ಉತ್ತರ ಕನ್ನಡ ಜಿ.ಪಂ. ನ ಮಾಜಿ ಸದಸ್ಯ ಜಿ.ಎಸ್.ಭಟ್ ಗುಂಜಗೋಡು ಇಂದು ಮುಂಜಾನೆ ನಿಧನರಾಗಿದ್ದಾರೆ. 68 ವರ್ಷಗಳ ಪ್ರಾಯದ ಅವರು ಮಧುಮೇಹ,ರಕ್ತದೊತ್ತಡದಿಂದ ಬಳಲುತಿದ್ದರೂ ನಿನ್ನೆಯ ವರೆಗೂ ಆರೋಗ್ಯವಾಗಿಯೇ ಇದ್ದರು.
ಎರಡು ಬಾರಿ ಜನತಾದಳ, ಇನ್ನೊಂದು ಬಾರಿ ಸಮಾಜವಾದಿ ಪಕ್ಷಗಳಿಂದ ಮೂರು ಅವಧಿ ಉತ್ತರ ಕನ್ನಡ ಜಿ.ಪಂ.ಸದಸ್ಯರಾಗಿದ್ದ ಅವರು ಕೃಷಿಕರು,ಅಡಿಕೆ ವ್ಯಾಪಾರಿಗಳು, ಸ್ಥಳಿಯ ಸಂಸ್ಥೆಗಳ ಸದಸಸ್ಯರು,ಅಧ್ಯಕ್ಷರೂ ಆಗಿ ಕೆಲಸ ಮಾಡಿದ್ದರು. ಒಂದು ಅವಧಿಗೆ ಕ್ಯಾಪ್ಕೋ ನಿರ್ಧೇಶಕರಾಗಿ ಸೇವೆ ಸಲ್ಲಿಸಿದ್ದರು.
ಅವರ ಶೃದ್ಧಾಂ ಜಲಿ ಸಭೆ ಸಾಯಂಕಾಲ 5 ಕ್ಕೆ ಸಿದ್ಧಾಪುರ ಎ.ಪಿ.ಎಂ.ಸಿ. ಅಡಿಕೆ ಮನೆಯಲ್ಲಿ ನಡೆಯಲಿದೆ ಎಂದು ತಿಳಿಸಿರುವ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಪಿ.ಎಂ.ಹೆಗಡೆ ಅವರೊಂದಿಗಿನ ಒಡನಾಟ ಸ್ಮರಿಸಿ ಕಂಬನಿ ಮಿಡಿದಿದ್ದಾರೆ. ಅವರ ನಿಧನದ ಪ್ರಯುಕ್ತ ಸಿದ್ಧಾಪುರದಲ್ಲಿ ಇಂದು ಅಡಿಕೆ ವ್ಯಾಪಾರ ಬಂದ್ ಮಾಡಿರುವುದಾಗಿ ತಿಳಿಸಿದ್ದಾರೆ.
ಅವರ ಸಾವಿಗೆ ಟಿ.ಎಂ.ಎಸ್. ಅಧ್ಯಕ್ಷ ಆರ್. ಎಂ. ಹೆಗಡೆ ಬಾಳೇಸರ, ಎ.ಪಿ.ಎಂ.ಸಿ. ಅಧ್ಯಕ್ಷ ಕೆ.ಕೆ.ನಾಯ್ಕ ಸುಂಕತ್ತಿ, ಜಿ.ಪಂ. ಸದಸ್ಯ ನಾಗರಾಜ್ ನಾಯ್ಕ, ಅಡಿಕೆ ವರ್ತಕರ ಸಂಘದ ಪಿ.ಎಂ.ಹೆಗಡೆ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.