

ಸಿದ್ಧಾಪುರ ಸೇರಿದಂತೆ ಉತ್ತರಕನ್ನಡ ಜಿಲ್ಲೆ ರಾಜ್ಯದಾದ್ಯಂತ ಅನೇಕ ಚಿಟ್ಸ್ ಕಂಪನಿಗಳು ಕಾರ್ಯನಿರ್ವಹಿಸುತ್ತವೆ.ಈ ಕಂಪನಿಗಳ ನಿಯಮದ ಪ್ರಕಾರ ಚಿಟ್ಸ್ ಭಾಗಿದಾರ ಕಂಪನಿ ಚಿಟ್ಸ್ನಲ್ಲಿ ಹಣ ತೊಡಗಿಸಬೇಕು. ಹೀಗೆ ತೊಡಗಿಸಿದ ಹಣಕ್ಕೆ ಕಂಪನಿ ಯಾವುದೇ ಭದ್ರತೆ,ಗ್ಯಾರಂಟಿ ನೀಡುವುದಿಲ್ಲ. ಆದರೆ ಚಿಟ್ಸ್ ನ ಹಣ ಪಡೆಯಲು ಭದ್ರತೆಗೆ ಈಗಾಗಲೇ ಹೂಡಿಕೆಮಾಡಿದ ವ್ಯಕ್ತಿ ಸರ್ಕಾರಿ ನೌಕರರು ಅಥವಾ ಹೆಚ್ಚಿನ ಆಸ್ತಿ ಇರುವವರ ಭದ್ರತೆ ಗ್ಯಾರಂಟಿ ಕೊಡಬೇಕು.ಈ ಬಗ್ಗೆ ನಿಮ್ಮಿಂದ ಹೂಡಿಕೆ ಬಯಸುವ ವ್ಯಕ್ತಿಗಳು ಮೊದಲು ಯಾವುದೇ ತಿಳುವಳಿಕೆ ನೀಡುವುದಿಲ್ಲ. ಅನಿವಾರ್ಯವಾಗಿ ಇವರ ನೀರಿ-ರೀತಿ, ನಿಯಮ ಅರಿಯದೆ ಹೂಡಿಕೆಮಾಡುವ ಜನಸಾಮಾನ್ಯ ಭದ್ರತೆ ವಿಚಾರದಲ್ಲಿ, ಸೇವಾಶುಲ್ಕ, ಕಂಪನಿ ಕಮೀಷನ್,ಜಿ.ಎಸ್.ಟಿ. ಎಂದೆಲ್ಲಾ ಹಣ ಪೀಕಿಕೊಂಡು ಉಳಿದಿದ್ದನ್ನು ನಿಮ್ಮ ಖಾತೆಗೆ ಹಾಕಿದಾಗ ಹಾನಿ ಬಗ್ಗೆ ಪ್ರಶ್ನಿಸಲೂ ಅವಕಾಶವಿಲ್ಲ.
ಹೀಗೆ ವ್ಯವಹರಿಸುವ ಚಿಟ್ ಕಂಪನಿಗಳು ತಮ್ಮ ವಿವರಗಳನ್ನು, ರೀತಿ-ನೀತಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿರುವುದಿಲ್ಲ. ಇಂಥ ಚಿಟ್ಸ್ ಕಂಪನಿಗಳ ಲಾಭ, ಸುಲಿಗೆಗಳಿಂದಾಗಿ ಸಾವಿರಾರು ಜನರು ಮೋಸಹೋಗಿದ್ದಾರೆ. ಇಂಥ ಕಂಪನಿಗಳು ಮೊದಲು ಪರಿಚಿತರ ಮೂಲಕ ಪ್ರವೇಶ ಪಡೆದು ನಂತರ ಪರಿಚಿತರಿಗೇ ಟೋಪಿ ತೊಡಿಸಿ ಕೆಲವೆಡೆ ಓಡಿಹೋಗಿವೆ. ಕೆಲವು ಓಡಿ ಹೋಗುವ ಸಿದ್ಧತೆಯಲ್ಲಿವೆ. ಹಾಗಾಗಿ ಚಿಟ್ಸ್ ನಲ್ಲಿ ಹೂಡಿಕೆ ಮಾಡಿರುವವರು ಈ ಕಂಪನಿಗಳ ನೀರಿ-ರೀತಿ, ನಿಯಮ, ನಿಬಂಧನೆ ಕೇಳಿ, ಹೊಸದಾಗಿ ಹೂಡಿಕೆ ಮಾಡುವವರು ಇವರ ಬ್ರಟೀಷ್ ಮೋಸದಾಟದ ಬಗ್ಗೆ ಜಾಗೃತೆ ವಹಿಸಿ, ಹೂಡಿಕೆ ಮಾಡಿ.
ನೆನಪಿಡಿ ಹೂಡಿಕೆ ಮಾಡುವಾಗ ಆಪ್ತರು, ಮಿತ್ರರಂತೆ ನಟಿಸಿ ವ್ಯವಹರಿಸುವ ಚಿಟ್ಸ್ ಕಂಪನಿಗಳು ನಂತರ ಕಾನೂನು, ನಿಯಮ, ನಿಮ್ಮ ಒಪ್ಪಿಗೆಯ ಸಹಿ ಎಂದು ಹೊಸ ನಾಟಕ ಶುರುಮಾಡುತ್ತವೆ. ಇಂಥ
ವ್ಯವಸ್ಥಿತ ಮೋಸದಿಂದ ಬಾಧಿತರಾದವರು ಚಿಟ್ಸ್ ಕಂಪನಿಗಳನ್ನು ಮನೆಯೊಳಗೆ ಸೇರಿಸುವುದಿಲ್ಲ.
ಲಾಭಕ್ಕಿಂತ ಮೋಸ, ಸೇವೆ,ಲಾಭದ ಹೆಸರಲ್ಲಿ ಜನಸಾಮಾನ್ಯರಿಗೆ ಮೋಸ ಮಾಡಿ ಕಂಪನಿ ಬೆಳೆಸುವ ಚಿಟ್ಸ್ ಗಳಿಂದ ಬಾಧಿತರಾವರು ನ್ಯಾಯಾಲಯ, ಸಂಘಟಿತ ಹೋರಾಟದ ಮೂಲಕ ಈ ಹಗಲು ದರೋಡೆಯನ್ನು ತಡೆಯಬೇಕಿದೆ. ಇಂಥ ಚಿಟ್ಸ್ ಬಾಧಿತರ ಪರವಾಗಿನ ಹೋರಾಟಕ್ಕೆ ಸಂಘಟನೆಯಾದರೆ ಜನಸಾಮಾನ್ಯರಿಗೆ ನ್ಯಾಯ ದೊರೆಯಬಹುದೇನೊ.
