ಜನಾನುರಾಗಿ ಸಿ.ಎಫ್.ನಾಯ್ಕ

(ವ್ಯಕ್ತಿ ಪರಿಚಯ 5-ಆತ್ಮಿಯತೆಗೆ ಮತ್ತೊಂದು ಹೆಸರು..ಸಿ.ಎಫ್.ನಾಯ್ಕ ಎಂಬ ಜನಾನುರಾಗಿ ರಾಜಕಾರಣಿ)

ಸಚ್ಚಾರಿತ್ರವಂತ ರಾಜಕಾರಣಿಗಳು ತುಂಬಾ ವಿರಳ..ನಾವು ದೂರದಲ್ಲಿ ಇರುವ ಬೆಟ್ಟವನ್ನು ವರ್ಣಿಸುತ್ತೇವೆ..ಹತ್ತಿರ ಹೋದಾಗಲೆ ಅಲ್ಲವೆ ನಿಜ ಸ್ಥಿತಿಯ ಅರಿವಾಗುವುದು…ಯಾರು ಒಪ್ಪಲಿ ಬಿಡಲಿ ಕರ್ನಾಟಕದ ಮಟ್ಟಿಗೆ ಅತ್ಯಂತ ನೈತಿಕ ಬಲ ಇರುವ ರಾಜಕಾರಣಿ ಎಂದರೆ ದೇವೆಗೌಡರೆ ಸರಿ.ನಾನು ನನ್ನ ಜಿಲ್ಲೆಯ ಒಬ್ಬ ಸರಳ ಸಜ್ಜನ ವ್ಯಕ್ತಿಯನ್ನು ಇಂದು ಇಲ್ಲಿ ಪರಿಚಯಿಸುತ್ತೇನೆ..ರಾಜಕಾರಣದಲ್ಲಿ ಮೌಲ್ಯ ಬೇಕೆಂದು ಪ್ರತಿಪಾದಿಸಿದ ರಾಮಕೃಷ್ಣ ಹೆಗಡೆ ನಮ್ಮ ಜಿಲ್ಲೆಯವರು..ಕರ್ನಾಟಕದ ಕೇಸರಿ ಎಸ್ ಬಂಗಾರಪ್ಪ ನನ್ನ ಜಿಲ್ಲೆಯ ಅಳಿಯ..ಅಂತಹ ಮಹಾನ್ ನಾಯಕರ ಗರಡಿಯಲ್ಲಿಬೇಕಾದಷ್ಟು ರಾಜಕಾರಣಿಗಳು ಇಲ್ಲಿ ಬೆಳೆಯಬಹುದಿತ್ತು..ಆದರೆ ಹಾಗಾಗಲೆ ಇಲ್ಲ…ಈ ಜಿಲ್ಲೆಯನ್ನು ಸಮರ್ಥವಾಗಿ ಪ್ರತಿನಿಧಿ ಸುವ ಯೋಗ್ಯತೆ ಇದ್ದವರು ಬಹಳ ಕಡಿಮೆ.. ಎ.ರವಿಂದ್ರನಂಥ ಜಿಲ್ಲೆಯ ಸಮಗ್ರವಿಷಯಜ್ಞಾನಿ ಇಲ್ಲಿಇದ್ದಾರೆ, ಆದರೆ ಅವರಿಗೆ ಜನಪ್ರತಿನಿಧಿ ಯಾಗುವ ಅದೃಷ್ಟವೆ ಇಲ್ಲವೇನೊ ಎಂಬಷ್ಟು ಹಿನ್ನಡೆಯಾಗಿ ಬಿಟ್ಟಿದೆ….ಇಂದು ನಾನು ಪರಿಚಯಿಸಲು ಬಯಸಿದ ವ್ಯಕ್ತಿ ಸಿ.ಎಫ್.ನಾಯ್ಕ.ಮಾಳಂಜಿ..

ಒಬ್ಬ ಜನಾನುರಾಗಿ ರಾಜಕಾರಣಿಯಾಗಿ ಮೆರೆಯುವ ಅರ್ಹತೆ ಇದ್ದಾಗ್ಯೂ ಅವಕಾಶ ವಂಚಿತರು..ಆರ್ಥಿಕವಾಗಿಯೂ ಬಲಶಾಲಿಯಲ್ಲ..ಆದರೆ ಜನಾನುರಾಗಿ, ಅತ್ಯಂತ ಸರಳ ಸಜ್ಜನ ರಾಜಕಾರಣಿ…ಈಗ ಇಡಿ ನನ್ನ ಜಿಲ್ಲೆಯಲ್ಲಿಯೆ ದು ರ್ಭಿನ್ ಹಾಕಿ ಹುಡುಕಿದರೂ ಅವರಷ್ಟು ಒಳ್ಳೆಯ ರಾಜಕಿಯ ವ್ಯಕ್ತಿ ಮತ್ತೊ ಬ್ಬರಿಲ್ಲ…ಅವರು ಎಂದೆಂದೂ ಸಂವಿಧಾನದ ಮೌಲ್ಯಕ್ಕೆ ಲೋಪ ಬರದ ರೀತಿ ರಾಜಕಾರಣ ಮಾಡಿದವರು..

ಎರಡು ಸಾರಿ ಜಿಲ್ಲಾ ಪಂಚಾಯತ್ ಸದಸ್ಯರಾದವರು..ಒಮ್ಮೆಯಂತೂ ಪಕ್ಷೇತರರಾಗಿ ಗೆದ್ದವರು. ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಅವರ ಸೇವೆ ಈ ಜಿಲ್ಲೆಗೆ ಅಪೂರ್ವವಾಗಿತ್ತು..ಸಿ.ಎಫ್ ನಾಯ್ಕ ಎಲ್ಲೆ ಹೋದರು ಜನರು ತಾವಾಗಿಯೆ ಬಂದು ಅವರನ್ನು ಸುತ್ತುವರಿಯುತ್ತಾರೆ..ಯಾವೊಬ್ಬ ವ್ಯಕ್ತಿಯನ್ನು ಅವರು ದೂರ ತಳ್ಳಿದವರೆ ಅಲ್ಲ..ಬಡವ ಶ್ರೀಮಂತನೆಂಬ ಭೇಧವಿಲ್ಲ..ಮೇಲು ಕೀಳೆಂಬ ತಾರತಮ್ಯವಿಲ್ಲ. ಪ್ರತಿಯೊ ಬ್ಬರನ್ನು ಗೌರವಿಸಿ ಅವರ ಮನವಿಯನ್ನು ಆಲಿಸಿ ಸ್ಥಳದಲ್ಲಿಯೆ ಪರಿಹರಿಸಲು ಪ್ರಯತ್ನಿಸುತ್ತಾರೆ..ಹಾಗಾಗಿ ಅವರೆಂದರೆ ಜನ ಮುಗಿಬೀಳುತ್ತಾರೆ.

.ಸುಮಾರ 68ವರ್ಷದ ಸಿ.ಎಫ್ ನಾಯ್ಕ ಇಂದಿಗೂ ಅತ್ಯಂತ ಸ್ವಚ್ಛ, ಬ್ರಷ್ಟಾಚಾರದ ಲವಲೇಶವು ಇಲ್ಲದ ರಾಜಕಾರಣಿ..ಸದಾ ಮುಖದಲ್ಲಿ ನಗುಸೂಸುತ್ತ ಜನರನ್ನು ಎದುರುಗೊಳ್ಳುವ ಪರಿಯೆ ನೋಡಲು ಚೆಂದ…ಸಿ.ಎಫ್.ನಾಯ್ಕರ ರಾಜಕಿಯ ಕರ್ಮಭೂಮಿ ಬಿಸಲಕೊಪ್ಪ ಎಂಬುದು ವಿಶೇಷ…ಆಗತಾನೆ ಗ್ರಾಮಗಳನ್ನು ಒಟ್ಟುಗೂಡಿಸಿ ಮಂಡಲ ಪಂಚಾಯತ್ ಅಸ್ತಿತ್ವಕ್ಕೆ ಬಂದಾಗ ನಮ್ಮ ಮಂಡಲ ಪಂಚಾಯತದ ಪ್ರಧಾನರಾಗಿ ರಾಜಕಾರಣ ಆರಂಭಿಸಿದ ಅವರು ಮತ್ತೆ ಹಿಂತಿರುಗಿ ನೋಡಲೆ ಇಲ್ಲ.ನನ್ನೂರಿನ ಪ್ರತಿ ಮನೆಗೂ ಮನೆ ನಂ ಹಾಕಿಸಿ, ವಿದ್ಯುತ್ ಸಂಪರ್ಕ ಕೊಡಿಸಿ ಊರಿಗೊಂದು ರಸ್ತೆ ಮಾಡಿಸಿಕೊಟ್ಟ ಅವರನ್ನು ನನ್ನೂರಿನ ಪ್ರತಿ ಮನೆ ಯವರು ಸದಾ ನೆನೆಸಿಕೊಳ್ಳುತ್ತಾರೆ…‌ ಆಮೇಲೆ ಅವರು ಎತ್ತರಕ್ಕೆ ಎತ್ತರಕ್ಕೆ ಬೆಳೆದರು..ಕೆ.ಪಿ.ಸಿ.ಸಿ ಸದಸ್ಯರಾದರು…ಬನವಾಸಿ ಪ್ರಾಧಿಕಾರ ರಚನೆಗಾಗಿ ಹಗಲಿರುಳು ಶ್ರಮಿಸಿದವರು…..ಆದರೆ ಅವರನ್ನು ಇನ್ನು ಎಂ.ಎಲ್.ಎ ಆಗಿ ನೋಡಲು ಸಾಧ್ಯವೆ ಆಗಿಲ್ಲ..ಎಂ.ಎಲ್.ಸಿ ಯಾಗಿ ಮಾಡಿಯಾದರೂ ಗೌರವ.ಕೊಡಬಹುದಿತ್ತು..ನಿಗಮಮಂಡಳಿಯ ಅಧ್ಯಕ್ಷರಾಗಿ ಮಾಡಬಹುದಿತ್ತು..ಸದಾ ಬಡವರ ಪಕ್ಷ ನಮ್ಮದೆಂಬ ಕಾಂಗ್ರೆಸ್..ಅವರನ್ನು ಸೂಕ್ತವಾಗಿ ಗೌರವಿಸಿಲ್ಲ.. ಚಕಾರವೆತ್ತದೆ ಪಕ್ಷ ನಿಷ್ಠೆಯಿಂದ ಕೆಲಸ ಮಾಡುವ ಅವರು ನಗುತ್ತಲೆ ಎಲ್ಲವನ್ನು ಮರೆತು ಬಿಡುತ್ತಾರೆ.ಸಧ್ಯ ನನ್ನ ಜಿಲ್ಲೆಯಲ್ಲಿ.ಅವರನ್ನು ಶಿರಸಿ-ಸಿದ್ಧಾಪುರ..ಅಥವಾ ಯಲ್ಲಾಪುರ ಯಾವ ಕ್ಷೇತ್ರದ ಟಿಕೆಟ್ ಕೊಟ್ಟರೂ ಗೆದ್ದು ಬರುವ.ಅಭೂತಪೂರ್ವ ಜನ ಬೆಂಬಲ ಅವರಿಗಿದೆ…ಪಕ್ಷ ಯೋಚಿಸಬೇಕಷ್ಟೆ.

..ರಾಜು ನಾಯ್ಕಬಿಸಲಕೊಪ್ಪ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *