ಕೋವಿಡ್ 19 ವೈರಸ್ ಕಾಟ ಮುಂದುವರಿದಿದೆ. ಇಂದಿನವರೆಗೆ ಭಾರತದಲ್ಲಿ 8.5 ಲಕ್ಷ ದಾಟಿರುವ ಕರೋನಾ ಸೋಂಕಿತರ ಸಂಖ್ಯೆ ಈ ತಿಂಗಳ ಅಂತ್ಯದೊಳಗೆ ದುಪ್ಪಟ್ಟಾಗುವ ಆತಂಕ ಎದುರಾಗಿದೆ. ರಾಜ್ಯ ಆರೋಗ್ಯ ಸಚಿವ ಬಿ.ಶ್ರೀರಾಮುಲು ರಾಜ್ಯ ಮತ್ತು ದೇಶದಲ್ಲಿ ಈಗಿರುವ ಕೋವಿಡ್ ಸೋಂಕಿತರ ಸಂಖ್ಯೆ ಈ ತಿಂಗಳ ಅಂತ್ಯದೊಳಗೆ ದುಪ್ಪಟಾಗುವ ಸಾಧ್ಯತೆಯ ವರದಿ ಬಗ್ಗೆ ಹೇಳಿದ್ದಾರೆ. ರಾಜ್ಯದಲ್ಲಿ ಕರೋನಾ ಸೋಂಕಿತರ ಸಾವಿನ ಸಂಖ್ಯೆ 600 ರನ್ನು ದಾಟಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ ಇಂದು ಕರೋನಾ ಸೋಂಕಿತರ ಸಂಖ್ಯೆ 13, ಈ 13 ರಲ್ಲಿ ಕಾರವಾರದ ಐದು, ಭಟ್ಕಳದ ಮೂರು,ಸಿದ್ಧಾಪುರದ ಎರಡು, ಕುಮಟಾ.ದಾಂಡೇಲಿ,ಹಳಿಯಾಳಗಳ ತಲಾ ಒಂದು ಪ್ರಕರಣಗಳು ಸೇರಿವೆ.
ಕಾರವಾರ ಮತ್ತು ಸಿದ್ಧಾಪುರದ ಸರ್ಕಾರಿ ಆಸ್ಫತ್ರೆಗಳ ತಲಾ ಒಂದೊಂದು ಸಿಬ್ಬಂದಿಗಳಲ್ಲಿ ಕರೋನಾ ದೃಢವಾಗಿದ್ದು ಸಿದ್ಧಾಪುರದ ಇನ್ನೊಂದು ಪ್ರಕರಣ ಕೂಡಾ ಈ ಆಸ್ಫತ್ರೆಯ ಲೆಕ್ಕಕ್ಕೇ ಸೇರುವ ಕೋವಿಡ್ ಪ್ರಕರಣ ಎನ್ನಲಾಗಿದೆ. ಕಾರವಾರ,ಭಟ್ಕಳ ಸೇರಿದಂತೆ ಜಿಲ್ಲೆಯಾದ್ಯಂತ ಬೆಂಗಳೂರಿನಿಂದ ಮರಳಿದವರಲ್ಲೇ ಕರೋನಾ ದೃಢಪಟ್ಟಿರುವುದು ಬೆಂಗಳೂರು ರಿಟರ್ನ್ಡ್ ಬಗ್ಗೆ ಜನತೆ ಜಾಗೃತಿ ವಹಿಸುವ ಅವಶ್ಯಕತೆಯನ್ನು ಒತ್ತಿ ಹೇಳಿದೆ.