

ಇಂದು ದೃಢಪಟ್ಟ ಉತ್ತರ ಕನ್ನಡ ಜಿಲ್ಲೆಯ 120 ಕರೋನಾ ಸೋಂಕಿತರನ್ನು ಸೇರಿ ಜಿಲ್ಲೆಯ ಕರೋನಾ ಸೋಂಕಿತರ ಸಂಖ್ಯೆ 2027ಕ್ಕೆ ಮುಟ್ಟಿದೆ. ಎಂದಿನಂತೆ ಹಳಿಯಾಳದಲ್ಲಿ ಅತಿಹೆಚ್ಚು28, ಮುಂಡಗೋಡಿನಲ್ಲಿ 26, ಕುಮಟಾದಲ್ಲಿ18, ಭಟ್ಕಳದಲ್ಲಿ13, ಕಾರವಾರ- ಅಂಕೋಲಾಗಳಲ್ಲಿ ತಲಾ 11, ಜೊಯಡಾದಲ್ಲಿ 4 ಸೇರಿ ಒಟ್ಟೂ 120 ಜನರಲ್ಲಿ ಕರೋನಾ ದೃಢಪಟ್ಟಿದೆ.
ಜಿಲ್ಲೆಯಲ್ಲಿ ಈವರೆಗೆ 1268 ಜನರು ಸೋಂಕುಮುಕ್ತರಾಗಿದ್ದು ಅವರಲ್ಲಿ ಸಿದ್ಧಾಪುರದ 30 ಜನರೂ ಸೇರಿದ್ದಾರೆ. ಹೊರಜಿಲ್ಲೆಯಲ್ಲಿ ಮೃತಪಟ್ಟವರೂ ಸೇರಿ ಜಿಲ್ಲೆಯಲ್ಲಿ ಕೋವಿಡ್ ಪೀಡಿತರ ಮರಣದ ಸಂಖ್ಯೆ 25.
ದೇಶದಲ್ಲಿ ಕೋವಿಡ್ ಪ್ರಮಾಣ ಹೆಚ್ಚುತಿದ್ದು ವಿಶ್ವದ ಅತಿಹೆಚ್ಚು ಕರೋನಾ ಸೋಂಕಿತರಿರುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ದೇಶದಲ್ಲಿ ಈವರೆಗೆ ಕರೋನಾ ಸೋಂಕಿತರ ಪ್ರಮಾಣ 15 ಲಕ್ಷಕ್ಕೂ ಹೆಚ್ಚು ದೇಶದ ಪ್ರತಿಶತ 7 ಜನರಲ್ಲಿ ಮಾತ್ರ ಈವರೆಗೆ ಕೋವಿಡ್ ಪರೀಕ್ಷೆ ನಡೆದಿದೆ. ದೇಶದಲ್ಲಿ ಕರ್ನಾಟಕ ಮೂರನೇ ಸ್ಥಾನದಿಂದ 2 ನೇ ಸ್ಥಾನದತ್ತ ಸಾಗುತ್ತಿದೆ. ಇಂಥ ಆತಂಕಕಾರಿ ವಿಚಾರಗಳ ನಡುವೆ ಸಿದ್ಧಾಪುರ ತಾಲೂಕಿನಲ್ಲಿ ಈವರೆಗೆ ದೃಢಪಟ್ಟ ಕರೋನಾ ಸೋಂಕಿತ 30 ರಲ್ಲಿ 30 ಜನರೂ ಗುಣಮುಖರಾಗುವ ಮೂಲಕ ಸಿದ್ಧಾಪುರ ರಾಜ್ಯ, ಜಿಲ್ಲೆಯಲ್ಲಿ ಕರೋನಾಮುಕ್ತ ತಾಲೂಕಾದಂತಾಗಿದೆ.
