

ರಾಜ್ಯದಾದ್ಯಂತ ಈ ತಿಂಗಳ 30 ರ ವರೆಗೆ ನಿಬಂಧನೆಗಳನ್ನು ಆಧರಿಸಿ ಲಾಕ್ ಡೌನ್ ಮುಂದುವರಿದಿರುವುದರಿಂದ ಜುಲೈ ಮೊದಲ ವಾರದಿಂದ ಶಾಲೆ ಕಾಲೇಜುಗಳು ಪ್ರಾರಂಭವಾಗುವ ಸಾಧ್ಯತೆ ಹೆಚ್ಚಿದೆ.
ಈ ಬಗ್ಗೆ ಈ ತಿಂಗಳಲ್ಲಿ ಹೊಸ ಕಾರ್ಗಸೂಚಿ ಪ್ರಕಟಿಸಿರುವ ಕೇಂದ್ರ ಸರ್ಕಾರ ಆಯಾ ರಾಜ್ಯಗಳು ಅಲ್ಲಿಯ ವಸ್ತುಸ್ಥಿತಿ,ಪರಿಸ್ಥಿತಿ ಆಧರಿಸಿ ಜುಲೈ ಮೊದಲವಾರದಿಂದ ಶಾಲೆ ಕಾಲೇಜು ಪ್ರಾರಂಭಿಸಲು ನಿಬಂಧನೆಗೊಳಪಟ್ಟು ಅನುಮತಿ ನೀಡಿದೆ. ಈ ಮಾರ್ಗಸೂಚಿ ಆಧಾರದಲ್ಲಿ 5ರಿಂದ ಎಸ್.ಎಸ್. ಎಲ್.ಸಿ.ಮಕ್ಕಳಿಗೆ ಜುಲೈ ಮೊದಲ ಮತ್ತು ಎರಡನೇ ವಾರಗಳಲ್ಲಿ 1ರಿಂದ3 ರ ವರೆಗೆ ಜುಲೈ 20 ರ ನಂತರ ಉಳಿದ ಕಾಲೇಜು, ಪದವಿ ತರಗತಿಗಳಿಗೆ ಆಯಾ ಜಿಲ್ಲೆಯ ಪರಿಸ್ಥಿತಿ ಆಧರಿಸಿ ಜುಲೈ ನಿಂದ ತರಗತಿ ಪ್ರಾರಂಭಿಸಲು ಸೂಚಿಸಲಾಗಿದೆ.
ಈ ಬಗ್ಗೆ ಕೇಂದ್ರ ಸುತ್ತೋಲೆ ಹೊರಡಿಸಿದ್ದರೂ ಈ ನಿರ್ಧಾರದ ಜವಾಬ್ಧಾರಿಯನ್ನು ರಾಜ್ಯಗಳಿಗೆ ಬಿಟ್ಟಿದೆ. ಈ ಬಗ್ಗೆ ರಾಜ್ಯದಲ್ಲಿ ಶಿಕ್ಷಣ ಸಚಿವರ ಸಭೆ ನಡೆದಿದ್ದು ಸರ್ಕಾರದ ಅನುಮತಿ ಮೇರೆಗೆ ಜುಲೈ ನಿಂದ ಶಾಲಾ-ಕಾಲೇಜು ಪ್ರಾರಂಭಿಸಲು ಸುರಕ್ಷತಾ ಕ್ರಮಗಳ ಮಾರ್ಗಸೂಚಿ ಪ್ರಕಟಿಸುವುದಾಗಿ ನಿರ್ಧಾರ ಮಾಡಿರುವ ಮಾಹಿತಿ ಸಮಾಜಮುಖಿಗೆ ಲಭಿಸಿದೆ.
ಪಿ.ಯು. ಕಾಲೇಜುಗಳ ಮೌಲ್ಯಮಾಪನ ಪ್ರಕ್ರೀಯೆ ಕೂಡಾ ಈಗ ಪ್ರಾರಂಭವಾಗಿದ್ದು ಈ ಮೌಲ್ಯಮಾಪನಕ್ಕೆ ಆಯಾ ಜಿಲ್ಲೆಗಳ ಪರಿಸ್ಥಿತಿ ಆಧರಿಸಿ ಉಪನ್ಯಾಸಕರಿಗೆ ಕೆಲವು ರಿಯಾಯತಿಗಳನ್ನು ನೀಡಿರುವುದಾಗಿ ತಿಳಿದುಬಂದಿದೆ.
( related ) ಮಹಾರಾಷ್ಟ್ರದಿಂದ ಸಿದ್ಧಾಪುರಕ್ಕೆ ಬಂದಿದ್ದ ಮತ್ತಿಬ್ಬರಲ್ಲಿ ಕೋವಿಡ್ ದೃಢ
ಮಹಾರಾಷ್ಟ್ರದಿಂದ ಬಂದ ನೂರಾರು ಜನರಲ್ಲಿ ಉಡುಪಿಯಲ್ಲಿ ಒಂದೇ ದಿನ ಕರೋನಾ ದೃಢಪಟ್ಟ ಇಂದು ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರಕ್ಕೆ ಮಹಾರಾಷ್ಟ್ರದಿಂದ ಬಂದು ಕಾರಂಟೈನ್ ಆಗಿದ್ದ ಇಬ್ಬರಲ್ಲಿ ಕೋವಿಡ್ 19 ದೃಢವಾಗಿದೆ. ಮೊನ್ನೆ ಕೋವಿಡ್ ದೃಢಪಟ್ಟ ಹಿರಿಯರೊಂದಿಗೆ ಮಹಾರಾಷ್ಟ್ರದಿಂದ ಬಂದು ಕಾವಂಚೂರಿನಲ್ಲಿ ಕಾರಂಟೈನ್ ಆಗಿದ್ದ ಈ ಇಬ್ಬರು ಯುವತಿಯರು ಸೇರಿ ಒಟ್ಟೂ ನಾಲ್ಕು ಜನರು ಮಹಾರಾಷ್ಟ್ರ ಠಾಣಾದಿಂದ ಪ್ರಯಾಣ ಬೆಳೆಸಿದ್ದರು. ಇವರಲ್ಲಿ ಮೂರು ಜನರಿಗೆ ಕರೋನಾ ದೃಢಪಟ್ಟಂತಾಗಿದೆ. …………. visit-samajamukhi.net fb page & site

