಕಿ ಮತ್ತು ಸ್ಪೋಟಕ ಸಾಮಗ್ರಿಗಳನ್ನು ದಾಸ್ತಾನು ಮಾಡಿದ್ದ ಆರೋಪದ ಮೇಲೆ ಜುಬೇರ ಅಬ್ದುಲ್ ಸಾಬ್ ಎನ್ನುವಾತನನ್ನು ಬಂಧಿಸಲಾಗಿದೆ ಎಂದು ಡಿ.ವೈ.ಎಸ್.ಪಿ ಜಿ.ಟಿ ನಾಯ್ಕ ತಿಳಿಸಿದರು.

ಅವರು ಮೇ 16 ರಂದು ಬೆಂಕಿ ಅವಘಡ ಸಂಭವಿಸಿದ ಮನೆ ಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರಿಗೆ ವಿವರ ನೀಡಿದರು.
ಸ್ಪೋಟಕ ಸಾಮಗ್ರಿ ಹಾಗೂ ನಿಯಂತ್ರಣ ಕಾಯ್ದೆ ಅನುಸಾರ ಪಟಾಕಿ ಹಾಗೂ ಸ್ಪೋಟಕ ಸಾಮಗ್ರಿಗಳನ್ನು ಜನವಸತಿ ಪ್ರದೇಶದಲ್ಲಿ ದಾಸ್ತಾನು ಇಡಬಾರದು. ವಿಶೇಷ ಸಂದರ್ಭದಲ್ಲಿ ಸರ್ಕಾರದ ಅನುಮತಿ ಪಡೆದು ಮಾರಾಟ ಮಾಡಿದ ನಂತರ ಸಮರ್ಪಕವಾದ ಸ್ಥಳದಲ್ಲಿ ಅದನ್ನು ಇಡಬೇಕು. ಸರ್ಕಾರದಿಂದ ಅಧಿಕೃತವಾಗಿ ಲೈಸನ್ಸ್ ಪಡೆದು ಕಾಲಕಾಲಕ್ಕೆ ಕಾಯ್ದೆ ಅನುಸಾರ ಸರ್ಕಾರಕ್ಕೆ ಮಾಹಿತಿ ನೀಡಬೇಕು. ಈ ಸ್ಥಳದಲ್ಲಿ ಬೇಜವ್ದಾರಿ ಮತ್ತು ಕಾನೂನು ಬಾಹಹೀರವಾಗಿ ಪಟಾಕಿ ಮತ್ತು ಸ್ಫೋಟಕ ಸಾಮಗ್ರಿಗಳನ್ನು ಸಂಗ್ರಹಿಸಿ ಇಡಲಾಗಿದ್ದು ಪರಿಶೀಲನೆ ವೇಳೆ ಗಮನಕ್ಕೆ ಬಂದಿದೆ. ಅಲ್ಲದೇ ಸರ್ಕಾರದಿಂದ ಅಧೀಕೃತವಾಗಿ ಲೈಸನ್ಸ್ ಹೊಂದಿರದೆ ಕೆಲವು ವರ್ಷಗಳ ಹಿಂದೆ ತಿರಿ ಹೋದ ತಂದೆಯ ಹೆಸರಿನಲ್ಲಿ ಪಟಾಕಿ ಮಾರಾಟ ಮಾಡಿದ್ದು ತಿಳಿದು ಬಂದಿದೆ. ಅಲ್ಲದೇ ಸಂಗ್ರಹಿಸಿಟ್ಟ ಸಾಮಗ್ರಿಗಳ ಕುರಿತಂತೆ ಕಾನೂನು ವಿಧಾನ ಅನುಸರಿಸಿಲ್ಲ. ಈ ಎಲ್ಲದರ ಹಿನ್ನೆ ಲೆ ಯಲ್ಲಿ ಜುಬೇರ ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಹಾಯಕ ಕಮೀಷನರ್ ಡಾ|| ಈಶ್ವರ ಉಳ್ಳಾಗಡ್ಡಿಯವರ ಆದೇಶ ಮೇರೆಗೆ ತಾಲ್ಲೂಕಿನ ಎಲ್ಲ ಪಟಾಕಿ ವ್ಯಾಪಾರಿಗಳ ಲೈಸನ್ಸ್ ನ್ನು ಕೂಡಲೇ ರದ್ದುಗೊಳಿಸಲಾಗಿದೆ. ಆ ವ್ಯಾಪಾರಸ್ಥರು ಸಂಬಂಧಿಸಿದ ಅಧಿಕಾರಿಗಳಿಗೆ ತಮ್ಮ ಲೈಸನ್ಸ್ ಇನ್ನಿತರ ಕಾಗದ ಪತ್ರಗಳನ್ನು ಸಲ್ಲಿಸಲು ಸೂಚನೆ ನೀಡಲಾಗುವುದು. ಅವರ ಲೈಸನ್ಸ್ ಕುರಿತು ಪುನರ್ ಪರಿಶೀಲನೆ ನಡೆಸಿ ಸೂಕ್ತ ಎಂದು ಕಂಡು ಬಂದಲ್ಲಿ ಲೈಸನ್ಸ್ ನೀಡಲಾಗುವುದು. ಶಿರಸಿ ಉಪವಿಭಾಗದ ಎಲ್ಲಾ ತಾಲ್ಲೂಕುಗಳ ಪಟಾಕಿ ವ್ಯಾಪಾರಿಗಳಿಗೆ ಈ ಕುರಿತು ಎಚ್ಚರಿಕೆ ನೀಡುತ್ತಿದ್ದು ಅವರು ಕಾನೂನು ಪ್ರಕಾರ ತಮ್ಮ ವೈವಾಟು ನಡೆಸಬೇಕು. ಕಾನೂನು ಪಾಲನೆಯಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಲೈಸನ್ಸ್ ರದ್ದುಪಡಿಸಲಾಗುವುದು.ಸಾರ್ವಜನಿಕರು ಈ ಘಟನೆಯ ಕುರಿತಂತೆ ಯಾವುದೇ ಆತಂಕ ಪಡುವುದು ಬೇಡ ಎಂದರು.
