

ರಾಜ್ಯ,ದೇಶ,ಉಪಖಂಡ,ಪ್ರಪಂಚದಾದ್ಯಂತ ಕೋವಿಡ್ 19 ಆರ್ಭಟ ಮುಂದುವರಿದಿದೆ. ರಾಜ್ಯದಲ್ಲಿ ಶುಕ್ರವಾರ ಅತಿಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಈ ವರೆಗಿನ ಕರೋನಾ ಇತಿಹಾಸದಲ್ಲಿ ಕರ್ನಾಟಕದಲ್ಲಿ ಇಂದು 200 ಜನರಿಗಿಂತ ಹೆಚ್ಚಿನ ಜನರಲ್ಲಿ ಕರೋನಾ ದೃಢಪಟ್ಟಿದೆ.


ಉತ್ತರಕನ್ನಡ ಜಿಲ್ಲೆಯ ಒಟ್ಟೂ 66 ಪ್ರಕರಣಗಳಲ್ಲಿ ಇಂದು ಗುಣಮುಖರಾಗಿ ಮನೆಯ ದಾರಿ ಹಿಡಿದ 20 ಜನರು ಸೇರಿ ಒಟ್ಟೂ 32 ಜನರ ಕರೋನಾ ಸೋಂಕು ವಾಸಿಯಾಗಿದೆ. ಈಗ ಉತ್ತರಕನ್ನಡ ಜಿಲ್ಲೆಯಲ್ಲಿ 66 ಕರೋನಾ ಪ್ರಕರಣಗಳು ಮಾತ್ರ ಸಕ್ರೀಯವಾಗು ಉಳಿದಂತಾಗಿದೆ. ಕರೋನಾದ ಕೇಂದ್ರ ಎನಿಸಿಕೊಂಡ ಭಟ್ಕಳದಲ್ಲಿ ಪೊಲೀಸ್ ಪೇದೆಯೊಬ್ಬರಿಗೆ ಕರೋನಾ ಬಾಧಿಸಿದ ವರ್ತಮಾನ ಸುದ್ದಿಮಾಡಿದೆ.
ಈ ರಗಳೆ, ರೋಗಭೀತಿ, ಲಾಕ್ ಡೌನ್- ಕಫ್ರ್ಯೂ
ಗಳ ನಡುವೆ ವಿಶ್ವದಾದ್ಯಂತ ಮುಸ್ಲೀಂ ಬಾಂಧವರು ಪವಿತ್ರ ರಂಜಾನ್ ಆಚರಿಸುತಿದ್ದಾರೆ.
ಉತ್ತರಕನ್ನಡ ಜಿಲ್ಲೆಯಲ್ಲಿ ರಂಜಾನ್ ಆಚರಣೆ ಸೋಮುವಾರ ಎನ್ನುವುದು ಪ್ರಕಟವಾಗಿದೆ. ರವಿವಾರ ರಂಜ್ಜಾನ್ ಆಚರಣೆಯ ಸಾಧ್ಯತೆ ಹಿನ್ನೆಲೆಯಲ್ಲಿ ಮೀನು-ಮಾಂಸದ ಅಂಗಡಿಗಳು ಇಂದು ರಾತ್ರಿಯವರೆಗೂ ತೆರೆದಿದ್ದವು. ರಾತ್ರಿಯ ವೇಳೆ ರಮ್ಜಾನ್ ಆಚರಣೆ ಸೋಮುವಾರ ಎಂದು ಪ್ರಕಟವಾದ ನಂತರ ರವಿವಾರದ ಕಫ್ರ್ಯೂ ನಂತರ ಸೋಮವಾರ ಎಲ್ಲಾ ಅನುಕೂಲತೆಗಳೊಂದಿಗೆ ಹಬ್ಬ ಆಚರಿಸಲು ಅನುಕೂಲವಾಗಿದೆ.
