ಪುನೀತ್‌ ಮಾಮ ಮತ್ತು ಮಗಳ ಬೇಡಿಕೆ

ಯಾರಿಗೆ ಯಾರಿಷ್ಟ ಯಾಕೆ ಅದು ನನ್ನ ವ್ಯವಹಾರವಲ್ಲ, ನಾನದರ ಬಗ್ಗೆ ಆಸಕ್ತಿ ವಹಿಸುವುದೂ ಇಲ್ಲ. ಆದರೆ ಕಮಲ್‌ ಹಾಸನ್‌, ನಾನಾ ಪಾಟೇಕರ್‌ ಬಿಟ್ಟರೆ ನನಗೆ ಇಷ್ಟದ ನಟರೆಂದರೆ… ಶಾರುಖ್, ಅಮೀರ್‌ ಖಾನ್‌, ಶಿವರಾಜ್‌ ಕುಮಾರ್‌ ಇತ್ಯಾದಿ… ಇದರ ಮಧ್ಯೆ ರಾಜ್‌ ಕುಮಾರ ಮತ್ತು ಪುನೀತ್‌ ನನ್ನ ಆಯ್ಕೆ ಅಲ್ಲ ಎಂದರೆ ಸುಳ್ಳುಹೇಳಿದಂತಾಗುತ್ತದೆ.

ಕಳೆದ ತಿಂಗಳು ಪುನೀತ್‌ ಜೋಗಕ್ಕೆ ಬಂದು ನಮ್ಮ ಸೋಮಣ್ಣರಿಂದ ಚಾಕುಡಿದು ಹೋದ ಕೆಲವೇ ಕ್ಷಣಗಳ ನಂತರ ನಮ್ಮ ಕುಟುಂಬ ಜೋಗದಲ್ಲಿತ್ತು. ಸೋಮಣ್ಣರ ಮಾತು ಕೇಳಿದ ದೊಡ್ಡ ಮಗಳು ಸಸ್ಯ, ಪಪ್ಪಾ ಪುನೀತ್‌ ಮಾಮರನ್ನು ತೋರಸ್ತೇನಿ ಎಂದಿದ್ದಿಯಲ್ಲ ನೀನು ಎಂದು ಕಿವಿಹಿಡಿದು ಕೇಳಿದಳು. ಒಕೆ ಮಗಾ ಪುನೀತರನ್ನೇ ಕರೆಸೋಣ ಒಂದ್ಸಾರಿ ಎಂದು ಪೂಷಿಬಿಟ್ಟಿದ್ದೆ .

ಮಗಳಿಗೆ ಪುನೀತ್‌ ಮಾಮ ಯಾಕೆ ಇಷ್ಟ ಎನ್ನುವುದೂ ನನಗೆ ಬೇಡದ ವಿಷಯ.

ಪುನೀತ್‌ ಪ್ರಥ್ವಿ ಸಿನೇಮಾ ಮಾಡಿದ ಮೇಲೆ ಅನೇಕರು ಜಿಲ್ಲಾಧಿಕಾರಿ ಆಗಬೇಕು ಎಂದುಕೊಂಡಿರುವವರ ಬಗ್ಗೆ ಮಗಳಿಗೆ ಹೇಳಿದ್ದೆ.

ಸೊರಬಾದ ದೇವರಾಜ್‌ ಈಗ ಬೆಂಗಳೂರಿನಲ್ಲಿ ಉಪವಿಭಾಗಾಧಿಕಾರಿ ಅವರು ನಮ್ಮೂರಲ್ಲಿ ಕೃಷಿ ಅಧಿಕಾರಿಯಾಗಿ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಅಧಿಕಾರಿಯಾಗಿರುವ ಅವರು ನನ್ನ ಸಂದರ್ಶನ ಒಂದರಲ್ಲಿ ನಾನೂ ಸ್ಫರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಕಾರಣ ನನ್ನ ಅಪ್ಪ ಮತ್ತು ಪುನೀತ್‌ ರ ಪ್ರಥ್ವಿ ಮೂವಿ ಎಂದಿದ್ದರು.

