

ಬೆಳಗಾವಿ ಜಿಲ್ಲೆಯ ಗ್ರಾಮ ಒಂದರಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿದ್ದು ಈ ದುಸ್ಕ್ಕತ್ಯದ ವಿರುದ್ಧ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿದೆ. ರಾಜ್ಯದ ಇತರೆಡೆಗಳಂತೆ ಸಿದ್ಧಾಪುರದಲ್ಲಿ ಕೂಡಾ ರಾಜ್ಯ ಕನ್ನಡ ರಕ್ಷಣಾ ವೇದಿಕೆ ರಣಧೀರ ಪಡೆ ಪ್ರತಿಭಟನೆ ಮಾಡಿದ್ದು ಈ ದುಷ್ಕರ್ಮಿಗಳ ವಿರುದ್ಧ ಕಠಿಣಕ್ರಮ ಜರುಗಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಈ ಮನವಿಯ ಪ್ರತಿಯನ್ನು ಸ್ಥಳಿಯ ತಹಸಿಲ್ಧಾರರ ಮೂಲಕ ಸರ್ಕಾರಕ್ಕೆ ರವಾನಿಸಲಾಯಿತು.

ಸಿದ್ಧಾಪುರ ಎಂ.ಜಿ.ಸಿ.ನೆರವು-
ದೇಶವನ್ನು ಆವರಿಸಿದ ಕೋವಿಡ್ 19 ಖಾಯಿಲೆ ಉಂಟು ಮಾಡಿದ ಸಂಕಷ್ಟ ತಾಲೂಕಿನ ಹಲವು ಪಾಲಕರನ್ನು ಕಾಡಿದೆ. ಮತ್ತು ಈವರ್ಷವು ಕಾಲೇಜಿನ ಸುವರ್ಣ ಮಹೋತ್ಸವದ ವರ್ಷವೂ ಹೌದು.
ಹಾಗಾಗಿ ಆರ್ಥಿಕ ಕಾರಣದಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ಆಶಯದಿಂದ ಎಂ.ಜಿ. ಸಿ ಕಲಾ,ವಾಣಿಜ್ಯ ಮತ್ತು ಜಿ.ಎಚ್.ಡಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಈ ವರ್ಷ ಪ್ರವೇಶ ಪಡೆಯುವ ಪ್ರಥಮ ಪದವಿ ವಿದ್ಯಾರ್ಥಿಗಳ ಸಹಾಯಕ್ಕೆ ಆಡಳಿತ ಮಂಡಳಿ ಮತ್ತು ಅಲ್ಲಿಯ ಶಿಕ್ಷಕ ಸಿಬ್ಬಂದಿ ಮುಂದಾಗಿದೆ.
ಈಗಾಗಲೇ ಬಿಪಿಎಲ್ ಕಾರ್ಡ ಹೊಂದಿದ ವಿದ್ಯಾರ್ಥಿಗಳಿಗೆ ಸರ್ಕಾರ ನಿಗದಿ ಮಾಡಿದ ಶುಲ್ಕಕ್ಕಿಂತ ಕಡಿಮೆ ಇರುವಂತೆ ವಿಶೇಷ ರಿಯಾಯ್ತಿಯನ್ನು ಆಡಳಿತ ಮಂಡಳಿಯು ಪ್ರಕಟಿಸಿದೆ. ಮುಂದುವರಿದು ಪ್ರವೇಶವನ್ನು ಪಡೆಯುವ ಪ್ರಥಮ ಪದವಿ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಕರ ಸಮಿತಿಯು ಸ್ಕಾಲರ್ ಶಿಪ್ ರೂಪದಲ್ಲಿ 2000 ರೂ/1000 ರೂ ನೀಡಲು ನಿರ್ಧರಿಸಿದೆ.
ಮೊದಲ ವರ್ಷಕ್ಕೆ ಪ್ರವೇಶ ಪಡೆಯಲು ದಂಡ ರಹಿತ ಕೊನೆಯ ದಿನಾಂಕ ೨೦-೮-೨೦೨೦ ಆಗಿದ್ದು ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಲು ವಿನಂತಿಸಿದೆ.
ಲಯನ್ಸ್ ಧ್ವಜಾರೋಹಣ-
ಲಯನ್ಸ್ ಕ್ಲಬ್ ಸಿದ್ದಾಪುರದಿಂದ ಸ್ವಾತಂತ್ರ್ಯೋತ್ಸವ ನಿಮಿತ್ತ ಧ್ವಜಾರೋಹಣ ಕಾರ್ಯಕ್ರಮವನ್ನು ಅಧ್ಯಕ್ಷ ಶ್ಯಾಮಲಾ ಆರ್. ಹೆಗಡೆ ಹೂವಿನಮನೆ ನೆರವೇರಿಸಿ ದೇಶದ ಯುವ ಸಂಪತ್ತು ರಾಷ್ಟ್ರದ ಏಳಿಗೆಗೆ ಸಹಕಾರಿ ಆಗಬೇಕು. ಉತ್ತಮ ಆರೋಗ್ಯ ನಿರ್ಮಾಣದತ್ತ ನಮ್ಮ ಗಮನ ಅಗತ್ಯ ಎಂದರು.
ಡಾ. ಪ್ರಭಾಶಂಕರ ಜಿ. ಹೆಗಡೆ ಕಿಲಾರ ಅವರು ಆರೋಗ್ಯರಕ್ಷಣೆ ವಿಚಾರವಾಗಿ ಮಾತನಾಡಿದರು.
ಸುನಂದಾ ಪ್ರಭಾಶಂಕರ ಹೆಗಡೆ ಮಾತನಾಡಿದರು.
ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ಡಾ. ರವಿ ಹೆಗಡೆ ಹೂವಿನಮನೆ ಹಿಂದಿನ ಅಧ್ಯಕ್ಷರುಗಳಾದ ಆರ್. ಎಂ. ಹೆಗಡೆ ಬಾಳೇಸರ, ನಾಗರಾಜ ದೋಶೆಟ್ಟಿ, ಜಿ. ಜಿ. ಹೆಗಡೆ ಬಾಳಗೋಡ, ಸತೀಶ್ ಗೌಡರ್ ಹೆಗ್ಗೋಡ್ಮನೆ, ಸಿ. ಎಸ್. ಗೌಡರ್ ಹೆಗ್ಗೋಡ್ಮನೆ, ಎನ್. ನಾಗರಾಜ ಪಾಟೀಲ ಮಳವತ್ತಿ, ಆರ್. ಎಂ ಪಾಟೀಲ, ಎ. ಜಿ ನಾಯ್ಕ, ಎಂ. ಆರ್. ಪಾಟೀಲ, ಪ್ರಶಾಂತ ಶೇಟ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ರಾಘವೇಂದ್ರ ಆರ್ ಭಟ್ಟ ಕಲ್ಲಾಳ ಸ್ವಾಗತಿಸಿ ವಂದಿಸಿದರು.
ಟಿ.ಎಂ.ಎಸ್. ದಿಂದ ಧ್ವಜಾರೋಹಣ
ಸಿದ್ದಾಪುರ ಟಿ.ಎಂ.ಎಸ್ ದಿಂದ ಧ್ವಜಾರೋಹಣ ಕಾರ್ಯಕ್ರಮ ನಡೆದಿದ್ದು, ಅಧ್ಯಕ್ಷ ಆರ್. ಎಂ. ಹೆಗಡೆ ಬಾಳೇಸರ ಧ್ವಜಾರೋಹಣ ನೆರವೇರಿಸಿದರು. ನಿರ್ದೇಶಕ ಎಂ. ಆರ್. ಹೆಗಡೆ ನೈಗಾರ ಉಪಸ್ಥಿತರಿದ್ದರು.
ವ್ಯವಸ್ಥಾಪಕ ಸತೀಶ ಹೆಗಡೆ ಹೆಗ್ಗಾರಕೈ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ಕಡಕೇರಿ ವಿದ್ಯಾರ್ಥಿಗಳ ಸಾಧನೆ- ಸಿದ್ಧಾ ಪುರ: ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿತಾಲೂಕಿನ ಬಂಕೇಶ್ವರ ಪ್ರೌಢ ಶಾಲೆ ಹೊಸೂರ ಶೇ 75 ರಷ್ಟು ಫಲಿತಾಂಶ ಧಾಖಲಿಸಿದೆ. ಪರೀಕ್ಷೆಯಲ್ಲಿ 33 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು,ಶೇ 95.20 ಅಂಕವನ್ನು ಪಡೆದಚಂದನಾ ಹನುಮಂತ ನಾಯ್ಕಕಡಕೇರಿ (ಪ್ರಥಮ), ಶೇ 92.16 ಅಂಕ ಪಡೆದಚೇತನಾ ವೀರಭದ್ರ ನಾಯ್ಕಕಡಕೇರಿ(ದ್ವಿತೀಯ) ಹಾಗೂ ಶೇ 85.76 ಅಂಕ ಪಡೆದಛತ್ರಪತಿ ಮೋಹನ ನಾಯ್ಕಕಡಕೇರಿತೃತೀಯ ಸ್ಥಾನವನ್ನು ಪಡೆದುಕೊಂಡು ಶಾಲೆಗೆ ಕೀರ್ತಿತಂದಿದ್ದಾರೆ. ಈ ಸಾಧನೆಗೈದ ವಿದ್ಯಾರ್ಥಿಗಳನ್ನು ವಿದ್ಯಾ ಸಂಸ್ಥೆಯ ಪದಾಧಿಕಾರಿಗಳು, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಸಿಬಂದಿಗಳು ಅಭಿನಂದಿಸಿದ್ದಾರೆ.
ವಂದನಾ ಹೆಗಡೆ ಸಾಧನೆ-
ಸಿದ್ದಾಪುರ:ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ಟೆಂಪಲ್ ಹೈಸ್ಕೂಲಿನ ವಂದನಾ ಆರ್. ಹೆಗಡೆ ಹಾರ್ಸಿಮನೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.96.8 ಅಂಕಪಡೆದು ಸಾಧನೆಮಾಡಿದ್ದಾಳೆ.
ಕನ್ನಡಕ್ಕೆ 125, ವಿಜ್ಞಾನ,ಇಂಗ್ಲೀಷ ಹಾಗೂ ಹಿಂದಿ 98,ಗಣಿತ 91, ಸಮಾಜ ವಿಜ್ಞಾನಕ್ಕೆ 95 ಅಂಕ ಪಡೆದುಕೊಂಡಿದ್ದಾಳೆ. ಇವಳ ಸಾಧನೆಗೆ ಕೊಲ್ಲೂರಿನ ಮಹಿಳಾ ಮಂಡಳದವರು ಸನ್ಮಾನಿಸಿ ಗೌರವಿಸಿದ್ದಾರೆ.
ಇವಳು ಸಿದ್ದಾಪುರ ತಾಲೂಕಿನ ಹಾರ್ಸಿಮನೆಯ ರಘುಪತಿ ಹೆಗಡೆ ಹಾಗೂ ಜಯಲಕ್ಷ್ಮೀ ಹೆಗಡೆ ದಂಪತಿ ಪುತ್ರಿ. ಇವಳ ಸಾಧನೆಗೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.
ನಾಣಿಕಟ್ಟಾ ಕಾಲೇಜಿನಲ್ಲಿ ಧ್ವಜಾರೋಹಣ
ಸಿದ್ದಾಪುರ. ತಾಲೂಕಿನ ನಾಣಿಕಟ್ಟಾದ ಪದವಿಪೂರ್ವ ಕಾಲೇಜಿನಲ್ಲಿ 74ನೇ ಸ್ವಾತಂತ್ರ್ಯೋತ್ಸವ ಸಮಾರಂಭ ರಾಷ್ಟ್ರಧ್ವಜಾರೋಹಣದೊಂದಿಗೆ ನಡೆಯಿತು. ಕಾಲೇಜಿನ ಪ್ರಾಚಾರ್ಯ ಎಂ.ಕೆ.ನಾಯ್ಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಸ್.ಜಿ.ಹೆಗಡೆ ಬೆಳ್ಳೆಕೇರಿ, ಪ್ರೌಢಶಾಲಾ ಎಸ್ ಡಿ ಎಂ ಸಿ. ಉಪಾಧ್ಯಕ್ಷ ಡಿ.ಆರ್.ಹೆಗಡೆ ಉಪಸ್ಥಿತರಿದ್ದು ಶುಭಕೋರಿದರು. ಕಾಲೇಜು ಹಾಗೂ ಪ್ರೌಢಶಾಲೆಯ ಬೋಧಕರು ಉಪಸ್ಥಿತರಿದ್ದರು. ದೈಹಿಕಶಿಕ್ಷಕಿ ಪ್ರತಿಭಾ ಗಾಂವ್ಕರ್ ಸಹಕರಿಸಿದರು. ಉಪನ್ಯಾಸಕ ಎಂ.ಆಯ್.ಹೆಗಡೆ ಸ್ವಾಗತಿಸಿದರು. ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಸಾವಿತ್ರಿ ನಾಯಕ್ ವಂದಿಸಿದರು.
ಕಡಕೇರಿಯಲ್ಲಿ ಸ್ವಾತಂತ್ರ್ಯೋತ್ಸವ- ಸಿದ್ದಾಪುರ; ತಾಲೂಕಿನಕಡಕೇರಿಯಲ್ಲಿ 74 ನೇ ಸ್ವಾತಂತ್ರ್ಯೋತ್ಸವವನ್ನು ಸಾಮಾಜಿಕಅಂತರಕಾಯ್ದುಕೊಂಡುಅತ್ಯಂತ ಸರಳವಾಗಿ ಆಚರಿಸಲಾಯಿತು.ಧ್ವಜಾರೋಹಣ ಮಾಡಿ ಮಾತನಾಡಿದ ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ ಮಾಡಿವಾಳ ಅತ್ಯಂತಅಡಗರ ಸಂಭ್ರಮದಿಂದಆಚರಣೆಯಲ್ಲಿ ಪಾಲ್ಗೋಳ್ಳುತ್ತಿದ್ದ ಮಕ್ಕಳು ಆಚರಣೆಯಲ್ಲಿ ಭಾಗವಹಿಸದೆಇಂದುಆಚರಣೆ ಮಾಡಬೇಕಾಗಿದೆ. ಇಂದುದೇಶಕೊರೋನಾದಿಂದ ಬಹಳ ಹಿಂದೆ ಹೋಗಿದೆ.ಆದ್ದರಿಂದಎಲ್ಲರೂದೇಶದಅಭಿವೃದ್ಧಿಗೆಕೈಜೋಡಿಸಬೇಕಾಗಿದೆಎಂದಅವರುದೇಶಕ್ಕಾಗಿದುಡಿದದೇಶಭಕ್ತರನ್ನು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿಗ್ರಾಮ ಪಂಚಾಯತ ಮಾಜಿಉಪಾಧ್ಯಕ್ಷ ಉಮೇಶ ಎನ್ ನಾಯ್ಕ, ಮಾಜಿ ಸದಸ್ಯರಾದ ಎ.ಬಿ.ನಾಯ್ಕ, ಪುಷ್ಪ ಹಸಲರ್, ಮುಖ್ಯೋಧ್ಯಾ ಪಕಿ ಶಾಂತಲಾಗಾಂವಕರ್ ಎಸ್.ಡಿ.ಎಂ.ಸಿ ಸದಸ್ಯರು, ಸಹ ಶಿಕ್ಷಕರು, ಅಂಗನವಾಡಿಕಾರ್ಯಕರ್ತರು, ಅಡಿಗೆ ಸಿಬ್ಬಂದಿಗಳು ಊರ ನಾಗರಿಕರು ಉಪಸ್ಥಿತರಿದ್ದರು.



