about adc h.k. krushnamoorty-ಸೇವಾ ಸರ್ವೋತ್ತಮ ಕೃಷ್ಣಮೂರ್ತಿ ಯವರಿಗೆ ವ್ಯಾಪಕ ಸ್ವಾಗತ ಸಿಗಲು ಕಾರಣವೇನು?

ಉತ್ತರಕನ್ನಡ ಜಿಲ್ಲೆಗೆ ಅಪರ ಜಿಲ್ಲಾಧಿಕಾರಿಯಾಗಿ ಆಗಮಿಸಿರುವ ಎಚ್.ಕೆ.ಕೃಷ್ಣಮೂರ್ತಿಯವರಿಗೆ ಕರಾವಳಿ-ಮಲೆನಾಡಿನಾದ್ಯಂತ ವ್ಯಾಪಕ ಸ್ವಾಗತ, ಪ್ರೀತಿಯ ಆಮಂತ್ರಣ ದೊರೆತಿದೆ. ಹೀಗೆ ವ್ಯಾಪಕ ಸ್ವಾಗತ ಸ್ವೀಕರಿಸಿರುವ ಕೃಷ್ಣಮೂರ್ತಿ ಶಿವಮೊಗ್ಗ ಜಿಲ್ಲೆಯ ಸಾಗರದ ಮಂಡಗಳಲೆಯವರು,ಅವರು ಉತ್ತರ ಕನ್ನಡದ ಸಿದ್ಧಾಪುರದ ಅಳಿಯ ಅದಕ್ಕಿಂತ ಹೆಚ್ಚಾಗಿ ಅವರು ಉತ್ತರ ಕನ್ನಡ ಶಿವಮೊಗ್ಗ,ಮಂಗಳೂರುಗಳಿಗೆ ಆಪ್ತರಾಗಲು ಕಾರಣ ಅವರ ಸೇವೆಯ ವೈಖರಿಮತ್ತು ಸ್ವಭಾವದ ಸೊಬಗು ಕಾರಣ ಎಂದರೆ ಅತಿಶಯೋಕ್ತಿಯಲ್ಲ.

ಇಪ್ಪತ್ತು ವರ್ಷಗಳ ಹಿಂದೆ ತಹಸಿಲ್ಧಾರರಾಗಿ ನೇಮಕವಾದಾಗ ಹಾನಗಲ್ ನಿಂದ ಪ್ರಾರಂಭಿಸಿ ಹಳೆಮೈಸೂರುಭಾಗ, ಕರಾವಳಿ, ಮಲೆನಾಡಿನಲ್ಲೇ ಸೇವೆ ಸಲ್ಲಿಸಿದ್ದಾರೆ. ಈ ಸೇವೆಯುದ್ದಕ್ಕೂ ಕೃಷ್ಣಮೂರ್ತಿಯವರ ಜನಪರ ಆಡಳಿತ ಅವರನ್ನು ಈ ಭಾಗದ ಜನಾನುರಾಗಿಯನ್ನಾಗಿಸಿದೆ. ಶಿರಸಿ, ಶಿವಮೊಗ್ಗ, ಪುತ್ತೂರು, ಕೆ.ಆರ್ ಪೇಟೆಗಳಲ್ಲಿ ತಹಸಿಲ್ಧಾರ, ಉಪವಿಭಾಗೀಯ ಅಧಿಕಾರಿಯಾಗಿ ಹೆಸರು ಮಾಡಿರುವ ಇವರಿಗೆ ಕೆ.ಆರ್. ಪೇಟೆಯಲ್ಲಿ ಉತ್ತಮ ಚುನಾವಣಾಧಿಕಾರಿ, ಶಿವಮೊಗ್ಗದಲ್ಲಿ ಸೇವಾ ಸರ್ವೋತ್ತಮ ಪುರಸ್ಕಾರಗಳು ಲಭಿಸಿವೆ. ಈ ಗೌರವ, ಪ್ರಶಸ್ತಿಗಳಿಗಿಂತ ಹಿಂದಿನ 20 ವರ್ಷಗಳ ಅವರ ಜೀವನಾನುಭವ ಕೃಷ್ಣಮೂರ್ತಿಯವರನ್ನು ಮಾನವೀಯ ಅಧಿಕಾರಿಯನ್ನಾಗಿಸಿತೆ? ಎಂದು ಪ್ರಶ್ನಿಸಿದರೆ ಅವರ ಆಪ್ತರು, ಹಿತೈಶಿಗಳೆಲ್ಲಾ ಹೌದು ಎನ್ನುತ್ತಾರೆ.
ಬಾಲಕ ಕೃಷ್ಣಮೂರ್ತಿ ಮಂಡಗಳಲೆಯ ಕೃಷಿ ಕುಟುಂಬದ ಕುಡಿ, ಇನ್ನಿಬ್ಬರು ಸಹೋದರರಂತೆಯೇ ಮಂಡಗಳಲೆ, ನಂತರ ತಾಳಗುಪ್ಪಾದ ಚೂರಿಕಟ್ಟೆಯ ಹತ್ತಿಪ್ಪತ್ತು ಕಿಲೋ ಮೀಟರ್ ದೂರದ ಪ್ರೌಢಶಾಲೆ, ಕಾಲೇಜುಗಳಿಗೆ ಕಾಲ್ನಡಿಗೆಯಲ್ಲೇ ಬರುತಿದ್ದ ಪ್ರತಿಭಾವಂತ ವಿದ್ಯಾರ್ಥಿ ಸಾಗರದಲ್ಲಿ ಪದವಿಮಾಡಿ, ಸ್ನಾತಕೋತ್ತರ ಪದವಿಧರರಾಗಿ ಎರಡ್ಮೂರು ಕಾಲೇಜುಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತಿದ್ದಾಗ ದಿನಕ್ಕೆ ಗಳಿಸುತಿದ್ದುದು ನೂರರ ಲೆಕ್ಕದ ವೇತನ.

ನಂತರ ಕ.ಲೋ.ಸೇ.ಆ. ದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ತಹಸಿಲ್ಧಾರರರಾಗುತ್ತಾರೆ. ಎಳೆವಯಸ್ಸಿನಲ್ಲಿ ಕಂಡುಂಡ ನೋವು ನಲಿವುಗಳ ಆಧಾರದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಾ ಜನಪರ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಾರೆ. ಇಂಥ ಗ್ರಾಮೀಣ, ಬಡತನದ ಹಿನ್ನೆಲೆಯ ವ್ಯಕ್ತಿ ಸೇವೆ ಸಲ್ಲಿಸಿದ ಕಡೆಗಳಲ್ಲೆಲ್ಲಾ ಜನಪರ ಎಂದು ಕರೆಸಿಕೊಳ್ಳುವ ಹಿಂದೆ ಅವರ ಶ್ರಮವಿದೆ. ಶಿರಸಿ- ಹೊಸನಗರ, ಶಿವಮೊಗ್ಗ. ಕೆ.ಆರ್. ಪೇಟೆ, ಪುತ್ತೂರು ಹೀಗೆ ಇದೇ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಿ ಜನಪ್ರೀಯರಾದ ವಿರಳ ಅಧಿಕಾರಿಗಳಲ್ಲಿ ಕೃಷ್ಣಮೂರ್ತಿ ಒಬ್ಬರು. ಕಾರವಾರಕ್ಕೆ ತೆರಳಿ ಇವರನ್ನು ಅಭಿನಂದಿಸಿ, ಶುಭಕೋರುತ್ತಿರುವ ಸಾರ್ವಜನಿಕರಿಗೆ ಕೃಷ್ಣಮೂರ್ತಿ ಗೆಳೆಯ, ಆಪ್ತ, ಸಂಬಂಧಿಗಿಂತ ಹೆಚ್ಚಾಗಿ ಹೃದಯವಂತ, ಜನಪರ ಅಧಿಕಾರಿ.ಅವರಿಗೆ, ಅವರ ಪರಿಶ್ರಮದ ಪ್ರಾಮಾಣಿಕ ಸೇವೆಗೆ ಸಮಾಜಮುಖಿ ಶುಭಕೋರಿ ಅಭಿನಂದಿಸುತ್ತದೆ.

( another achiver)ಪ್ರಗತಿಪರ ಕೃಷಿಕನ ನೀರಿಂಗಿಸುವ ಕೆಲಸಕ್ಕೆ ಅಪಾರ ಮೆಚ್ಚುಗೆ
ಹೆಸರು-ದ್ಯಾವಾ ನಾಯ್ಕ ಯಾನೆ,ಡಿ.ಕೆ. ನಾಯ್ಕ, ಊರು-ತೆಂಗಿನಮನೆ, ಹವ್ಯಾಸ-ಸಾಮಾಜಿಕ ಕೆಲಸ, ರಾಜಕೀಯ
ಹೀಗೆ ಪರಿಚಯಿಸಬಹುದಾದ ಡಿ.ಕೆ.ನಾಯ್ಕರ ಮನೆಗೆ ಕಾರವಾರ ಆಕಾಶವಾಣಿಯ ರಾಮಡಗಿಯವರೊಂದಿಗೆ ತೆರಳಿದ್ದೆ. ರಾಮಡಗಿ ಮತ್ತು ನಮ್ಮ ತಂಡ ಕಂಡ ಡಿ.ಕೆ.ನಾಯ್ಕ ತಮ್ಮ ಎಂದಿನ ಸರಳತೆಯಲ್ಲಿ ನಮ್ಮನ್ನು ಕರೆದು ಉಪಚರಿಸಿದ್ದರು. ನಾಲ್ಕೈದು ಎಕರೆ ಜಾಗದ ಬಹುತೇಕ ಅಡಿಕೆ ಮರಗಳಲ್ಲಿ ನಳನಳಿಸುತಿದ್ದ ಕಾಳುಮೆಣಸಿನ ಬಳ್ಳಿಗಳ ಎಲೆ ಸವರಿ ಹ್ಯಾಗಿದೆ ನೋಡಿ ಈ ಬಳ್ಳಿಗಳಿಂದ 5-6 ಕ್ವಿಂಟಾಲ್ ಕಾಳು ಮೆಣಸು ಕೊಯ್ದಿದ್ದೇನಿ ಎಂದು ಖುಷಿಯಿಂದ ಹೇಳಿದ್ದರು. ಕಾಳುಮೆಣಸು ಬೆಳೆಯುವ ಬಗೆಯನ್ನು ವಿವರಿಸಿದ್ದರು. ತಾಲೂಕಿನ ಪ್ರಮುಖ ಕಾಳುಮೆಣಸು ಬೆಳೆಗಾರರಲ್ಲಿ ಒಬ್ಬರಾಗಿದ್ದ ಡಿ.ಕೆ.ನಾಯ್ಕರ ತೋಟ,ಕಾಳುಮೆಣಸು ನೋಡಿ ನಾವೂ ಖುಷಿಪಟ್ಟಿದ್ದೆವು. ಮತ್ತೊಮ್ಮೆ ಬನ್ನಿ ಎಂದು ನಮಗೆ ಆಹ್ವಾನ ನೀಡಿದ್ದ ಡಿ.ಕೆ.ನಾಯ್ಕರನ್ನು ಮತ್ತೊಮ್ಮೆ ಕಂಡು ಬರಬೇಕೆಂಬ ಆಸೆ ಫಲಿಸಿರಿರಲಿಲ್ಲ………… visit-samajamukhi.net & samajamukhi kannesh youtube channel

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

ಬಿ.ಜೆ.ಪಿ. & ಕಾಂಗ್ರೆಸ್‌ ಗಳಿಂದ ತುಷ್ಟೀಕರಣದ ಸ್ಫರ್ಧೆ… ಕಾಂಗ್ರೆಸ್‌ ಬಸ್ಮಾಸುರ,ಬಿ.ಜೆ.ಪಿ. ಬಕಾಸುರ….

ಮುಸ್ಲಿಂ ಅಲ್ಪಸಂಖ್ಯಾತರನ್ನು ಒಲೈಸುವಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ಗಳು ಸ್ಫರ್ಧೆ ನಡೆಸಿದ್ದು ಅಪಾಯಕಾರಿ ನಡೆಗಳಲ್ಲಿ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಿಂತಿವೆ ಎಂದು...

ಬಹಿರಂಗ ಶುದ್ಧಿ ಜೊತೆಗೆ ಅಂತರಂಗ ಶುದ್ಧಿ ಮಹತ್ವ

ಸಿದ್ದಾಪುರದಲ್ಲಿ ಪವಿತ್ರ ರಂಜಾನ್ ಸಂಭ್ರಮಾಚರಣೆಸಿದ್ದಾಪುರ :31ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಆಚರಿಸಿದ ಮುಸ್ಲಿಮ್ ಬಾಂಧವರು ಪವಿತ್ರ ರಂಜಾನ್ (ಈದ್ ಉಲ್ ಫಿತ್ರ )ಹಬ್ಬವನ್ನು...

samajamukhi.net exclusive- ಇಂದು ಕರ್ನಾಟಕ….ಪತ್ರಕರ್ತ ವಿಶ್ವಾಮಿತ್ರ ಹೆಗಡೆ ವಿಧಿವಶ,ಶಿರಸಿಗೆ ಬಾರದ ಗೃಹಸಚಿವ,ಹಳದೋಟದಲ್ಲಿ ನಡೆಯಿತು ಸೇನಾವಿಧಿ!

ಶಿರಸಿಯ ಹಿರಿಯ ಪತ್ರಕರ್ತ ವಿಶ್ವಾಮಿತ್ರ ಹೆಗಡೆ ಭತ್ತಗುತ್ತಿಗೆ ಇಂದು ವಿಧಿವಶರಾಗಿದ್ದಾರೆ. ಪ್ರತಿಷ್ಠಿತ ಭತ್ತಗುತ್ತಿಗೆ ಕುಟುಂಬದ ವಿಶ್ವಾಮಿತ್ರ ಹೆಗಡೆ ಕನ್ನಡಪ್ರಭ,ವಿಶ್ವವಾಣಿ ಸೇರಿದಂತೆ ಕೆಲವು ಪತ್ರಿಕೆಗಳಲ್ಲಿ ಕೆಲಸಮಾಡಿದ್ದರು....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *