

ಈ ವಾರದ ಪ್ರಾರಂಭದಿಂದ ಸುರಿಯುತ್ತಿರುವ ಮಳೆ ಮಲೆನಾಡು-ಕರಾವಳಿ ಭಾಗದ ಜನಜೀವನದ ಮೇಲೆ ಪರಿಣಾಮ ಬೀರಿದೆ. ಗೋವಾದಲ್ಲಿ ಮಳೆ ಪರಿಣಾಮ ಬೃಹತ್ ಮರವೊಂದು ಕಾರಿನ ಮೇಲೆ ಬಿದ್ದು ಕಾರವಾರದ ಕಾಜುಬಾಗಿನ ಯುವಕ ಸುನಿಲ್ ಅಪಘಾತದ ಸ್ಥಳದಿಂದ ಆಸ್ಫತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಇವರು ತಮ್ಮ ಅಲ್ಟೋ ಕಾರಿನಲ್ಲಿ ಕಛೇರಿಗೆ ತೆರಳುತಿದ್ದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ-ಗಾಳಿಯಿಂದ ಹಲವೆಡೆ ಮರ ಬಿದ್ದು ಮನೆಗಳಿಗೆ ಹಾನಿಯಾಗಿದೆ. ಸಿದ್ಧಾಪುರ ಹೆಜನಿಯ ವಾಸುದೇವ ಈರಪ್ಪ ನಾಯ್ಕರ ಮನೆಛಾವಣಿ ಹಾರಿ ತೊಂದರೆಯಾಗಿದೆ. ಅವರಗುಪ್ಪಾದ ಪುಂಡಲೀಕ ದ್ಯಾವಾ ನಾಯ್ಕರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಹೊಸೂರಿನ ಗೋವಿಂದ ತಿಮ್ಮ ನಾಯ್ಕರ ಮನೆ ಮೇಲೆ ಮರ ಬಿದ್ದು ಹಾನಿಯಾದ ಬಗ್ಗೆ ಸುದ್ದಿಯಾಗಿದೆ. ಈ ಪ್ರಕರಣಗಳು ಸೇರಿದಂತೆ ಅನೇಕ ಕಡೆ ಮಳೆ,ಗಾಳಿಯಿಂದ ಹಾನಿಯಾದ ಬಗ್ಗೆ ವರದಿಯಾಗಿದೆ.
ಕರೋನಾ-
ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 57 ಜನರಲ್ಲಿ ಕರೋನಾ ದೃಢಪಟ್ಟಿದೆ. ಕಾರವಾರದಲ್ಲಿ 21ಜನರು, ಹಳಿಯಾಳ10, ಮುಂಡಗೋಡು 9 ಸೇರಿ ಒಟ್ಟೂ 57 ಜನರಲ್ಲಿ ಕರೋನಾ ದೃಢಪಟ್ಟಿದೆ. ಸಿದ್ಧಾಪುರದ ರವೀಂದ್ರನಗರದ ಹೊರರಾಜ್ಯದಿಂದ ಬಂದ ವ್ಯಕ್ತಿಯೊಬ್ಬರಲ್ಲಿ ಕರೋನಾ ದೃಢವಾಗಿದ್ದು ರೋಗ ಲಕ್ಷಣಗಳ ಹಿನ್ನೆಲೆಯಲ್ಲಿ ಅವರನ್ನು ಕಾರವಾರಕ್ಕೆ ಸ್ಥಳಾಂತರಿಸಲಾಗಿದೆ.


