ಯೋಜನೆಗಳು ತಕ್ಷಣದಿಂದ ಜಾರಿಗೆ ತರಲು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು -ಸಿದ್ಧರಾಮಯ್ಯ

ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಪತ್ರಿಕಾ ಹೇಳಿಕೆ

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೈಗೊಳ್ಳ ಬಹುದಾದ ತುರ್ತು ಕ್ರಮಗಳು

1. ಕೊರೊನಾ ಸೋಂಕಿನ‌ಭೀತಿಯ ಹಿನ್ನೆಲೆಯಲ್ಲಿ ವಿಳಂಬವಾಗಿಯಾದರೂ, ದೇಶದ ಬಡವರು, ರೈತರು ಮತ್ತು ಕೂಲಿಕಾರ್ಮಿಕರಿಗೆ ನೆರವಾಗಲು ಕೇಂದ್ರ ಸರ್ಕಾರ ಪ್ರಕಟಿಸಿರುವ ಯೋಜನೆಗಳನ್ನು ಸ್ವಾಗತಿಸುತ್ತೇನೆ.
2. ಈ ಪ್ಯಾಕೇಜ್ Too little Too Late ಎನ್ನುವ ಹಾಗಾಗಿದೆ
3. ದೇಶದಲ್ಲಿ ಮೊದಲ ಕೊರೋನಾ ವೈರಸ್ ಪ್ರಕರಣ ಪತ್ತೆಯಾದುದು ಜನವರಿ 30 ರಂದು ಕೊರೊನಾದಿಂದ ಗಂಭೀರ ಸ್ಥಿತಿ ನಿರ್ಮಾಣವಾಗಲಿದೆ ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ರಾಹುಲ್ ಗಾಂಧಿಯವರು ಫೆಬ್ರವರಿ 12 ರಂದು ಎಚ್ಚರಿಸಿದ್ದರು.
4. ಹೀಗಿದ್ದರೂ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳದೆ ನಿರ್ಲಕ್ಷ್ಯ ಮಾಡುತ್ತಾ ಬಂದಿರುವುದೇ ಈಗಿನ ಸ್ಥಿತಿಗೆ ಕಾರಣ.
5. ಈಗಾಗಲೇ ವಿಳಂಬವಾಗಿರುವುದರಿಂದ ಸರ್ಕಾರ ಪ್ರಕಟಿಸಿರುವ ಈ ಯೋಜನೆಗಳು ತಕ್ಷಣದಿಂದ ಜಾರಿಗೆ ತರಲು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡಬೇಕೆಂದು ಆಗ್ರಹಿಸುತ್ತೇನೆ.
6. ಬಹಳ ಮುಖ್ಯವಾಗಿ ಸಣ್ಣ ವ್ಯಾಪಾರಿಗಳು, ಅಟೋ, ಟ್ಯಾಕ್ಸಿ ಚಾಲಕರು ವಾಹನಗಳ ಖರೀದಿಸಲು ಬ್ಯಾಂಕುಗಳಿಂದ ಸಾಲ‌ಪಡೆದಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಅವರಿಗೆ ಉದ್ಯೋಗ ಇಲ್ಲ. ಅವರ ಸಾಲವನ್ನು ಭಾಗಶಃ ಮನ್ನಾ ಮಾಡಿ ಕನಿಷ್ಠ ಮೂರು ತಿಂಗಳ ಇಎಮ್‌ಐ ಪಾವತಿಯನ್ನು ಮುಂದೂಡಬೇಕು.
ಅಸಂಘಟಿತ ವಲಯದಲ್ಲಿರುವ ಕಾರ್ಮಿಕರ ಬದುಕು ಕಷ್ಟದಲ್ಲಿದೆ. ಕಾರ್ಮಿಕ ಇಲಾಖೆ ತುರ್ತಾಗಿ ಗಮನ ನೀಡಬೇಕು.

7. ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕರು ಮತ್ತು ಸಿಬ್ಬಂದಿ‌ ಹಾಗೂ ಬಂದ್ ಆಗಿರುವ ಹೊಟೇಲ್,ಮಾಲ್, ಚಿತ್ರಮಂದಿರಗಳ ಸಿಬ್ಬಂದಿ, ಡೆಲಿವರಿ ಬಾಯ್‌ಗಳು ಕೆಲಸ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಗಾರ್ಮೆಂಟ್ ಫ್ಯಾಕ್ಟರಿಗಳೂ ಸೇರಿದಂತೆ ಸಣ್ಣ ಕೈಗಾರಿಕೆಗಳು ಮುಚ್ಚಿವ ಇವರೆಲ್ಲರ ಉದ್ಯೋಗದಾತರು ಸಂಬಳ ಸಹಿತ ರಜೆ ನೀಡುವಂತೆ ಕಾರ್ಮಿಕ ಇಲಾಖೆ ನಿಗಾ ವಹಿಸಬೇಕು.
8. ಮಹಿಳೆಯರ ಜನಧನ ಖಾತೆಗೆ ಮಾತ್ರ ತಲಾ ೫೦೦ ರೂ.ಗಳ ಕಂತುಗಳಲ್ಲಿ ಒಂದು ೧,೫೦೦ ರೂಪಾಯಿ ಜಮೆ ಮಾಡಿರುವುದಾಗಿ ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ. ಈ ಸೌಲಭ್ಯವನ್ನು ಪುರುಷರಿಗೂ ವಿಸ್ತರಿಸಬೇಕು ಮತ್ತು ನೆರವಿನ ಮೊತ್ತವನ್ನು ಕನಿಷ್ಠ ೩೦೦೦ ರೂ.ಗಳಿಗೆ ಹೆಚ್ಚಿಸಬೇಕು
9. ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ಹೆಚ್ಚಿಸಬೇಕೆಂದು ಪ್ರಾರಂಭದಿಂದಲೂ ಹೇಳುತ್ತಾ ಬಂದಿದ್ದೆ. ಹಣಕಾಸು ಸಚಿವರು ಒಟ್ಟು ವಾರ್ಷಿಕ ಆರು ಸಾವಿರ ರೂಪಾಯಿಗಳಲ್ಲಿ ಎರಡು ಸಾವಿರ ರೂಪಾಯಿಯ ಒಂದು ಕಂತನ್ನು ಮುಂಗಡವಾಗಿ ಪಾವತಿಸುವುದಾಗಿ ನಿರ್ಮಲಾ‌ಸೀತಾರಾಮನ್ ಹೇಳಿದ್ದಾರೆ. ಇದು ಏನೇನೂ ಸಾಲದು. ಒಟ್ಟು ಮೊತ್ತವನ್ನು ಈಗಿನ ಆರು ಸಾವಿರ ರೂಪಾಯಿಗಳಿಂದ ಹನ್ನೆರಡು ಸಾವಿರ ರೂಪಾಯಿಗಳಿಗೆ ಏರಿಸಬೇಕು
10. ಆಹಾರ ಮತ್ತಿತರ ಅವಶ್ಯಕ ಸಾಮಗ್ರಿಗಳ ಮೇಲಿನ ಜಿ.ಎಸ್.ಟಿ.ಯನ್ನು ಮುಂದಿನ ಮೂರು ತಿಂಗಳ ಕಾಲ‌ ಕನಿಷ್ಢ ಶೇಕಡಾ ಐದರಷ್ಟು ಕಡಿತಗೊಳಿಸಬೇಕು.
11. ಬಹಳ ಸಂಖ್ಯೆಯಲ್ಲಿ ಲಾಕ್ ಡೌನ್ ಗಿಂತ ಮೊದಲು ಊರಿಗೆ ಹೋಗಲಾಗದೆ ಅನಿವಾರ್ಯವಾಗಿ ಬೆಂಗಳೂರು ನಗರ ಮತ್ತು ಜಿಲ್ಲಾ‌ಕೇಂದ್ರಗಳಲ್ಲಿಯೇ ಉಳಿದುಕೊಂಡಿದ್ದಾರೆ. ಅವರಿಗಾಗಿ ಆಶ್ರಯತಾಣಗಳನ್ನು ನಿರ್ಮಿಸಿ ಊಟ-ತಿಂಡಿಗೆ ವ್ಯವಸ್ಥೆ ಮಾಡಬೇಕು.
12. ಬಡವರಿಗೆ ನೆರವಾಗಲು ಯೋಜನೆಗಳನ್ನು ಘೋಷಿಸಿರುದ ಜೊತೆಯಲ್ಲಿ ಕೊರೊನಾ ಸೋಂಕು ಪೀಡಿತರ ಚಿಕಿತ್ಸೆಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಕೇಂದ್ರ ಸರ್ಕಾರ ಹೇಳಬೇಕಾಗಿತ್ತು.
13. ನಮ್ಮ ರಾಜ್ಯದ ಬೆಂಗಳೂರು,ಮೈಸೂರು,ಹಾಸನ ಮತ್ತು ಶಿವಮೊಗ್ಗದಲ್ಲಿ ಮಾತ್ರ ಕರೋನಾ ವೈರಸ್ ಪತ್ತೆ ಹಚ್ಚುವ ಐದು ಪರೀಕ್ಷಾ ಲ್ಯಾಬ್‌ಗಳಿವೆ. ಬಳ್ಳಾರಿ ಮತ್ತು ಕಲ್ಬುರ್ಗಿಗಳಲ್ಲಿ ಮಾತ್ರ ಕಫದ ಮಾದರಿ‌ ಸಂಗ್ರಹಿಸುವ ಕೇಂದ್ರಗಳಿವೆ. ಇಷ್ಟು ಮಾತ್ರ ಸಾಕೇ? ಪರಿಸ್ಥಿತಿ ಉಲ್ಭಣಿಸಿದರೆ ಏನು ಸಿದ್ಧತೆ ಇದೆ?
14. ತಕ್ಷಣ 2-3 ಜಿಲ್ಲೆಗಳಿಗೊಂದರಂತೆಯಾದರೂ ಮುಖ್ಯವಾಗಿ,ಉತ್ತರ ಕರ್ನಾಟಕದಲ್ಲಿ ಕರೋನಾ ವೈರಸ್ ಪರೀಕ್ಷಾ ಲ್ಯಾಬ್ ಗಳನ್ನು ಪ್ರಾರಂಭಿಸಬೇಕು.
15 ಟೆಸ್ಟಿಂಗ್ ಕಿಟ್‌ಗಳ ಕೊರತೆಯಿಂದಾಗಿ ಸೋಂಕಿತರ ಸಂಖ್ಯೆ ನಿಖರವಾಗಿ ತಿಳಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿಬಸಾಕಷ್ಟು ಪ್ರಮಾಣದಲ್ಲಿ ಟೆಸ್ಸಿಂಗ್ ಕಿಟ್‌ಗಳನ್ನು ಆಸ್ಪತ್ರೆಗಳಿಗೆ ಒದಗಿಸಬೇಕು.
16. ಎಲ್ಲ ಜಿಲ್ಲೆಗಳಲ್ಲಿ ಕಫದ ಮಾದರಿ‌ ಸಂಗ್ರಹ ಕೇಂದ್ರಗಳನ್ನು ತೆರೆಯಬೇಕು. ಐಸೋಲೇಷನ್ ಕೇಂದ್ರಗಳು ಮತ್ತು ಕೃತಕ ಉಸಿರಾಟದ ವ್ಯವಸ್ಥೆಯನ್ನು ಹೆಚ್ಚಿಸಬೇಕು.
17. ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಎಲ್ಲ ಕರೋನಾ ಸೋಂಕಿತರಿಗೆ ಚಿಕಿತ್ಸೆ ಕಲ್ಪಿಸುವುದು ಸಾಧ್ಯವಾಗಲಾರದು. ಜಿಲ್ಲೆಗಳಲ್ಲಿರುವ ಖಾಸಗಿ ಆಸ್ಪತ್ರೆಗಳನ್ನು ಕೂಡಾ ಬಳಸಿಕೊಳ್ಳಲು ಕ್ರಮಕೈಗೊಳ್ಳಬೇಕು. ಜಿಲ್ಲೆಗಳ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಬೇಕು.
18. ರಾಜ್ಯ ಸರ್ಕಾರ ಕೊರೋನಾ ರೋಗ ನಿಯಂತ್ರಿಸಲು ರೂ.200 ಕೋಟಿ ಮೀಸಲಿಟ್ಟಿದೆ ಎಂದು ಹೇಳಿದೆ. ಇದರಲ್ಲಿ ಪ್ರತಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸೌಲಭ್ಯ ಹಾಗೂ ಎಲ್ಲಾ ಜಿಲ್ಲಾ ಕೇಂದ್ರದ ಮುಖ್ಯ ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್ ಸೌಲಭ್ಯ ಈ ಕೂಡಲೇ ಕಲ್ಪಿಸಬೇಕು.
19. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಕೊರೋನಾ ಸೋಂಕಿತರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಬರ, ಪ್ರವಾಹ, ವ್ಯಾಪಾರ ವಹಿವಾಟು ಸ್ಥಗಿತದಿಂದ ಈಗಾಗಲೇ ಜನ ನೊಂದಿದ್ದಾರೆ, ಕೊರೋನಾ ಅವರ ಬದುಕು ಕಸಿಯದಿರಲಿ.
20. ಬಹುಪಾಲು ಜಿಲ್ಲೆಗಳಲ್ಲಿ ಕಂಟ್ರೋಲ್ ರೂಂಗಳನ್ನೆ ಇನ್ನೂ ಪ್ರಾರಂಭಿಸಿಲ್ಲ.
21. ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ನೀಡುವ ಪೌಷ್ಟಿಕ ಆಹಾರದ ಕುರಿತು ಇನ್ನೂ ತೀರ್ಮಾನವಾಗಿಲ್ಲ.
22. ಜೀವನಾವಶ್ಯಕ ವಸ್ತುಗಳ ಮಾರಾಟ ಕುರಿತು ನೀಡಬೇಕಾದ ಪಾಸ್ ಗಳ ಕುರಿತು ಜಿಲ್ಲೆಗಳಲ್ಲಿ‌ ಸ್ಪಷ್ಟತೆ ಇಲ್ಲ.
23. ಬೆಂಗಳೂರಿನಲ್ಲೆ DCP ಕಛೇರಿಯಲ್ಲಿ ಪಾಸ್ ವಿತರಿಸುವ ವ್ಯವಸ್ಥೆ ಇದೆ .ಅಲ್ಲಿಯವರೆಗೆ ಬಡವ್ಯಾಪಾರಿಯೊಬ್ಬ ಹೋಗಲಾಗುವುದೆ?
ಕನಿಷ್ಟ ACP ಗೆ ಈ ಅಧಿಕಾರ ವರ್ಗಾಯಿಸಿ
20. ಸರ್ಕಾರದ ಆದೇಶಕ್ಕಾಗಿ ಕಾಯದೆ ಸ್ವಯಂಪ್ರೇರಿತರಾಗಿ ಸ್ವಯಂದಿಗ್ಭಂಧನಕ್ಕೊಳಪಡಿಸಿಕೊಳ್ಳುವುದು ಇನ್ನು ಕೆಲವು ದಿನ‌ ಜನತೆಯ ದಿನಚರಿಯಾಗಲಿ. ಆರೋಗ್ಯ ಇಲಾಖೆಯ ಮುನ್ನೆಚ್ಚರಿಕೆ ಕ್ರಮಗಳು ನಮ್ಮ ಜೀವನ ವಿಧಾನವಾಗಲಿ.
21. ಕರೊನಾ ವೈರಸ್ ವಿರುದ್ಧ ಒಗ್ಗಟ್ಟಿನಿಂದ ಹೋರಾಡೋಣ. ಬಂದ್, ಕರ್ಫ್ಯೂ, ಲಾಕ್‌ಡೌನ್‌ಗಳ ಜೊತೆಗೆ ಈ ಎಲ್ಲ ಆದೇಶಗಳನ್ನು ಸ್ವಯಂಪ್ರೇರಿತರಾಗಿ ಪಾಲಿಸುತ್ತಿರುವ ಜನತೆಯ ಕಡೆ ರಾಜ್ಯ ಸರ್ಕಾರ ಗಮನಕೊಡಬೇಕು.
22. ವೈದ್ಯಕೀಯ ಕ್ಷೇತ್ರ ನಮ್ಮ ರಾಜ್ಯದ ದೊಡ್ಡ ಶಕ್ತಿ.ವೈದ್ಯಕೀಯ ಕಾಲೇಜುಗಳು, ನರ್ಸಿಂಗ್ ಮತ್ತಿತರ ಅರೆವೈದ್ಯಕೀಯ ತರಬೇತಿ ಕಾಲೇಜುಗಳು ನಮ್ಮಲ್ಲಿಯೇ ಹೆಚ್ಚು. ಈ ಕಾಲೇಜುಗಳ ಹಿರಿಯ ವಿದ್ಯಾರ್ಥಿಗಳನ್ನು ಕೊರೊನಾ ವಿರುದ್ದದ ಸಮರಕ್ಕೆ ಬಳಸಿಕೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಯೋಚನೆ ಮಾಡಬೇಕು. ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿಯಾಗಿರುವ‌ ಮತ್ತು ಆ ಇಲಾಖೆಯಲ್ಲಿ ಕೆಲಸ ಮಾಡಿ ಈಗ ಬೇರೆ ಇಲಾಖೆಗಳಲ್ಲಿರುವ ಅಧಿಕಾರಿಗಳ‌ ಅನುಭವವನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಬೇಕು.
23. ಪ್ರಕೃತಿ ಭಾರತದ ಪಾಲಿಗೆ ಕರುಣಾಮಯಿಯಾಗಿ, ಕರೋನಾ ಹೆಮ್ಮಾರಿಯನ್ನು ಎದುರಿಸಲು ಸಿದ್ಧತೆ ನಡೆಸಲಿಕ್ಕಾಗಿ ಸಮಯವಕಾಶ ನೀಡಿದೆ. ಈ ಸಮಯವನ್ನು ಮಾತುಗಳಲ್ಲಿಯೇ ವ್ಯರ್ಥಮಾಡದೆ ಸಮರೋಪಾದಿಯಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಂದಾಗಬೇಕು.
24. ಸಾಮಾನ್ಯ ಜನತೆಯನ್ನು ಗಮನದಲ್ಲಿಟ್ಟುಕೊಂಡು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೋನಾ ಸೋಂಕು ಎದುರಿಸಲು ಕೈಗೊಂಡಿರುವ ಕ್ರಮಗಳು ಮಾದರಿಯಾಗಿವೆ. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಸಹ ಕೇರಳ ರಾಜ್ಯದ ಕ್ರಮಗಳನ್ನು‌ ಗಮನಕ್ಕೆ ತೆಗೆದುಕೊಳ್ಳಬೇಕು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *