ಟಿ.ಎಸ್.ಎಸ್. ವಿರುದ್ಧ ಹೆಗ್ಗೋಡಮನೆ ಕುಟುಂಬದ ಆರೋಪ, ಕಡವೆ ವೈದ್ಯಕೀಯ ಸಂಸ್ಥೆಯ ವಿರುದ್ಧ ಪೊಲೀಸ್ ದೂರು, ಟಿ.ಎಸ್.ಎಸ್. ನಲ್ಲಿ ಬಾಲ ದೇಹ ಅಲ್ಲಾಡಿಸುವ ಅವ್ಯವಸ್ಥೆ ವಿರುದ್ಧ ಸಮರ

ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಟಿ.ಎಸ್.ಎಸ್. ಮತ್ತು ಅದರ ಸಮೂಹ ಸಂಸ್ಥೆಯ ಻಻ಅಂಗ ಶಿರಸಿಯ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ಸಂಸ್ಥೆಯ ವಿರುದ್ಧ ಻ಅದರ ಸದಸ್ಯರಿಂದಲೇ ಅಪಸ್ವರ ಕೇಳಿ ಬಂದಿದ್ದು ಈ ಸಂಸ್ಥೆಯ ಸೇವೆ, ಕಾರ್ಯವೈಖರಿ ವಿರುದ್ಧ ಗುರುತರ ಆರೋಪ ಮಾಡಿರುವ ಸಿದ್ಧಾಪುರ ಹೆಗ್ಗೋಡಮನೆ ಗೌಡರ ಕುಟುಂಬ ಟಿ.ಎಸ್.ಎಸ್. ಸಂಸ್ಥೆ ಸೇವೆಯ ಹೆಸರಲ್ಲಿ ವಾಣಿಜ್ಯದ ಲಾಭದ ವ್ಯವಹಾರದಲ್ಲಿ ತೊಡಗಿದ್ದು ಈ ಲಾಭಬಡುಕತನದಿಂದಾಗಿ ಸದಸ್ಯರಿಗೆ,ಸ್ಥಳಿಯರಿಗೆ ಅನ್ಯಾಯವಾಗುತ್ತಿದೆ ಎಂದು ದೂ ರಿದೆ.

ಇಂದು ಸಿದ್ಧಾಪುರ ಲಯನ್ಸ್ ಬಾಲಭವನದಲ್ಲಿ ಕರೆದ ಮಾಧ್ಯಮಗೋಷ್ಠಿ ಯಲ್ಲಿ ಈ ಆರೋಪ ಮಾಡಿರುವ ಹೆಗ್ಗೋಡಮನೆ ಸಹೋದರರು ಟಿ.ಎಸ್.ಎಸ್. ನಲ್ಲಿ ನಾವು ಹಲವಾರು ವರ್ಷಗಳಿಂದ ಸದಸ್ಯರಾಗಿ ವ್ಯವಹರಿಸುತಿದ್ದೇವೆ. ನಮ್ಮ ವ್ಯಾಪಾರವ್ಯವಹಾರ, ಖರೀದಿ-ಮಾರಾಟಗಳೆಲ್ಲಾ ಟಿ.ಎಸ್.ಎಸ್. ನಲ್ಲೇ ನಡೆಯುತ್ತಿದೆ. ಆದರೆ ನಮಗೆ ಈ ಸಂಸ್ಥೆ ಎಷ್ಟು ಗೌರವ ನೀಡುತ್ತಿದೆ ಎನ್ನುವುದು ಆಗಷ್ಟ್ 18 ರಿಂದ 21 ರ ಻ಅವಧಿಯಲ್ಲಿ ಅರ್ಥವಾಗಿದೆ. ನಮ್ಮ ಸಹೋದರ ಜಯಶೀಲ ಗೌಡ ಈ ಸಂಸ್ಥೆಯ ಬೇಜವಾಬ್ಧಾರಿ, ನಿರ್ಲಕ್ಷದಿಂದಾಗಿ ಮರಣಹೊಂದುವಂತಾಯಿತು. ನಮ್ಮಂಥ ಪರಿಚಿತರು,ಒಡನಾಟದ ವ್ಯಕ್ತಿಗಳಿಗೇ ಹೀಗಾದರೆ ಜನಸಾಮಾನ್ಯರ ಪಾಡೇನು? ಎಂದು ಪ್ರಶ್ನಿಸಿದ ಹೆಗ್ಗೋಡಮನೆ ಸಹೋದರರು. ಅಗತ್ಯವಿದ್ದಾಗ ನಿರ್ಲಕ್ಷ ಮಾಡಿ ನಂತರ ಶವಸಂಸ್ಕಾರದ ವೆಚ್ಚವನ್ನು ಮನೆಗೆ ತಲುಪಿಸುವಾಗಲೂ ಸೌಜನ್ಯ ತೋರಲಿಲ್ಲ ಹಾಗಾಗಿ ಟಿ.ಎಸ್.ಎಸ್. ನೆರವು ಹತ್ತು ಸಾವಿರವನ್ನು ತಿರಸ್ಕರಿಸುವ ಜೊತೆಗೆ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ಸಂಸ್ಥೆಯ ವಿರುದ್ಧ ಪೊಲೀಸ್ ದೂರು ನೀಡಿದ್ದೇವೆ. ಈ ಬಗ್ಗೆ ಕಾನೂನು ಹೋರಾಟಕ್ಕೂ ಸಿದ್ಧರಾಗಿದ್ದೇವೆ ಎಂದು ವಿವರಿಸಿದರು.

