

ನಿನ್ನೆ 69 ಪಾಸಿಟಿವ್,99 ನೆಗೆಟಿವ್
ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವಾರ ಕೂಡಾ ಕರೋನಾ ಆರ್ಭಟ ಮುಂದುವರಿದಿದ್ದು ಕಳೆದ ಎರಡ್ಮೂರು ದಿವಸಗಳಿಂದ 100 ರ ಆಸು-ಪಾಸಿನ ಸಂಖ್ಯೆಗಳ ಜನರಲ್ಲಿ ಕರೋನಾ ದೃಢಪಟ್ಟಿದೆ. ಸೋಮವಾರ 69 ಜನರಲ್ಲಿ ಕರೋನಾ ದೃಢಪಟ್ಟಿತ್ತು. ಇಂದು ಇಬ್ಬರು ಕರೋನಾ ರೋಗಿಗಳು ಮೃತರಾಗಿರುವ ಸುದ್ದಿಯಿದೆ.
ಶಿರಸಿಯ 76 ರ ವಯಸ್ಸಿನ ವೃದ್ಧ ಮತ್ತು ಭಟ್ಕಳದ 65 ವರ್ಷದ ವರ್ಷದ ವೃದ್ಧೆ ಮೃತರು ಈ ಇಬ್ಬರಲ್ಲೂ ಹಳೆಯ ಕಾಯಿಲೆಗಳಿದ್ದವು ಎನ್ನಲಾಗಿದೆ. ಒಂದೆಡೆ ಕರೋನಾ ಸೋಂಕಿತರು, ಕರೋನಾ ದಿಂದ ಮೃತರಾದವರ ಸಂಖ್ಯೆ ಹೆಚ್ಚುತಿದ್ದರೆ ಕರೋನಾ ದಿಂದ ಗುಣಮುಖರಾದವರ ಸಂಖ್ಯೆ ಕೂಡಾ ದೊಡ್ಡದು. ಈವಾರ ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಪ್ರಮಾಣ 200 ರ ಸಮೀಪವಿದ್ದರೆ ಗುಣಮುಖರಾದವರು 200 ಕ್ಕಿಂತ ಹೆಚ್ಚು ಉತ್ತರಕನ್ನಡ ಜಿಲ್ಲೆಯಲ್ಲಿ ಈವರೆಗೆ ಕರೋನಾ ಸೋಂಕಿತರ ಪ್ರಮಾಣ 1100 ರ ಸಮೀಪವಿದ್ದರೆ ಗುಣಮುಖರಾದವರ ಸಂಖ್ಯೆ 600ಕ್ಕಿಂತ ಹೆಚ್ಚು.
