
ರಾಜ್ಯದಲ್ಲಿ ನಾಳೆಯ ರವಿವಾರ 4 ನೇ ಹಂತದ ಲಾಕ್ ಡೌನ್ ಮುಗಿದು 5 ನೇ ಹಂತದ ಲಾಕ್ ಡೌನ್ ಜೂನ್ 15 ರ ವರೆಗೆ ಮುಂದುವರಿಯಲಿದೆ.
ಈ ಹಿಂದಿನ ಘೋಷಣೆಗಳ ಪ್ರಕಾರ ರವಿವಾರ ಲಾಕ್ ಡೌನ್ ಮುಂದುವರಿಯಲಿದೆ ಎನ್ನುವ ಸುದ್ದಿ ಸದ್ದು ಮಾಡಿತ್ತು. ಆದರೆ ಇಂದು ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವಿವಾರ ಅಂದರೆ ಮೇ31 ರಂದು ರಾಜ್ಯಾದ್ಯಂತ ಲಾಕ್ ಡೌನ್ ಇರುವುದಿಲ್ಲ ಎಂದು ಪ್ರಕಟಿಸಿದ್ದಾರೆ.
ಉತ್ತರ ಕನ್ನಡ ವರ್ತಮಾನ- ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಟ್ಕಳ ಸೇರಿ ಎಲ್ಲಾ ತಾಲೂಕುಗಳಲ್ಲಿ ಮೇ 31 ರ ರವಿವಾರ ಕೂಡಾ ಲಾಕ್ ಡೌನ್ ಆಗಲಿದೆ ಎನ್ನುವ ಗಾಳಿಸುದ್ದಿ ತೇಲಾಡುತಿತ್ತು. ಆದರೆ ಮುಖ್ಯಮಂತ್ರಿಗಳ ಘೋಷಣೆಯ ನಂತರ ಜಿಲ್ಲಾಧಿಕಾರಿ ಹರೀಶ್ ಕುಮಾರ್ ರವಿವಾರ ಲಾಕ್ ಡೌನ್ ಇರುವುದಿಲ್ಲ ಎಂದು ಸ್ಪಸ್ಟಪಡಿಸಿದ್ದಾರೆ. ಆದರೆ ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳ ಪ್ರಕಟಣೆ ನಂತರ ಕೂಡಾ ಉತ್ತರಕನ್ನಡ ಜಿಲ್ಲೆಯಲ್ಲಿ ರವಿವಾರ ಲಾಕ್ ಡೌನ್ ಇರುವುದಿಲ್ಲ ಎಂದು ಸ್ಥಳಿಯ ಆಡಳಿತಗಳು ಸ್ಪಸ್ಟಪಡಿಸಿರಲಿಲ್ಲ. ಆದರೆ ಈಗಿನ ಮಾಹಿತಿಯೆಂದರೆ ಭಟ್ಳಳದ ಕೆಲವು ಪ್ರದೇಶಗಳ ನಿರ್ಬಂಧಗಳನ್ನು ಹೊರತುಪಡಿಸಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮೇ,31 ರ ರವಿವಾರದ ಲಾಕ್ ಡೌನ್ ಇರುವುದಿಲ್ಲ. ಜಿಲ್ಲೆಯ ಜನರು ಎಂದಿನಂತೆ ರವಿವಾರ ಕೂಡಾ ತಮ್ಮ ಅಗತ್ಯ ಕೆಲಸಗಳನ್ನು ಮಾಡಿಕೊಳ್ಳಬಹುದು.
ಈ ವಿಳಂಬ ಪ್ರಕಟಣೆಯಿಂದ ಮೀನು-ಮಾಂಸ ಮಾರಾಟಗಾರರು ಸೇರಿದಂತೆ ಕೆಲವರಿಗೆ ತೊಂದರೆಯಾಗಿದ್ದು ಉತ್ತರಕನ್ನಡ ಜಿಲ್ಲೆಯಲ್ಲಿ ಜಿಲ್ಲಾಡಳಿತದ ಪ್ರಾಮಾಣಿಕ ಪ್ರಯತ್ನದ ನಡುವೆ ಕೂಡಾ ಗೊಂದಲಗಳಾಗುತ್ತಿರುವುದಕ್ಕೆ ಇಂದಿನ ವಿದ್ಯಮಾನ ಉದಾಹರಣೆಯಾಗಿದೆ. ಎಂದಿನಂತೆ ಇಂಥ ವಿಚಾರಗಳಲ್ಲಿ ಪ್ರಮುಖ ಜನಪ್ರತಿನಿಧಿಗಳಾದ ಶಾಸಕರು, ಸಂಸದರು ಉಪೇಕ್ಷೆ ಮಾಡುತ್ತಿರುವುದು ಯತಾಪ್ರಕಾರ ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ.
ಇಂದಿನ ಬಂಡಾಯದ ಹಿಂದಿನ ಸಂತೋಷರ ಕಾರ್ಯಾಚರಣೆಯ ಸುತ್ತಮುತ್ತ
ಯಡಿಯೂರಪ್ಪ ವಿರುದ್ಧ ಸಂಘದ ಕಾರ್ಯಾಚರಣೆ
ಪೌರೋಹಿತ್ಯಕ್ಕೆ ಸಿದ್ಧವಾಗಿದೆಯಾ ಹೈಕಮಾಂಡ್?
ಬಿ.ಜೆ.ಪಿ.ಯಲ್ಲಿ ಬಿರುಕು ನಿರೀಕ್ಷಿತವಾದರೂ ಕರೋನಾದ ಸಂಕಟದ ಕಾಲದಲ್ಲಿ ಯಡಿಯೂರಪ್ಪ ಹಾಸಿಕೊಂಡಿದ್ದ ನೆಲಹಾಸನ್ನೇ ಎಳೆದು 77 ರ ಹಿರಿಯ ಯಡಿಯೂರಪ್ಪನವರನ್ನು ಮೇಲೇಳದಂತೆ ಕೆಳಕ್ಕೆ ತಳ್ಳಿಬಿಡಬಹುದೆನ್ನುವ ಕಲ್ಪನೆಯನ್ನು ಸಹಾ ಮಾಡದ ಕಾಲದಲ್ಲಿ ಯಡಿಯೂರಪ್ಪ ವಿರುದ್ಧ ಬಿ.ಜೆ.ಪಿ. ಯಲ್ಲಿ ಸ್ವಜಾತಿಯವರನ್ನೇ ಎತ್ತಿಕಟ್ಟಿ ತಮಾಸೆ ನೋಡಲಾಗುತ್ತಿದೆಯಾ?
ಅಥವಾ ಯಡಿಯೂರಪ್ಪ ಕಟ್ಟಿಕೊಂಡಿದ್ದ ಕೋಟೆಯ ಕಾವಲುಗಾರರನ್ನೇ ಖರೀದಿಸಿ ವೈದಿಕ ಆಟಕ್ಕೆ ಅಖಾಡದ ನೆಲ ಸಿದ್ಧಮಾಡಲಾಗುತ್ತಿದೆಯಾ ಎನ್ನುವ ಅನುಮಾನಗಳಿಗೆ ಎಡೆಯಾಗುವಂತೆ ಇಂದಿನ ವಿದ್ಯಮಾನಗಳು ನಡೆದಿವೆ.
ಗೋಕಾಕ್ ನ ಕತ್ತಿ ಸಹೋದರರು ಶಾಸಕರಿಗೆ ಔತಣಕೂಟ ಎರ್ಪಡಿಸಿ ಹಕ್ಕು ಪ್ರದಿಪಾದನೆ ಮಾಡಿ ಲಾಭ ಪಡೆಯಲು ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ. ಈ ಕೂಟದ ಮುಖ್ಯ ವ್ಯಕ್ತಿ ವಿಜಯಪುರದ ಬಸವರಾಜ್ ಪಾಟೀಲ್ ಯತ್ನಾಳ್ ಮತ್ತು ಉಮೇಶ್ ಕತ್ತಿ ತಮಗೆ ಮಂತ್ರಿಗಳನ್ನಾಗಿಸುವುದು ಸೇರಿದಂತೆ ತಮ್ಮ ಕೆಲವು ಬೇಡಿಕೆಗಳಿಗೆ ಯಡಿಯೂರಪ್ಪ ಸ್ಪಂದಿಸದಿದ್ದರೆ ಬಂಡಾಯ ಏಳುವ ಸೂಚನೆ ಕೊಟ್ಟಿದ್ದಾರೆ.
ಈ ಯೋಜನೆ, ಸೂಚನೆ ಹಿಂದೆ ಬಿ.ಜೆ.ಪಿ. ಹೈಕಮಾಂಡ್ ಕೈವಾಡದ ಶಂಕೆಯಂತೂ ಇದ್ದೇ ಇದೆ. ಆದರೆ ಒಳಗೊಳಗೆ ಯಡಿಯೂರಪ್ಪ ವಿರುದ್ಧ ಕುದಿಯುತ್ತಿರುವ ಕತ್ತಿ ಸಹೋದರರು, ಬಸವನಗೌಡ ಪಾಟೀಲ್ ರಂಥ ಖಾಲಿಡಬ್ಬಗಳ ಶಬ್ಧ ಮಾಡಿಸಿದರೆ ಯಡಿಯೂರಪ್ಪ ಸಹಜವಾಗಿ ಹೆದರುತ್ತಾರೆ ಆಗ ಈ ಕತ್ತಿ, ಯತ್ನಾಳ್ ರಿಗೆ ಸರ್ಕಾರದಲ್ಲಿ ಮಹತ್ವದ ಹುದ್ದೆ ಕೊಟ್ಟು ಅಂತರ್ ಚಿಶಾಚಿಯಂತೆ ಅಲೆಯುತ್ತಿರುವ ಸಂತೋಷರಂಥ ವೈದಿಕರನ್ನು ಕೂಡ್ರಿಸಿದರೆ ಆಗ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆದಂತಾಗುತ್ತದೆ ಎನ್ನುವುದು ಬಿ.ಜೆ.ಪಿ.ಯೊಳಗಿನ ಕಟ್ಟರ್ ಸಂಘಿಗಳ ಆಲೋಚನೆ! ….. visit-samajamukhi.net
