

ಮಲೆನಾಡಿನ ಬುಡಕಟ್ಟುಗಳ ಆರಾಧನಾ ಕಲೆ ಶ್ರೀಮಂತ. ಈ ಕಲೆ ಜಾನಪದವಾಗಿ ಜಗದಗಲ, ಮುಗಿಲೆತ್ತರ ಪ್ರಸಿದ್ಧಿಪಡೆದಿದ್ದರೂ ಅದಕ್ಕೆ ಕ್ರಾಫ್ಟ್ಸ್ ಮನ್ ಪ್ರಶಸ್ತಿಯ ಗರಿ ಸೇರಿಸಿದವರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಹಸ್ವಂತೆಯ ಈಶ್ವರ ನಾಯ್ಕ. ನೀನಾಸಂ ಪದವಿಧರರಾದ ಈಶ್ವರ ನಾಯ್ಕ ತಮ್ಮ ನೆಲಮೂಲದ ಕಲೆಯನ್ನು ಹೆಂಗಳೆಯರ ಸೀರೆಯ ಚಿತ್ರವಾಗಿ ಜೋಡಿಸಿದರು. ಹೀಗೆ ಈ ಚಿತ್ತಾರದ ಆರಾಧನೆ, ಸೇವೆ, ಪ್ರೀತಿಗಳಿಂದ ರಾಷ್ಟ್ರದ ಪ್ರತಿಷ್ಠಿತ ಕ್ರಾಪ್ಟ್ಸ್ ಮನ್ ಪುರಸ್ಕಾರ ಪಡೆದಿರುವ ಈಶ್ವರ ನಾಯ್ಕ ಮಲೆನಾಡಿನ ಚಿತ್ತಾರ, ಹಸೆಗೋಡೆ ಆರಾಧನಾ ಕಲೆಗಳನ್ನು ಪರಿಚಯಿಸಿ, ಪ್ರಚಾರ-ಪ್ರಸಾರ ಮಾಡಿ ನಾಡಿನ ದೀವರ ಚಿತ್ತಾರವನ್ನು ನೆಲದಗಲ, ಜಗದಗಲ, ಮುಗಿಲೆತ್ತರಕ್ಕೆ ವಿಸ್ತರಿಸಿದರು ಅವರ ಸಾಧನೆ, ಅನುಭವದ ಮಾತು ಕತೆ ಸಮಾಜಮುಖಿ ಮೂಖಾಮುಖಿ ಯಲ್ಲಿ.

ನಿಜ. ಚಿತ್ತಾರ ಕಲೆಯ ಕನಸುಗಾರ. ಈಶ್ವರ ನಾಯ್ಕ ಹಸ್ವಂವತೆ