ಘಟನೆಯ ವಿವರ- ಹೆಗ್ಗೋಡಮನೆ ಕುಟುಂಬದ ಜಯಶೀಲ ಸದಾಶಿವ ಗೌಡರ್ ಆಗಷ್ಟ್ 18 ರಂದು ಸಿದ್ಧಾಪುರ ಸರ್ಕಾರಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯರ ಮಾರ್ಗದರ್ಶನದಂತೆ 19 ರಂದು ಶಿರಸಿಯ ಟಿ.ಎಸ್.ಎಸ್. ಆಸ್ಫತ್ರೆ ಕಡವೆ ವೈದ್ಯಕೀಯ ಸಂಸ್ಥೆಯ ಆಸ್ಫತ್ರೆಗೆ ಹೆಚ್ಚಿನ ಪರೀಕ್ಷೆ, ಚಿಕಿತ್ಸೆಗೆ ರವಾನಿಸುತ್ತಾರೆ. ಅಲ್ಲಿ ಆಸ್ಫತ್ರೆಗೆ ಪ್ರವೇಶ ನೀಡದ ಻ಅಲ್ಲಿಯ ಸಿಬ್ಬಂದಿಗಳು ಆಸ್ಫತ್ರೆಯ ಹೊರಗೆ ರೋಗಿಯನ್ನು ಕಾಯಿಸುತ್ತಾರೆ. ನಂತರ ಹುಬ್ಬಳ್ಳಿ ಕೆ.ಎಂ.ಸಿ. ಯಲ್ಲಿ ಅವಶ್ಯ ಚಿಕಿತ್ಸೆ ಪಡೆಯುವ ಮೊದಲು ವಿಳಂಬವಾಗಿ ಜಯಶೀಲ ಗೌಡರ್ ಆಗಷ್ಟ್ 22 ರಂದು ಮರಣ ಹೊಂದುತ್ತಾರೆ.

ಮಾಧ್ಯಮಗೋಷ್ಥಿಯ ಪ್ರಮುಖ ಻ಅಂಶಗಳು- ನಾವೆಲ್ಲಾ ಟಿ.ಎಸ್.ಎಸ್. ನ ಸದಸ್ಯರು ಆದರೆ ನಮ್ಮಂಥ ಻಻ಅನೇಕ ಸದಸ್ಯರ ಹಣದಿಂದ ಸ್ಥಾಪನೆಯಾಗಿ ನಡೆಯುತ್ತಿರುವ ಟಿ.ಎಸ್.ಎಸ್. ಆಸ್ಫತ್ರೆಯಲ್ಲಿ ನಮಗೆ ಅವಕಾಶ, ವ್ಯವಸ್ಥೆ ಸಿಗದಿದ್ದರೆ ಸಾಮಾನ್ಯರ ಪಾಡೇನು? ಈಗಾಗಲೇ ಅವರ ಻ಅಂತ್ಯಸಂಸ್ಕಾರದ ಹಣವನ್ನು ತಿರಸ್ಕರಿಸಿ ಆಸ್ಫತ್ರೆ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದೇವೆ.ಸಿದ್ಧಾಪುರದಲ್ಲಿ ಲೋಕೇಶ್ ಡಾಕ್ಟರ್ ಬಿಟ್ಟರೆ ಸರ್ಕಾರಿ ಆಸ್ಫತ್ರೆಯಲ್ಲಿ ವ್ಯವಸ್ಥೆಯೂ ಇಲ್ಲ, ಚಿಕಿತ್ಸೆಯೂ ಇಲ್ಲ. ಆಪತ್ಕಾಲದಲ್ಲಿ ನಮ್ಮ ಸಂಸ್ಥೆಯ ಟಿ.ಎಸ್.ಎಸ್. ಆಸ್ಫತ್ರೆ ಇದೆ ಎಂದು ತೆರಳಿದರೆ, ಅಲ್ಲಿ ನಮಗೆ ಪ್ರವೇಶವೇ ಇಲ್ಲ, ಹುಬ್ಬಳ್ಳಿ ಕೆ.ಎಂ.ಸಿ. ಅವ್ಯವಸ್ಥೆಯ ಕೊಂಪೆ ಇಂಥ ಻ಅವ್ಯವಸ್ಥೆ, ತೊಂದರೆಗಳನ್ನು ಕೇಳಲು ಸರ್ಕಾರ, ಜನಪ್ರತಿನಿಧಿಗಳಿಲ್ಲವೆ? ಹೀಗಾದರೆ ಜನಸಾಮಾನ್ಯರ ಪಾಡೇನು? ಇದಕ್ಕೆ ನ್ಯಾಯ ದೊರಕಿಸುವವರ್ಯಾರು? -ಸಿ.ಎಸ್. ಗೌಡರ್,ನಿವೃತ್ತ ನೌಕರರ ಸಂಘದ ಻಻ಅಧ್ಯಕ್ಷ

ಸಿದ್ಧಾಪುರದಲ್ಲಿ ಸರ್ಕಾರಿ, ಖಾಸಗಿ ಆಸ್ಫತ್ರೆಗಳಲ್ಲಿ ತುರ್ತು ಚಿಕಿತ್ಸೆ ಸಿಗಬೇಕು. ಅನಿವಾರ್ಯ ಪ್ರಸಂಗಗಳಲ್ಲಿ ಉಪಯೋಗಕ್ಕೆ ಬಾರದ ಇಲ್ಲಿಯ ವೈದ್ಯಕೀಯ ವ್ಯವಸ್ಥೆಯನ್ನು ಸುಧಾರಿಸುವತ್ತ ಸರ್ಕಾರ ಗಮನ ಹರಿಸಬೇಕು -ಪರಮೇಶ್ವರಯ್ಯ ಕಾನಳ್ಳಿ ಮಠ, ಻ಅಧ್ಯಕ್ಷರು ವೀರಶೈವ ಕ್ಷೇಮಾಭಿವೃದ್ಧಿ ಸಂಘ ಸಿದ್ಧಾಪುರ.

ನಮಗೆ ಟಿ.ಎಸ್.ಎಸ್. ಅಥವಾ ಮತ್ತ್ಯಾರ ನೆರವಿನ ಻಻ಅಗತ್ಯವಿಲ್ಲ. ನಮ್ಮ ಕುಟುಂಬಕ್ಕಾದ ಻಻ಅನ್ಯಾಯ ಮತ್ಯಾವ ಕುಟುಂಬಕ್ಕೂ ಆಗಬಾರದು. ಸಾಯುವವರನ್ನು ಉಳಿಸುವ ನಮ್ಮ ಕುಟುಂಬಕ್ಕೆ ನಮ್ಮವರನ್ನೇ ಉಳಿಸಿಕೊಳ್ಳದ ಻ಅನಿವಾರ್ಯತೆಗೆ ಸಿಕ್ಕಿಸಿದ್ದು ಇಲ್ಲಿಯ ವೈದ್ಯಕೀಯ ಻ಅವ್ಯವಸ್ಥೆ, ಟಿ.ಎಸ್.ಎಸ್. ನ ಬೇಜವಾಬ್ಧಾರಿ. ಹಣ, ಖಾತೆಗೆ ಟಿ.ಎಸ್.ಎಸ್. ಸೇವೆ, ಅನಿವಾರ್ಯತೆಗೆ ಕಡವೆ ಸಂಸ್ಥೆಗೂ ಟಿ.ಎಸ್.ಎಸ್. ಗೂ ಸಂಬಂಧವಿಲ್ಲ ಎಂದರೆ…. ನಮಗಾದ ನೋವು ಇತರ ಸದಸ್ಯರಿಗೆ ಆಗಬಾರದು. ಈ ಬಗ್ಗೆ ಇತರ ಸದಸ್ಯರೂ ಎಚ್ಚೆತ್ತುಕೊಳ್ಳಬೇಕು. – ಸುಧೀರ್ ಗೌಡರ್, ತಾ.ಪಂ. ಅಧ್ಯಕ್ಷ ಸಿದ್ಧಾಪುರ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *