

ನಿರೀಕ್ಷೆಯಂತೆ ಕೋವಿಡ್ ಈ ವಾರ ಉತ್ತರಕನ್ನಡಕ್ಕೆ ಮಾರಕವಾಗಲಿದೆ ಎನ್ನಲಾಗುತ್ತಿದೆ.
ಒಂದಂಕಿಯಿಂದ 2 ಅಂಕಿಗಳಿಗೆ ನೆಗೆದು ಈ ವಾರ ದಿನಕ್ಕೆ ಮೂರಂಕಿ ತಲುಪಲಿದೆ ಎನ್ನುವ ಸಮೀಕ್ಷೆ ನಿಜವಾಗುವಂತೆ ಪಾಸಿಟಿವ್ ಸಂಖ್ಯೆ ಏರುತ್ತಿದೆ. ರವಿವಾರ 13 ಸೋಂಕಿತರು ದಾಖಲಾದ ಪಟ್ಟಯಲ್ಲಿ ಇಂದು 73 ಎನ್ನುವ ಆಘಾತಕಾರಿ ಅಂಶ ಚರ್ಚೆಯಾಗುತ್ತಿದೆ.
ಸಿದ್ಧಾಪುರದ 120 ಮಾದರಿಗಳೊಂದಿಗೆ ಜಿಲ್ಲೆಯ 700 ಮಾದರಿಗಳಲ್ಲಿ ಕರೋನಾ ಪಾಸಿಟಿವ್ ಅಥವಾ ನೆಗೆಟಿವ್ ಇಂದು ದೃಢಪಡಬೇಕಿತ್ತು. ಆದರೆ ಈ ವರೆಗಿನ ಗಾಳಿಸುದ್ದಿ, ವರ್ತಮಾನಗಳ ಪ್ರಕಾರ ಸಿದ್ಧಾಪುರದ 120 ಕೇಸ್ ಗಳು ಸೇರಿ ಪ್ರತಿಶತ 70 ಕ್ಕಿಂತ ಹೆಚ್ಚು ಮಾದರಿಗಳಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ ಎನ್ನಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಇಂದಿನ ಒಟ್ಟೂ 73 ಕರೋನಾ ಪಾಸಿಟಿವ್ ಕೇಸ್ ಗಳಲ್ಲಿ ಕುಮಟಾದ್ದೇ ಸಿಂಹಪಾಲು ಎನ್ನಲಾಗುತ್ತಿದೆ. ಸಿದ್ಧಾಪುರದ 120 ಮಾದರಿಗಳಲ್ಲಿ 60 ಸರ್ಕಾರಿ ಆಸ್ಫತ್ರೆಗೆ ಸಂಬಂಧಿ ಸಿದ ಪ್ರಕರಣಗಳು, 60 ಬಹುತೇಕ ಬೆಂಗಳೂರು ಸೇರಿದಂತೆ ಹೊರಜಿಲ್ಲೆ ಹೊರ ರಾಜ್ಯಗಳ ಮಾದರಿಗಳು ಎನ್ನಲಾಗಿದೆ.
ಸಿದ್ಧಾಪುರದ 120 ರಲ್ಲಿ 90% ಕರೋನಾ ಸೋಂಕು ದೃಢವಾಗದ ಪ್ರಕರಣಗಳು ಎನ್ನುವಂತೆ ಜಿಲ್ಲೆಯ 700 ಮಾದರಿಗಳಲ್ಲೂ ಬಹುತೇಕ 90% ಕರೋನಾ ನೆಗೆಟಿವ ಎನ್ನಲಾಗುತ್ತಿದೆ. ಈ ಅಂದಾಜು ಗಾಳಿಸುದ್ದಿಗಳ ಲೆಕ್ಕಾ ಚಾರದ ಪ್ರಕಾರ ತೀರ್ಮಾನಕ್ಕೆ ಬಂದರೂ ಜಿಲ್ಲೆಯಲ್ಲಿ 70 ಕ್ಕಿಂತ ಹೆಚ್ಚು ಜನರಲ್ಲಿ ಇಂದು ಕರೋನಾ ದೃಢಪಡುವುದು ಪಕ್ಕಾ ಆದಂತಾಗಿದೆ. ಆ ಕರೋನಾ ಸೋಂಕಿತರ ಪಟ್ಟಿಯಲ್ಲಿ ಕುಮಟಾ ಮೊದಲ ಸ್ಥಾನದಲ್ಲಿದ್ದರೆ 2-3,4-5 ಸ್ಥಾನಗಳ ಪೈಪೋಟಿ ಯಾವ್ಯಾವ ತಾಲೂಕುಗಳಿಗೆ ಎನ್ನುವ ರಹಸ್ಯ ಕುತೂಹಲ ಮೂಡಿಸಿದೆ.
