ಈ ವಾರದ ಕರೋನಾ ಆರ್ಭಟ ಮುಂದುವರಿದಿದ್ದು ಉತ್ತರಕನ್ನಡ ಜಿಲ್ಲೆಯ ಒಟ್ಟೂ 21 ಜನರಲ್ಲಿ ಇಂದು ಕರೋನಾ ದೃಢಪಟ್ಟಿದೆ. ಕಾರವಾರದ10,ಸಿದ್ಧಾಪುರದ5,ಹಳಿಯಾಳ,ಯಲ್ಲಾಪುರಗಳ ತಲಾ 2, ಭಟ್ಕಳ,ಶಿರಸಿ, ಹೊನ್ನಾವರ,ಮುಂಡಗೋಡಗಳ ತಲಾ ಒಬ್ಬರಲ್ಲಿ ಕರೋನಾ ದೃಢಪಟ್ಟಿರುವುದನ್ನು ಆರೋಗ್ಯ ಇಲಾಖೆ ಖಚಿತ ಪಡಿಸಿದೆ.
ಸಿದ್ಧಾಪುರ-ಕಾರವಾರಗಳ ಕೆಲವೆಡೆ ಶೀಲ್ ಡೌನ್-
ಜಿಲ್ಲೆಯ ಕಾರವಾರದಲ್ಲಿ ಇಂದು ಅತಿಹೆಚ್ಚು ಜನರಲ್ಲಿ ಕರೋನಾ ದೃಢಪಟ್ಟಿರುವುದರಿಂದ ಅಲ್ಲಿಯ ಕೆಲವೆಡೆ ಶೀಲ್ ಡೌನ್ ಮಾಡಲಾಗಿದೆ.
ಸಿದ್ಧಾಪುರದಲ್ಲಿ ಇದೇ ಮೊದಲು ಒಂದೇ ದಿವಸ 5 ಜನರಲ್ಲಿ ಕರೋನಾ ದೃಢಪಟ್ಟಿದ್ದು ಸಿದ್ಧಾಪುರದ ತಾಲೂಕಾ ಆಸ್ಫತ್ರೆಯ ಎರಡು ಜನ ಸಿಬ್ಬಂದಿಗಳಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಈ ಇಬ್ಬರಲ್ಲಿ ಒಬ್ಬರು ಶಿವಮೊಗ್ಗ ಜಿಲ್ಲೆ ಶಿಕಾರಿಪುರದಿಂದ ಬಂದು ಹೋಗುತಿದ್ದವರಾದರೆ, ಇನ್ನೊಬ್ಬರು ಶಿರಸಿಯಿಂದ ಪ್ರತಿದಿನ ಸಿದ್ಧಾಪುರ ಆಸ್ಫತ್ರೆಗೆ ಬರುತಿದ್ದ ಸಿಬ್ಬಂದಿ. ಈ ಕಾರಣಕ್ಕೆ ಸರ್ಕಾರಿ ಆಸ್ಫತ್ರೆ ಶೀಲ್ ಡೌನ್ ಆಗಿದ್ದು ಕೆಲವು ಖಾಸಗಿ ಆಸ್ಫತ್ರೆಗಳೂ ಕೂಡಾ ಈ ಸುದ್ದಿ ತಿಳಿದು ಸ್ವಯಂ ಶೀಲ್ ಡೌನ್ ನ ಮುಂಜಾಗೃತೆಗೆ ಒಳಗಾಗಿವೆ.
ಸಿದ್ಧಾಪುರದ ಹೊಸೂರಿನ ಇಬ್ಬರು ಸಹೋದರಿಯರಲ್ಲಿ ದೃಢ ಪಟ್ಟ ಕರೋನಾ ಸೋಂಕಿನ ಮೂಲ ಬೆಂಗಳೂರು ಎನ್ನಲಾಗಿದ್ದು ಈ ಸಹೋದರಿಯರು ಇದೇ ವಾರ ಬೆಂಗಳೂರಿನಿಂದ ಸಿದ್ಧಾಪುರಕ್ಕೆ ಮರಳಿದ್ದರು. ಇವರ ಮನೆ ಇರುವ ಪ್ರದೇಶದ ಕುಮಟಾ ರಸ್ತೆ ಮಡಿವಾಳ ಕೇರಿಯ ಕೆಲವು ಭಾಗವನ್ನು ಶೀಲ್ ಡೌನ್ ಮಾಡಲಾಗಿದೆ.
ಸಿದ್ದಾಪುರ ವಾಟಗಾರಿನ ಬೆಂಗಳೂರಿನಿಂದ ನಾಲ್ಕು ದಿವಸಗಳ ಹಿಂದೆ ಮರಳಿದ್ದ ಯುವಕನಲ್ಲಿ ಕರೋನಾ ದೃಢವಾಗಿದ್ದು ಈ ಯುವಕ ಮತ್ತು ಅವರ ಕುಟುಂಬ ಈ ಹಿಂದಿನ ನಾಲ್ಕು ದಿವಸಗಳಿಂದ ಸ್ವಯಂ ಹೋಮ್ ಕಾರಂಟೈನ್ ಆಗಿದ್ದ ಬಗ್ಗೆ ಸ್ಥಳಿಯರು ಮಾಹಿತಿ ನೀಡಿದ್ದಾರೆ.