ಹೀಗೆ ಸಿನೆಮಾ ಮತ್ತು ನಟರು ಬೆಳ್ಳಿಪರದೆಯಿಂದ ಅನೇಕರನ್ನು ಪ್ರಭಾವಿಸಬಲ್ಲರು ಎಂಬುದನ್ನು ಕಲಿಸಿದ ಉಪಾನ್ಯಾಸಕ ನಾನು. ಪುನೀತ್‌ ಬಗ್ಗೆ ಭಾವನಾತ್ಮಕವಾಗಿ ಯೋಚಿಸದೆ ಪ್ರಾಯೋಗಿಕವಾಗಿ ವಿಮರ್ಶಿಸಿದರೂ ಪುನೀತ್‌ ಅಪ್ಪ- ಅಣ್ಣನಂತೆ ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸುವ, ಪ್ರತಿಬಿಂಬಿಸುವ ಆಯ್ಕೆಗಳನ್ನು ಮಾಡಿದ ನಿಜ ನಾಯಕ.

ಪುನೀತ್‌ ರ ಮೈತ್ರಿ-ಅಮರಾವತಿ, ಯುವರತ್ನ, ರಾಜಕುಮಾರ ಸೇರಿದಂತೆ ಅನೇಕ ಚಿತ್ರಗಳನ್ನು ಕಣ್ತುಂಬಿಸಿಕೊಂಡವರಿಗೆ ಪುನೀತ್‌ ಸಾವು ಮರೆಯದ ನೋವು. ಪುನೀತ್‌,ರಾಜಕುಮಾರ್‌ ಅವರ ದೊಡ್ಮನೆ ಕುಟುಂಬ ಸಿನೆಮಾಗಳ ಮೂಲಕ ಸಾಮಾಜಿಕ ಮೌಲ್ಯಗಳ ಮಹತ್ವ ಸಾರಿರುವ ಕಾರಣಕ್ಕೆ ಅವರ ಬಗ್ಗೆ ಕನ್ನಡಿಗರಿಗೆ ಗೌರವ ಇರಲೇಬೇಕು. ಆದರೆ ಪುನೀತ್‌ ರನ್ನು ಎಳೆಯರು ಇಷ್ಟಪಡಲು ಕಾರಣ ಎನು ಎನ್ನುವ ಜಿದ್ಞಾಸೆ ಈಗಲೂ ನನ್ನಲ್ಲಿದೆ. ಘನತೆವೆತ್ತ ಕುಟುಂಬದ ಪುನೀತ್‌, ಶಿವರಾಜ್‌, ರಾಘವೇಂದ್ರ ರಾಜ್‌ ಕುಮಾರ ಗಳೆಲ್ಲ ನಮ್ಮೂರ ಸಂಬಂಧಿಕರು ಎನ್ನುವುದನ್ನು ಮೀರಿ ಕೋಟ್ಯಾಂತರ ಜನರು ಅವರನ್ನು ಆರಾಧಿಸುವ ಹಿಂದೆ ಅವರ ಶ್ರಮ, ಸರಳತೆ ಕಾರಣ ಎನ್ನುವ ಸತ್ಯ ಅರಿಯದವ ಕೋಮುವಾದಿಯಾಗಬಹುದಷ್ಟೇ.

ನನ್ನ ಮಗಳ ಪುನೀತ್‌ ಮಾಮ ಈ ವಯಸ್ಸಿನಲ್ಲಿ ಹೀಗೆ ಕೊನೆಯಾಗಬಾರದಿತ್ತು ಎನ್ನುವುದಷ್ಟೇ ನನ್ನ ವೇದನೆಯ ಮೂಲ. ಪುನೀತ್‌ ಮತ್ತೆ ಜೀವಂತ ಬರಬಾರದೆ ಮಕ್ಕಳ ಪ್ರೀತಿಗಾಗಿಯಾದರೂ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *