ಕರೋನಾ ಆತಂಕದ ನಡುವೆ ಕರೋನಾ ಸುಳ್ಳುಸುದ್ದಿಗಳ ಅವಾಂತರ ಹೆಚ್ಚುತ್ತಿದೆ. ಈ ಬಗ್ಗೆ ಜನಜಾಗೃತಿ ಮಾಡುವ ಪ್ರಯತ್ನ ಒಂದು ಶಿರಸಿಯಲ್ಲಿ ನಡೆದಿದೆ. ಸ್ಥಳಿಯ ಹವಿಗನ್ನಡ, ಲೋಕಲ್ ಕಲಾವಿದರನ್ನು ಬಳಸಿಕೊಂಡು ಯುವಕರು ತಯಾರಿಸಿದ ಕರೋನಾ ಅವಾಂತರ ಕಿರುಚಿತ್ರ ಈಗ ಸುದ್ದಿಯಾಗುತ್ತಾ ಸದ್ದುಮಾಡುತ್ತಿದೆ. ಲಿಂಕ್ ಮತ್ತು ವಿವರ ಹೀಗಿವೆ.
ಕಥೆ, ಚಿತ್ರಕಥೆ, ನಿರ್ದೇಶನ: ಪ್ರಸಾದ ಹೆಗಡೆ
ಛಾಯಾಗ್ರಹಣ : ಪ್ರಸಾದ ಹೆಗಡೆ, ಉತ್ತಮ ಹೆಗಡೆ
ಎಲ್ಲರಿಗೂ ನಮಸ್ಕಾರ
ಈಗಂತೂ ಎಲ್ಲಿ ನೋಡಿದ್ರು ಕೊರೊನಾ ದೆ ಸುದ್ದಿ, ಟಿವಿ, ನ್ಯೂಸ್ ಪೇಪರ್, ಮತ್ತು ಸೊಷಿಯಲ್ ಮಿಡಿಯಾ, etc etc. ಅದನ್ನ ಬಿಟ್ಟು ಅಚ್ಚಿಚ್ಚೆ ಮನೆಯುವ್ರ ಬಾಯಲ್ಲಿ ಊರಮೇಲಿನ ಸುದ್ದಿ ಸಂತಿಗೆ ಕೊರೊನಾ ಸುದ್ದಿ ನೆ ಹೈಲೈಟ್ ಆಗ್ತಾ ಇದ್ದು. ಇದೆಲ್ಲದರ ಮಧ್ಯೆ ಗಾಳಿ ಸುದ್ದಿನೂ ಹಬ್ತಾ ಇದ್ದು. ಅಲ್ಲಿ ಬಂಜಡ ಇಲ್ಲಿ ಬಂಜಡ ಹೇಳಿ ಹೇಳ್ತಾ.
ಕಡಿಗೆ ಹೆಳದೆಂತು ಕೆಳಿದ್ರೆ……………. ಅದು ಸುಳ್ಳೆಯಡ..
ದಯವಿಟ್ಟು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಬೇಡಿ
- ರಾಜಲಕ್ಷ್ಮಿ ಹೆಗಡೆ