
ಟಾಲಿವುಡ್ ಖ್ಯಾತ ನಟ ಚಿರಂಜೀವಿ ಹಾಗೂ ರಾಮ್ ಚರಣ್ ಮೇಲೆ ದಾಳಿ ನಡೆದಿದೆ ಎನ್ನುವ ವಿಚಾರ ಭಾರೀ ಸುದ್ದಿಯಾಗಿದೆ.-By ಸೋಮಶೇಖರ್ ಚಲ್ಯ | Date – June 5, 2020

ಟಾಲಿವುಡ್ ಖ್ಯಾತ ನಟ ಚಿರಂಜೀವಿ ಹಾಗೂ ರಾಮ್ ಚರಣ್ ಮೇಲೆ ದಾಳಿ ನಡೆದಿದೆ ಎನ್ನುವ ವಿಚಾರ ಭಾರೀ ಸುದ್ದಿಯಾಗಿದೆ.
ಈ ಸುದ್ದಿ ಕೇಳಿ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಯಾರಿದು ಟಾಲಿವುಡ್ ಟಾಲ್ ಸ್ಟಾರ್‍ಗಳ ಮೇಲೆ ದಾಳಿ ಮಾಡಿದವರು ಅಂತ ನೋಡಿದ್ರೆ ಆಶ್ಚರ್ಯ!
ದಾಳಿ ಮಾಡಿದ್ದು ಜೇನು ನೊಣಗಳು. ಅಂದಹಾಗೆ, ಉಪಾಸನ ಕೊನಿಡೆಲಾ ಅವರ 92 ವಯಸ್ಸಿನ ಅಜ್ಜ ಉಮಪತಿ ರಾವ್ ನಿಧನರಾಗಿದ್ದಾರೆ. ಅವರ ಅಂತಿಮ ದರ್ಶನಕ್ಕಾಗಿ ಚಿರಂಜೀವಿ, ರಾಮ್ ಚರಣ್ ಇಬ್ಬರೂ ಉಪಾಸನ ಅವರ ಊರು ನಿಜಾಮಾಬಾದ್‍ನ ಡೊಮಕೊಂಡಕ್ಕೆ ಹೋಗಿದ್ದರು. ಅಲ್ಲಿ ಅವರ ಕುಟುಂಬ ಜೇನು ನೊಣಗಳ ದಾಳಿಗೆ ಗುರಿಯಾಗಿದ್ದಾರೆ. ಅದನ್ನು ಮೆಗಾಸ್ಟಾರ್ ಚಿರಂಜೀವಿ ಮೇಲೆ ದಾಳಿ ಎಂದು ಸುದ್ದಿ ಮಾಡಲಾಗಿತ್ತು.
ಅದಕ್ಕಾಗಿ ಅವರ ಅಭಿಮಾನಿಗಳಲ್ಲಿ ಎದ್ವಾತದ್ವಾ ಆತಂಕ ಜಾಸ್ತಿ ಆಗಿತ್ತು. ಅಭಿಮಾನಿಗಳ ಅಂತಕ ನೋಡಿ ಉಪಾಸನ ಮನೆಯವರು ಸಮಾಧಾನ ಮಾಡ್ಕಳ್ರಪ್ಪಾ ಆತಂಕ ಆಗೋ ಅಂತದ್ದು ಏನೂ ಆಗಿಲ್ಲ. ನಾಲ್ಕೈದು ಜೇನುಗಳು ದಾಳಿ ಮಾಡಿವೆ. ಅದನ್ನು ಯಾರ್ಯಾರೋ ಹೆಂಗೆಗೋ ಪ್ರಚಾರ ಮಾಡಿದ್ದಾರೆ. ನಿಮ್ ಸ್ಟಾರ್‍ಗಳು ಚೆನ್ನಾಗಿದಾರೆ. ಅವರಿಗೆ ಯಾವ ಹಾನಿಯೂ ಆಗಿಲ್ಲ ಅಂತ ಹೇಳಿದ್ದಾರೆ. ಜೇನು ನೊಣಗಳ ದಾಳಿಯನ್ನು ಬಾಂಬ್ ದಾಳಿ ಎಂಬಂತೆ ಟಾಲಿವುಡ್ ಫೀಲ್ಡ್ ನಲ್ಲಿ ಟೆನ್ಷನ್ನೋ ಟೆನ್ಷನ್ನು.(nA..gouri)
