

ಉತ್ತರ ಕನ್ನಡ ಜಿಲ್ಲೆಯ 500 ಕ್ಕೂ ಹೆಚ್ಚು ಪ್ರತ್ಯೇಕ ಸ್ಥಳಗಳಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮಗಳಲ್ಲಿ ಪ್ರತಿ ಕಾಂಗ್ರೆಸ್ಸಿಗರು ತಮ್ಮ ಮತಗಟ್ಟೆ ವ್ಯಾಪ್ತಿ ಹಾಗೂ ಜನಪ್ರತಿನಿಧಿಗಳು ತಮ್ಮವಾರ್ಡ್ ಗಳು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದ್ದಾರೆ.



ತಮ್ಮನ್ನು ಭೇಟಿಯಾದ ಸಮಾಜಮುಖಿ ಪ್ರತಿನಿಧಿಯೊಂದಿಗೆ ಈ ವಿಚಾರ ಹಂಚಿಕೊಂಡ ಅವರು ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಬ್ಲಾಕ್, ವಾರ್ಡ್, ಪಂಚಾಯತ್ ವ್ಯಾಪ್ತಿಗಳಲ್ಲಿ ಈ ಕಾರ್ಯಕ್ರಮ ನಡೆಸಲು ಸೂಚಿಸಿ, ತಿಳುವಳಿಕೆ ನೀಡಲಾಗಿದೆ. ಜಿಲ್ಲೆಯ 260 ವಾರ್ಡ್ ವಾರ್ಡ್ ಗಳು,241 ಪಂಚಾಯತ್ ಸೇರಿದಂತೆ ಕೆಲವು ಕಡೆ ಪ್ರಚಾರ ಸಾಮಗ್ರಿಗಳನ್ನು ನೀಡಿ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಲಾಗಿದೆ. ಎಂದರು.
ಸಿದ್ಧಾಪುರ, ಮುಂಡಗೋಡು ಸೇರಿದಂತೆ ಎಲ್ಲಾ ತಾಲೂಕುಗಳಲ್ಲಿ ಪದಗ್ರಹಣ ಕಾರ್ಯಕ್ರಮದ ಪೂರ್ವಬಾವಿ ಸಭೆ ನಡೆಸಿದ ನಂತರ ಸಮಾಜಮುಖಿಯೊಂದಿಗೆ ಮಾತನಾಡಿದ ಅವರು ಜನರ ತೊಂದರೆಗೆ ಸ್ಫಂದನೆ, ಜನಪರ ಯೋಜನೆ, ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್ ಮತದಾರರ ಮನೆಮನೆಗೆ ತೆರಳುತಿದ್ದು ಈಗಿನ ಸರ್ಕಾರಗಳು, ಜನಪ್ರತಿನಿಧಿಗಳ ವಿಫಲತೆ, ಜನವಿರೋಧಿ ನೀತಿಗಳ ವಿರುದ್ಧ ಜನಜಾಗೃತಿ ಮಾಡುತಿದ್ದೇವೆ ಎಂದರು.