ಕರೋನಾ ಜನಾಭಿಪ್ರಾಯ ಭಾಗ-02-
20 ಲಕ್ಷ ಕೋಟಿ ಪ್ಯಾಕೇಜ್ ಏನಂತಾರೆ ಜನ-
ಇಲ್ಲಿವೆ ಜನರ ಅಭಿಪ್ರಾಯ
ಕರೋನಾ ದಿಂದ ಜರ್ಜರಿತವಾಗಿರುವ ದೇಶ ಮತ್ತು ದೇಶದ ಆರ್ಥಿಕತೆ ಉತ್ತೇಜಿಸಲು 20 ಲಕ್ಷ ಕೋಟಿ ಪ್ಯಾಕೇಜ್ ನೀಡಿರುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ಬಗ್ಗೆ ನಾಲ್ಕು ಹಂತಗಳಲ್ಲಿ ಹಣಕಾಸು ಸಚಿವರು ವಿಭಾಗ ಮಾಡಿದ ಪ್ಯಾಕೇಜ್ ವಿವರಗಳನ್ನು ನೀಡಿದ್ದಾರೆ. ಮಾಧ್ಯಮಗಳ ಪ್ರಚಾರ, ಸಚಿವರು, ಶಾಸಕರ ವಿವರಣೆಗಳ ಮಧ್ಯೆ ಕೂಡಾ ಬಹುತೇಕ ಜನಸಾಮಾನ್ಯರಿಗೆ ಈ ಪ್ಯಾಕೇಜ್ ಸರಿಯಾಗಿ ಅರ್ಥವಾಗಿಲ್ಲ ಎನ್ನುವ ವಾಸ್ತವ ಅಭಿಪ್ರಾಯ ಸಂಗ್ರಹದ ಸಮಯದಲ್ಲಿ ನಮ್ಮ ಗಮನಕ್ಕೂ ಬಂತು.
ಹೆಚ್ಚಿನವರು ಈ ಪ್ಯಾಕೇಜ್ ಗುಟ್ಟುಗಳ ಬಂಡಲ್ ಎಂದು ಲೇವಡಿಮಾಡಿದರೆ ಕೆಲವರು ಇದು ಸ್ಫಷ್ಟತೆ-ಪಾರದರ್ಶಕತೆ ಇಲ್ಲದ ಮೋದಿಯವರ ಸುಳ್ಳಿನ ಮುಂದುವರಿದ ಕಂತೆ ಎಂದರು.
ಕೆಲವರು ಪಕ್ಷದ ಕಾರಣಕ್ಕೆ ನಾವು ಈ ಪ್ಯಾಕೇಜ್ ಸಮರ್ಥಿಸಿಕೊಳ್ಳಬೇಕು ಬಿಟ್ಟರೆ ಈ ಕ್ಷಣದಲ್ಲಿ ಅನುಕೂಲ, ಲಾಭ ಹಾಗಿರಲಿ ನಮಗೂ ಅರ್ಥಮಾಡಿಕೊಳ್ಳದ ಒಗಟು ಈ ಪ್ಯಾಕೇಜ್ ಎಂದು ತಮ್ಮ ಅಸಮಾಧಾನ ಹೇಳಿಕೊಂಡರು. ಕೆಲವರು ಮಾತ್ರ ಇದು ದೀರ್ಘಕಾಲಿಕ ಲಾಭದ ದೂರದ ಆಲೋಚನೆಯ ಬೃಹತ್ ಪ್ಯಾಕೇಜ್ ಎಂದು ಸಮರ್ಥಿಸಿದರು. ಈ ಪ್ಯಾಕೇಜ್, ಕೇಂದ್ರಸರ್ಕಾರದ ಕೋವಿಡ್ ನಿರ್ವಹಣಾ ವಿಧಾನ ಎಲ್ಲವೂ ಟೀಕೆಗೆ ಒಳಗಾಗಿರುವ ಈ ಸಂದರ್ಭದಲ್ಲಿ ನಮಗೆ ಸಿಕ್ಕ ಪ್ರತಿಕ್ರೀಯೆಗಳಲ್ಲಿ ಕೆಲವನ್ನು ಸಂಕ್ಷಿಪ್ತವಾಗಿ ಇಲ್ಲಿ ಪ್ರಕಟಿಸಲಾಗಿದೆ.
20 ಲಕ್ಷ ಕೋಟಿ ಜನಸಾಮಾನ್ಯ ಊಹಿಸಲಾಗದ ಬೃಹತ್ ಪ್ಯಾಕೇಜ್ ಇದು, ಇದರಲ್ಲಿ 136 ಕೋಟಿ ಭಾರತದ ಜನಸಂಖ್ಯೆಗೆ ತಲಾ 1 ಕೋಟಿ ಕೊಟ್ಟದ್ದರೆ ಜನಸಾಮಾನ್ಯ ಕೂಡಾ ಕುಬೇರನಾಗುತಿದ್ದ.- ವೀರಭದ್ರಗೌಡ ವಡಗೇರಿ
ಉಜ್ವಲ ಯೋಜನೆಯ ಗ್ಯಾಸ್ ಫಲಾನುಭವಿಗಳಿಗೆ ಮಾತ್ರ ಉಚಿತ ಅನಿಲ ಸೌಲಭ್ಯ, ಜನ್ ಧನ್ ಖಾತೆಗೆ ಮಾತ್ರ ಹಣ ಇವೆಲ್ಲಾ ಅಸಮರ್ಪಕ. ಉಜ್ವಲ ಗ್ಯಾಸ್ ಫಲಾನುಭವಿಗಳು, ಜನಧನ್ ಖಾತೆದಾರರು ಮಾತ್ರ ಬಡವರೆ?. ಜಾಬ್ ಕಾರ್ಡ್‍ಗಾಗಿ ಜನಧನ್ ಗಿಂತ ಮೊದಲು ಬ್ಯಾಂಕ್ ಪಾಸ್ ಬುಕ್, ಖಾತೆ ಹೊಂದಿದವರಿಗೆ ಹಣ ನೀಡದಿದ್ದರೆ ಕೇಂದ್ರದ ಯೋಜನೆಗಳು ಸರ್ಕಾರದ ಯೋಜನೆಗಳಲ್ಲ, ಪಕ್ಷದ ಜೋಜನೆಗಳು ಎಂದಾಗುತ್ತವೆ. ಕರೋನಾ ಸಂಕಷ್ಟದ ಸಮಯದಲ್ಲಿ ಕೇಂದ್ರದ ಫಲಾನುಭವಿಗಳಿಗೊಂದು, ರಾಜ್ಯದ ಯೋಜನೆಗಳ ಫಲಾನುಭವಿ ಬಡವರಿಗೊಂದು ತಾರತಮ್ಯ ಮಾಡುವ ಸರ್ಕಾರದ ನೀತಿ ಬಡವರ ವಿರೋಧಿ ಧೋರಣೆ ಎನಿಸಿಕೊಳ್ಳುತ್ತದೆ. -ವೀರಭದ್ರ ನಾಯ್ಕ ಮಳಲವಳ್ಳಿ, ರಾಜ್ಯ ರೈತ ಸಂಘದ ತಾಲೂಕಾಧ್ಯಕ್ಷ.
20 ಲಕ್ಷ ಕೋಟಿ ಕಣ್ಣೊರೆಸುವ ತಂತ್ರ ಕೇಂದ್ರ ಸರ್ಕಾಋ ಘೋಷಣೆಯ ಸರ್ಕಾರವಾಗಿದೆಯೇ ಹೊರತು, ಅನುಷ್ಠಾನದ ಸರ್ಕಾರವಾಗಿಲ್ಲ ಬಡ ಚಾಲಕರು, ಸಣ್ಣ-ಪುಟ್ಟ ವೃತ್ತಿ ನಿರತರಿಗೆ ಅಧೀಕೃತ ಸರ್ಕಾರಿ ನೋಂದಣಿಯಿಲ್ಲದಿದ್ದರೂ ಮಾಸಿಕ ಪರಿಹಾರ ನೀಡಬೇಕು. 20 ಕೋಟಿ ಪ್ಯಾಕೇಜ್ ಕರೋನಾ ಕಾಲದ ಸುಳ್ಳು. ಈ ಪ್ಯಾಕೇಜ್ ಗಿಂತ ಹಿಂದಿನ ಘೋಷಣೆಗಳ ಅನುಷ್ಠಾನ, ಸಾಲ ಮನ್ನಾದಂಥ ವಿದಾಯಕ ಯೋಜನೆಗಳನ್ನು ಕೊಡಬೇಕಿತ್ತು. -ಭೀಮಣ್ಣ ನಾಯ್ಕ, ಡಿ.ಸಿ.ಸಿ. ಅಧ್ಯಕ್ಷ
ಇದು ದೀರ್ಘ ಕಾಲಿಕ ಪರಿಣಾಮದ ಪ್ಯಾಕೇಜ್, ಇಂಥ ಬೃಹತ್ ಪ್ಯಾಕೇಜ್ ನಿಂದ ಈ ಕ್ಷಣದ ಲಾಭ ನಿರೀಕ್ಷಿಸಬಾರದು. -ನಾಗರಾಜ್ ನಾಯ್ಕ, ಜಿ.ಪಂ. ಸದಸ್ಯ.
20 ಲಕ್ಷ ಕೋಟಿ ಪ್ಯಾಕೇಜ್ ನಿಂದ ಧೀರ್ಘ ಕಾಲಿಕ ಲಾಭ ಆಗಬಹುದು, ದಾಖಲೆ, ಗ್ಯಾರಂಟಿ ಇಲ್ಲದೆ ಹೆಚ್ಚುವರಿ ಕಡಿಮೆ ಬಡ್ಡಿದರದ ಸಾಲ, ತೆರಿಗೆ ವಿನಾಯಿತಿ, ಜಿ.ಎಸ್.ಟಿ., ತೆರಿಗೆ ಭರಣಕ್ಕೆ ಸಮಯಾವಕಾಶ ಇವುಗಳಿಂದ ಚಿಕ್ಕ ಉದ್ದಿಮೆಗಳಿಗೆ ಅನುಕೂಲವಾಗಿದೆ. -ವಿಜಯ ಪ್ರಭು, ಉದ್ಯಮಿ
20 ಲಕ್ಷ ಕೋಟಿ ಪ್ಯಾಕೇಜ್ ಸರ್ಕಾರದ ವ್ಯವಹಾರ ಚತುರತೆಗೆ ಸಾಕ್ಷಿ. ಇದು ಅಂಕಿ-ಅಂಶಗಳ ಮ್ಯಾಜಿಕ್ ಕಣ್ಣೊರೆಸುವ ತಂತ್ರ. ಇದರಿಂದ ಲಾಭ ಆಗುವ ನಿರೀಕ್ಷೆ ಇಲ್ಲ. ಜನರ ಅನಿವಾರ್ಯತೆಯ ಸಮಯದಲ್ಲಿ ಸಾಲ ಕೊಡುವ ಸ್ಕೀಮ್ ಮಾದರಿಯ ಪ್ಯಾಕೇಜ್ ನಿಂದ ಜನರು ಬಡತನ ರೇಖೆ ದಾಟಿ ಶ್ರೀಮಂತರಾಗುವ ಕೇಂದ್ರದ ಘೋಷಣೆ ಯಶಸ್ವಿಯಾದರೆ ಜನತೆ ಮೋದಿಯವರನ್ನು ದೇವರಂತೆ ಕಾಣುತ್ತಾರೆ. ಸ್ಫಷ್ಟತೆ ಇಲ್ಲದ, ಪಾರದರ್ಶಕವಲ್ಲದ ಈ ಪ್ಯಾಕೇಜ್ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುವ ಬಿ.ಜೆ.ಪಿ. ಯೋಜನೆ. -ಕೆ.ಜಿ. ನಾಗರಾಜ್, ಅಧ್ಯಕ್ಷರು ಎ.ಪಿ.ಎಂ.ಸಿ.
