ಮಲ್ನಾಡ್ ಮಾತು-002 ಪದಗ್ರಹಣದ ಮಾಹಿತಿ ಇಲ್ಲದ ವಿಶಾದ,ಕರೋನಾ ಬಗ್ಗೆ ಯಾರೂ ಕೇಳದ ಬೇಸರ

ಮುಂಗಾರು ಮಳೆಯ ಹಿತಸ್ಫರ್ಶ ಧರ್ಮಣ್ಣನ ಉತ್ಸಾಹಕ್ಕೆ ಕಾರಣವಾಗಿತ್ತು.
ಭುಜದ ಮೇಲೆ ಗುದ್ದಲಿ ಹೊತ್ತುಕೊಂಡು ಎರಡೂ ಕೈಗಳಲ್ಲಿ ಅಡಿಕೆ, ತಂಬಾಕು ತಿವಿಯುತ್ತಾ ನಿಂತಿದ್ದ ಧರ್ಮಣ್ಣ ಏ ಬೀಬಿ ಎಂಥಮಾಡ್ತ ಐದಿರೋ ಅಂದ.
ಧರ್ಮಣ್ಣ ಬಾರ, ಎಂಥದೂ ಇಲ್ಲ, ಈ ಕಾಂಗ್ರೆಸ್ ನರು ಎಂಥದ ಪದಗರಣ ಮಾಡ್ತರಂಥ ಮರಯ ಎಲ್ಲಾ ಪಂಚಾಯಿತಿಗೆ ಬಂದ್ ಪದಗರಣ ನೋಡ್ಬಕು ಅನ್ನಕಿಡ್ದರೆ ನೀನೂ ಬರಬಕನ ಮತ್ ತಪ್ಸದ್ರೆ ನೋಡು ಎಂದ.

ಏ ಬೀಬಿ ನಿಂಗೆ ಹ್ವಾರ್ರಿಲ್ಲ, ಮೆಂಬರಾಗರ್ಯಾರ, ದುಡ್ ಮಾಡರ್ಯಾರ, ಕಂಟ್ರಾಕ್ಟ್ ಮಾಡರ್ಯಾರ? ನೀನು ಈಗ ಕಾಂಗ್ರೆಸ್ ಪದಗರಣ ಅಂದ್ರೆ ಎಂಥದೋ ಮರಯ ಎಂದ.
ಧರ್ಮಣ್ಣನ ಮಾತಿಗೆ ಒಳಗೊಳಗೆ ನಕ್ಕ ಬಿ.ಬಿ. ‘ಅಲ್ಲ ಧರ್ಮಣ್ಣ ಭೂಸುಧಾರಣೆ ಕಾನೂನಗೆ ಜಮೀನ್ ತಗುಂದವ ನೀನು, ಹುಡ್ಕಮನೆನೂ ತಗುಂದಿಬಕಲ, ಈಗ ಯಾರ ನಾಕ್ ಜನ ಮೋದಿ ಅಂದ್ರೆ ನಿನ್ನಂಥರೂ ಕಾಂಗ್ರೆಸ್ ಬಿಡ್ತುರನ ಎಂದ.
ಥೂ ನಿನ್ನ ಯಾಪಾರ ಹಾಳಾಗ್ಲಿ, ಹಂಗಲ್ಲೋ ನಾಂವು ಯಾವಾಗ್ಲೂ ಕಾಂಗ್ರೆಸ್ಸೇ ಹಂಗಂಥ ಈಗಿನ ಕಾಂಗ್ರೆಸ್ ನರ ಸರಿ ಐದರಂಥ ಮಾಡಿದ. ಈಗ ಪಂಚಾಯತಗೆ ನೋಡು, ಮೊದ್ಲು ಕಾಂಗ್ರೆಸ್ ಅಂಥ ಬಂದರು, ಈಗ ಎಲ್ಲೈದರೆ, ಬಿ.ಜೆ.ಪಿ. ಎಂಎಲ್ಲೆ, ಎಂಪಿ.ಸಂತಿಗಲ ನಮ್ಮ್ ದೋಸ್ತಿ ಅಂತ ಹೋಗ್ಯರೆ, ಇಲ್ಲಿ ಪ್ರಾಮಾಣಿಕ ಆಗಿ ಕೆಲ್ಸ ಮಾಡರಿಗೆ ಮರ್ಯೆದಿ ಐತಿ ಅಂತ ಮಾಡಿಯಾ? ಹೋದ್ ವರ್ಸ ಆ ಗೌಡ್ರಮ್ಮ ಅಧ್ಯಕ್ಷಾತು, ನಮ್ ಸುಧೀರ್ ಗೌಡ್ರು ಅಧ್ಯಕ್ಷರ್ರಾದ್ರು ಅವರೆಲ್ಲಾ ಸೇರ್ಕಿಂದೆ ಭೀಮಣ್ಣುನ ಎಲೆಕ್ಸನ್ನಗೆ ಏನೇನ್ ಮಾಡದ್ರು? ಇವರು ಆಯ್ಕೆ ಆಗಬಕರೆ ಓಟ್ ಬತವೆ, ಇವರ ಅಧ್ಯಕ್ಷಸರಾಗಬಕರೂ ಓಟು ಬತವೆ, ಸೊಸೈಟಿ ಕಾಣಬಡ ಅಲ್ಲೂ ಇವರಿಗೇ ಓಟ್ ಬತವೆ, ಈಗಾಗಲೇ ಅವರೊಂದೆಲ್ಡ್ ಜನ ಜಿಲ್ಲಾ ಪಂಚೈತಿ ತಯಾರಿನೂ ಮಾಡ್ಯರಂತೆ ಆದರೆ ಎಂಲ್ಲೆ, ಎಂಪಿ ಚುನಾವಣೆಗೆ ಮತ ಓಟ್ ಬರದಿಲ್ಲ ಅಂದ್ರೆ ಎಂಥ ಕತೆ, ನಿಮಗೆ ಕೆಲ್ಸ ಇಲ್ಲ, ಅವರಿಗೆ ಅವರು ಗೆಲ್ ಬಕು, ಭೀಮಣ್ಣನೂ ಬ್ಯಾಡ,ರಾಹುಲ್ ಗಾಂಧಿನೂ ಬ್ಯಾಡ,ಕಡಿಗೆ ಅಂವ ಶಿವಕುಮಾರ ರಾಜ್ಯಾಧ್ಯಕ್ಷ ಆಗ್ಯನೆ ಅಂತ ಪದಗರಣನ? ಎಂದು ಧರ್ಮಣ್ಣ ಮಾತು ಮುಂದುವರಿಸುತ್ತಲೇ ಟೀಲಪ್ಪನ ಪ್ರವೇಶವಾಯಿತು.


ಕಡಿಗೆ ಧರ್ಮಣ್ಣ, ಈ ಬದಿಗೆ ಡಾಕ್ಟರ್ ಬಂದಿರನ ಎಂದು ಟೀಲಪ್ಪ ಕೇಳಿದ, ಇಲ್ಲ ಡಾಕ್ಟರ್ ಈ ಬದಿಗೆ ಬರದ್ನೇ ಕಡಿಮೆ ಮಾಡಬಿಟರೆ, ಅವರೂ ಅದ್ನೇ ಹೇಳ್ತರ್ರ,ಈ ಕಾಂಗ್ರೆಸ್ ನರ ಉಪಯೋಗ್ ಇಲ್ರ, ಅವರು ಮಾಡಕೆಲ್ಸ ಸರಿಮಾಡದಿಲ ಹಂಗಾಗೇ ಈ ಬಿ.ಜೆ.ಪ್ಯರು ಹಾಳೂರಿಗೆ ಉಳದವನೆ ಗೌಡ ಆಗ್ಯರೆ, ಈಗ ಕರೋನಾ…, ಕರೋನಾ ಅಂತ ಇದ್ದಬದ್ ಎಂಮ್ಮೆಲ್ಲೆ, ಎಂಪ್ಯರೆಲ್ಲಾ ಕಿಟ್ಟು-ಪಟ್ಟು ಆಂಥ ಕೊಟ್ಟರೆ, ಆದ್ರೆ ಈ ಮುಂಡೆಗಂಡ್ರು ಮತ ಈ ಬದಿಗೆ ಮಕ ಹಾಕನಿಲ್ಲ ನೋಡು, ಇನ್ನು ಚುನಾವಣೆ ಬಂದ್ ಕೂಡ್ಲೆ ಬತರೆ, ಆದ್ರೂ ನಮ್ಮ ಜನ ಉಪಯೋಗಿಲ್ರಾ ಎಂದು ಧರ್ಮಣ್ಣ ರಾಗ ತೆಗೆದ.
ಅಷ್ಟೊತ್ತಿಗೇ ನಾಗೇಂದ್ರನೂ ಬಂದಿಳಿದ. ನಾಗೇಂದ್ರ ಸೈಬರೆ ಕಡಿಗೆ ಪದಗೃಹಣ ಗೊತ್ತಲಾ ಅಂದ.

ಅಲ್ಲ ಎಂಥ ಪದಗೃಹಣ ಯಾರಿಗೂ ಸುದ್ದಿನೇ ಸರಿ ಗೊತ್ತಿಲ್ಲ, ಆ ವಸಂತಣ್ಣುನ ಕೇಳದ್ರೆ ನಮಗೆ ಗೊತ್ತಿಲ್ರಪಾ, ಭೀಮಣ್ಣನು ಕೇಳದ್ರೆ ಪಂಚೈತಿಗೆ ಬತುವು ಅಂತನೆ,ಈಗ ರವಿ ನಾಯ್ಕ್ರಿಗೆ ಬೇರೆ ಉಸ್ತುವಾರಿ ಕೊಟ್ಟರಂತೆ ಎಂಥದ್ರ ಇದು, ಭೀಮಣ್ಣ ಅಧ್ಯಕ್ಷ, ರವೀಂದ್ರ ನಾಯ್ಕ್ರು ಉಸ್ತುವಾರಿ ಅಂತೆ, ಇವರಲಾ ಎಂಥ ಮಾಡ್ತರಾ ನಮಗ ಬುದ್ದಿಲ್ಲ, ಸೊಸೈಟಿ, ಪಂಚಾಯತು ಅವರು, ಎಂ.ಪಿ., ಎಂಎಲ್ಲೇ ಇವರು, ಈಗ ನೋಡದ್ರೆ ಕೃಷಿ ಭೂಮಿ ಯಾರೂ ಕೊಂಡ್ಕಬಹುದು ಅಂಥ ಈ ಬಿ.ಜೆ.ಪಿ.ಸರ್ಕಾರದರು ಕಾನೂನು ಮಾಡ್ಯರಂತೆ, ಆ ಕಾನೂನು ಮಾಡಿ ಶ್ರೀಮಂತರು, ದೊಡ್ಡ ಕಂಪನ್ಯರೆಲ್ಲಾ ಭೂಮಿ ತಗುನಕೆ
ಸುರು ಮಾಡದ್ರೆ ನಾವ್ ಎಂಥ ಮಾಡದು, ಈಗಲೂ ಹಂಗೆ ಎಲ್ಲೆಲ್ಲಿಂದ ಬಂದರಲ, ಹೆಂಗೆಗ್ಯಲ ಜಮೀನು, ಮನೆ ಅಂಥ ಮಾಡತರಪಾ ನಾವು ಮಾತ್ರ ಹಿಂಗೇ ಐದಿವು. ಆದ್ರೂ ಬಾಳಾ ಕಷ್ಟ ಐತಿ ಎಂದು ನಾಗೇಂದ್ರ ಅನ್ಯಮನಸ್ಕನಾದ.

ಅಲ್ಲ ಬೀಬಿ ನೀನು ಪದಗ್ರಹಣ, ಪಿದಗರಣ ಅಂತಿಯೆ ಇವರ್ ಹೇಳ್ದಂಗೆ ಶ್ರೀಮಂತರು ಜಮೀನ್ ತಗಳ ಕಾನೂನು ಮಾಡ್ಯರೆ ಗೊತ್ತೆ? ನಿಮ್ಮ ಕಾಂಗ್ರೆಸ್ನ್ಯರು ಕರೋನಾ ಆದಗಲೂ ಬರದಿಲ್ಲ, ಈಗ ಈ ಕಾನೂನು ಮಾಡದ್ಯಗೂ ಬರದಿಲ್ಲ, ನಮ್ ಅರಣ್ಯ ಅತಿಕ್ರಮಣ ಹೋರಾಟಕ್ಕೂ ನೀವು ಬರದಿಲ್ಲ ಮತ್ ನಿಮಗೂ ಬಿ.ಜೆಪ್ಯರಿಗೂ ಎನರೂ ವ್ಯತ್ಯಾಸ ಐತಾ?
ಹಂಗಾಗೇ ನಮ್ಮ್ ಜನ ಉದ್ಧಾರಾಗದಿಲ್ಲ, ಕಾಂಗ್ರೆಸ್ ನ್ಯರೂ ಹೋರಾಟನೂ ಮಾಡದಿಲ್ಲ,ಬಿ.ಜೆ.ಪ್ಯರಿಗೆ ವಿರೋಧನೂ ಮಾಡದಿಲ್ಲ ಮತ್ತೆಂಥಕೆ ಪಕ್ಷ್ಯ ಬೇಕು ಅಂತನಿ. ಎಂದು ಧರ್ಮಣ್ಣ ಖಡಕ್ಕಾಗೇ ಪ್ರತಿಕ್ರೀಯಿಸಿದ.

ಈ ಚರ್ಚೆ ಕೇಳಿದ ಟೀಲಪ್ಪ ನೋಡ್ರ ನೀವು ಇಲ್ಲಿ ಕಾಂಗ್ರೆಸ್ಸು, ಬಿ.ಜೆ.ಪಿ., ಜೆ.ಡಿ.ಎಸ್ಸು ಅಂತುರಿ, ಅವರೆಲ್ಲಾ ಒಂದೇ. ಈಗ ದೇಸನೇ ಹೋಗಕಿಡದೈತಿ ಈ ಪಕ್ಷದರೆಲ ಎಲ್ಲ ಹೋದ್ರಾ? ಬರೀ ಚುನಾವಣಿಗೆ ಮಾತ್ರ ಪಕ್ಷ ಬೇಕಂದ್ರೆ ಮತ್ತೆಂತಕಿದಲ ಎಂದು ಬೇಸರಿಸಿದ. ಅಷ್ಟೊತ್ತಿಗೆ ಇವರೊಂದಿಗೆ ಸೇರಿಕೊಂಡ ಬಿ.ಕೆ. ಏನೇ ಆಗಲಿ ನಿಮಗೆ ಸತ್ಯ ಅರು ಗೊತಾಕೈತಲ ಮರಯ, ನಾವು ಕೆಲ್ಸಿಲ್ಲ, ಬೆಳಿಲ್ಲ, ಹಬ್ಬಿಲ್ಲ ಅಂತ ತಲೆ ಕೆಡ್ಸಕಿಂದಿವು ಅವ್ರ ನೋಡ್ರಾ ಕರೋನಾ ಬರಲಿ, ನೆರೆನೇ ಬರಲಿ ರಾಜ್ಕಾರಣ ಮಾಡ್ಕಿಂದು ಆರಾಂ ಐದರೆ,ನಮ್ಮ ಜನ ಇವರೆಲ್ಲರ್ನೂ ಸೋಲ್ಸಿ, ಹೊಸಮಖ ತರದಿಲ್ಲ ಅಂದ್ರೆ ಇವಲ ಚೈಂಜ್ ಆಗದಿಲ್ಲ, ನಾವಂತೂ ನೋಡು ಇಷ್ಟರ್ ಮ್ಯಾಲೆ ಈಗಿದ್ದರಿಗೆ ಒಬ್ರಿಗೂ ಓಟ್ ಕೊಡದಿಲ್ಲ, ಇವರೆಲ್ಲಾ ತಾವ್ ತಾವ್ ದೊಡ್ಡರಾಗದ ಬಿಟ್ರೆ ಇವರತ್ರ ಎಂಥ ಮಾಡಕೂ ಆಗದಿಲ್ಲ ಬಿ.ಜೆ.ಪಿ. ಆಡಳಿತ ಮಾಟ್ತ ಮೂರ್ ಬಣ,ಕಾಂಗ್ರೆಸ್ ಬ್ಯಾಡಾಗಿದ್ ರಾಜ್ಕಾರಣ ಮಾಡ್ತ ಮೂರ್ ಬಣ, ಈ ಜೆ.ಡಿ.ಎಸ್ಸು ಎಂಥದೂ ಇಲ್ದೆ ಮೂರ್ ಬಣ ಹಂಗಗಿ ನಮ್ಮ್ ತಾಲೂಕು, ಜಿಲ್ಲೆ ಮೂರಾಬಟ್ಟೆ ಆಗಿದ್ದು, ಥೂ ಯಾರರೂ ಒಳ್ಳೆರ್ ಬರಬಕರಾ, ಇವರ್ನೆಲ ತಗುಂದು ಎಂಥ ಸುಡಕೂ ಆಗದಿಲ್ಲ, ಆದರೂ ಹಿಂಗಾಕೈತಂತ ನಾನಂತೂ ಯೋಚ್ನೆ ಮಾಡನಿಲ್ಲಾಗಿತಪ, ಈಗ ಸುಧಾರಸ್ ನಿಲ್ಲಂದ್ರೆ ಊರೂ ಹಾಳಾಕೈತಿ, ದೇಶನೂ ಹಾಳಾಕೈತಿ ಎಂಥದರೂ ಮಾಡ್ಬಕರಾ ಎಂದ ಬಿ.ಕೆ. ಏ ನಾಬತ್ ನ್ರಾ…. ಎಂಥದರೂ ಮಾಡ್ಬಕು, ಹಿಂಗೆ ಬಿಟ್ರೆ ಆಗಕಲ್ಲ ಎಂದು ಕೋಲ್ಸೆ ಕ್ರಾಸ್ ಚರ್ಚೆಗೆ ಪೂರ್ಣ ವಿರಾಮ ಹಾಕಿದ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *