ನಾರಾಯಣ ಗುರು ಜಯಂತೋತ್ಸವದಲ್ಲಿ ಇದು ಸರಿಯೆ?

ಗೌರವಾನ್ವಿತ ಮಾನ್ಯ ಸಂಪಾದಕರೆ….
ನೀವು ನಮ್ಮ ಸಮಾಜಮುಖಿ ಗ್ರೂಪ್‌ ಮೂಲಕ ನಿಷ್ಠೂರವಾಗಿ, ಪ್ರಾಮಾಣಿಕವಾಗಿ ಮಾಧ್ಯಮದ ಸೇವೆ ಸಲ್ಲಿಸತ್ತಾ ನಮ್ಮ ತಾಲೂಕು, ಜಿಲ್ಲೆ, ರಾಜ್ಯದ ಆಸ್ತಿ ಯಾಗಿದ್ದೀರಿ ಅಭಿನಂದನೆಗಳು. ನಿಮ್ಮೆಲ್ಲಾ ಅಂತರ್ಜಾಲ ಖಾತೆಗಳಿಗೆ ಚಂದದಾರರಾಗುವ ಮೂಲಕ ನಮ್ಮ ಜನ ನಿಮ್ಮ ಸೇವೆ ಉತ್ತೇಜಿಸಬೇಕು.
ಆ ಬಗ್ಗೆ ನಮ್ಮ ಸಹಕಾರವಿದೆ. ಇಂದು ಸಿದ್ದಾಪುರದಲ್ಲಿ ತಾಲೂಕಾ ಆಡಳಿತದಿಂದ ನಾರಾಯಣ ಗುರು ಜಯಂತಿ ಆಚರಿಸಲಾಯಿತು. ಅಲ್ಲಿ ಉಪಸ್ಥಿತನಿದ್ದು ಪ್ರತ್ಯಕ್ಷದರ್ಶಿ ಯಾಗಿದ್ದ ನನ್ನ ಅಭಿಪ್ರಾಯ, ಅನಿಸಿಕೆ ಎಂದರೆ….

ಹಲವಾರು ಪುಣ್ಯ ಪುರುಷರ ಜಯಂತಿಗಳನ್ನು ಎಲ್ಲಾ ತಾಲೂಕು, ನಾನಾ ಸಮೂದಾಯಗಳ ಸಹಕಾರಗಳಲ್ಲಿ ಆಚರಿಸಲಾಗುತ್ತದೆ. ಅಲ್ಲಿ ಸಭಾ ಶಿಸ್ತು ಶಿಷ್ಟಾಚಾರಗಳೆಲ್ಲಾ ಇರುತ್ತವೆ. ಆದರೆ ನಮ್ಮ ನಾರಾಯಣಗುರು ಜಯಂತೋತ್ಸವದಲ್ಲಿ ರಾಜಕೀಯ ನಾಯಕರ ಸಮಾವೇಶ ಮಾಡಿದ್ದು ಸರಿಯೆ?
ತಾಲೂಕಾಡಳಿತ, ಸರ‍್ಕಾರದ ಶಿಷ್ಟಾಚಾರದ ಪ್ರಕಾರ ಗ್ಯಾರಂಟಿ ಅನುಷ್ಠಾನ ಸಮೀತಿ ಅಧ್ಯಕ್ಷರು, ಪ.ಪಂ.ಸದಸ್ಯರು ವೇದಿಕೆ ಮೇಲಿರುವುದು ಸರಿ? ಆದರೆ ಮರಿಪುಡಾರಿಗಳೆಲ್ಲಾ ವೇದಿಕೆ ಏರಿ ಪೋಜು ಕೊಟ್ಟು ಸಾಧಿಸಿದ್ದಾದರೂ ಏನು?


ಉತ್ತಮ ಪ್ರಾಸ್ತಾವಿಕ ನುಡಿಗಳನ್ನಾಡಿದ ತಾಲೂಕಾ ದಂಡಾಧಿಕಾರಿಗಳು ಸಂಪ್ರದಾಯ, ಸಾರ‍್ವಜನಿಕ ಗೌರವಗಳ ಹಿನ್ನೆಲೆಯಲ್ಲಿ ಸಮೂದಾಯದ ಒಂದೆರಡು ಪ್ರಮುಖರು, ಸರ‍್ಕಾರಿ ಶಿಷ್ಟಾಚಾರದಂತೆ ಕೆಲವರನ್ನು ಅತಿಥಿಗಳನ್ನಾಗಿ ಮಾಡಬಹುದು ಆದರೆ ಯಾವುದೋ ಗ್ರಾಮ ಸಮೀತಿಯ ಅಧ್ಯಕ್ಷರು, ಮಾಜಿ-ಹಾಲಿ ಮುಂತಾದ ರಾಜಕಾರಣಿಗಳು ಸರ‍್ಕಾರದ ಆಚರಣೆಯ ವೇದಿಕೆ ಏರುವುದು ಸರಿಯೆ? ಇದರ ಹಿಂದಿರುವ ವ್ಯಕ್ತಿ-ಶಕ್ತಿಗಳ್ಯಾರು?

ಒಂದು ವೇಳೆ ಸಮಾಜದ ಎಲ್ಲಾ ಪ್ರಮುಖರನ್ನು ವೇದಿಕೆ ಏರಿಸುವುದೇ ಆಗಿದ್ದರೆ ನಮ್ಮವರೇ ಆದ ಕ.ಸಾ.ಪ. ತಾಲೂಕಾಧ್ಯಕ್ಷ ಚಂದ್ರಶೇಖರ್‌, ಮಾಧ್ಯಮ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಹಿರಿಯ ಪತ್ರಕರ್ತ ಕನ್ನೇಶ್‌ ಕೋಲಸಶಿರ‍್ಸಿಯವರನ್ನು ಸೇರಿ ಅಲ್ಲಿದ್ದ ಅನೇಕ ಗಣ್ಯರು,ಗ್ರಾ .ಪಂ., ವಿ,ಎಸ್ಸ್.ಸ್.‌ ಅಧ್ಯಕ್ಷರುಗಳನ್ನೂ ಕರೆಯಬಹುದಿತ್ತು. ಎಲ್ಲರನ್ನೂ ಕರೆದರೆ ಬೆರಳೆಣಿಕೆಯ ಪ್ರೇಕ್ಷಕರ ಎದುರು ನೆರೆದ ಅರ‍್ಧಕ್ಕಿಂತ ಹೆಚ್ಚು ಜನರನ್ನು ವೇದಿಕೆ ಮೇಲೆ ಕೂರಿಸಬೇಕಾಗುತಿತ್ತು!
ರಾಜಕಾರಣಿಗಳನ್ನು ಕರೆಕರೆದು ವೇದಿಕೆ ಮೇಲೆ ಕುರ‍್ಚಿ ಕೊಡುತಿದ್ದ ಸಂಘಟಕರು ಭೌದ್ಧಿಕ ವಲಯದ ಶಿಕ್ಷಿತ ಪ್ರಮುಖರನ್ನು ಬಿಟ್ಟು ಮನಸೋಇಚ್ಛೆ ಕಾರ‍್ಯಕ್ರಮ ಮಾಡಿದವರಿಗೆ ಸಲಹೆ, ನಿರ‍್ಧೇಶನಮಾಡಿದರ‍್ಯಾರು? ಶಿಕ್ಷಣ, ಸಂಘಟನೆ, ಸ್ವಾಭಿಮಾನಗಳ ಜಾಗೃತಿ ಮಾಡಿದ ನಾರಾಯಣ ಗುರುಗಳ ಕಾರ್ಯಕ್ರಮದಲ್ಲಿ ಈ ಅಪಚಾರ ಸಾಧುವೆ? ಸನ್ಮಾನಿತರೆಲ್ಲರೂ ಅರ‍್ಹರೆ…. ಆದರೆ ಯಕ್ಷಗಾನ, ಕೃಷಿ ಸೇರಿದಂತೆ ಕೆಲವು ಕ್ಷೇತ್ರಗಳ ಸಾಧಕರಿಗೆ ಎಲ್ಲಾ ಕಡೆ ಸನ್ಮಾನ, ಗೌರವ ಸಿಗುತ್ತವೆ ಇಂಥವರ ಬದಲು ಸಾಮಾಜಿಕ, ರಾಜಕೀಯ, ಧಾರ‍್ಮಿಕ, ವೈಚಾರಿಕ ಭೌದ್ಧಿಕ ವಲಯದ ವ್ಯಕ್ತಿಗಳಿಗೆ ನಾರಾಯಣ ಗುರು ಜಯಂತಿಯಲ್ಲಿ ಗೌರವಿಸಿದ್ದರೆ ಅದಕ್ಕೆ ಅರ‍್ಧ ಬರುತಿತ್ತು. ಇನ್ನೂ ಪ್ರಶಸ್ತಿ… ಈ ಕಾಲದಲ್ಲಿ ಪ್ರಶಸ್ತಿಗಳ ಬಗ್ಗೆ ನಡೆಯುವ ಲಾಭಿ ನೋಡಿದರೆ ಪ್ರಶಸ್ತಿ ಪುರಸ್ಕೃತರನ್ನು ಕಣ್ಣು, ಮೂಗು ತೆರೆದು ನೋಡುವಂತಿಲ್ಲ. ಕೆಲವರೇ ಸೇರಿಕೊಂಡು ಅವರವರೇ ಪರಸ್ಪರ ಹೊಗಳಿಕೊಳ್ಳುವ ಗೌರವಿಸುವ ಕೆಲಸ ನಾರಾಯಣ ಗುರುಗಳ ಸಿದ್ಧಾಂತ-ತತ್ವಗಳಿಗೆ ವಿರುದ್ಧ ಇವುಗಳೆಲ್ಲಾ ಘಟಿಸುತಿದ್ದಾಗ ನೀವೂ ವೀಕ್ಷಕರಾಗಿದ್ದೀರಿ ನಿಮಗೇನನಸಿತೋ ಕಾಣೆ?!

ಸರ್ಕಾರಿ ಕಾರ್ಯಕ್ರಮದಲ್ಲಿ ಸಮೂದಾಯದ ಭವನದ ಚರ್ಚೆ ಅಗತ್ಯವಿತ್ತೆ? ಸಮೂದಾಯ ಭವನ ಇತ್ಯಾದಿ ಚರ್ಚೆಗೆ ನಮ್ಮ ಸಮೂದಾಯದ ಹೆಸರಿನಡಿ ಇರುವ ಅನೇಕ ಸ್ವತಂತ್ರ ಸಂಘಟನೆಗಳಿವೆ. ಸರ್ಕಾರಿ ನೌಕರರು ತಮ್ಮ ಅನುಕೂಲಕ್ಕೆ ಅಧಿಕಾರಸ್ಥರನ್ನು ಓಲೈಸುವುದು ಸರಿ ಆದರೆ ನಾರಾಯಣಗುರು ಜಯಂತೋತ್ಸವದಲ್ಲಿ ಯಾರದೋ ಓಲೈಕೆ, ವೇದಿಕೆ ಮೇಲೆ ವೈದಿಕತೆ ವಿಜೃಂಬಣೆ, ಸಮರ್ಥರ ಕಡೆಗಣನೆ ಸಹ್ಯವೆ? ಸರ್ಕಾರಿ ವ್ವವಸ್ಥೆ ಮತ್ತು ನೌಕರರ ಸಂಘಟನೆಗಳು ಈ ಹಿಂದೆ ಕ.ಸಾ.ಪ. ಅಧ್ಯಕ್ಷರು, ರಾಜಕಾರಣಿಗಳನ್ನು ವಿಜೃಂಬಿಸಿದ್ದನ್ನು ನೋಡಿದ್ದೇವೆ. ಯಾರದೋ ಮುಲಾಜಿಗೆ ಹೀಗೆಲ್ಲಾ ಆದರೆ ಅದು ವ್ಯವಸ್ಥೆ ಹಳಿ ತಪ್ಪುವ ಮುನ್ಸೂಚನೆ.

ಈ ಸಾರ‍್ವಜನಿಕ ಅಶಿಸ್ತಿನ ಬಗ್ಗೆ ನೀವು ಸಂಪಾದಕೀಯವನ್ನೇ ಬರೆಯಬಹುದು.
ಈ ಕಾರ‍್ಯಕ್ರಮ, ಇದೇ ಜಾಗದಲ್ಲಿ ನಡೆದ ಈಡಿಗ ಮಹಾಮಂಡಳಿ ಕಾರ‍್ಯಕ್ರಮ ಇವೆಲ್ಲಾ ನೋಡಿದರೆ ಕೆಲವರೇ ತಮ್ಮಂಥವರನ್ನೇ ವಿಜೃಂಬಿಸಲು ಮಾಡಿಕೊಳ್ಳುವ ಕಾರ‍್ಯಕ್ರ ಮಗಳೆನಿಸುತ್ತಿದೆ. ಕೆಲವರಂತೂ ಅಧಿಕಾರಿಗಳ ಬಳಿ ತಾವು ಹೇಳಿದವರೇ ಆಗಬೇಕು, ತಮ್ಮ ಆಪ್ತರೇ ಅತಿಥಿಗಳಾಗಬೇಕು ಎಂದು ಆದೇಶಿಸುವ ರೀತಿ ವ ರ‍್ತಿಸುತ್ತಾರೆ.ಸರ‍್ಕಾರಿ ಕಾರ‍್ಯಕ್ರಮದಲ್ಲಿ ಶಿಷ್ಟಾಚಾರ ಮರೆತು ಹೀಗೆಲ್ಲಾ ಅವಕಾಶ ಮಾಡುವುದು ಸರಿಯೆ? ಇದು ನಮ್ಮಂಥ ಅನೇಕರ ಅಭಿಪ್ರಾಯ ಇಂಥ ಕಾರ‍್ಯಕ್ರಮ ಆಯೋಜಕರ ಜೊತೆಗಿರುವವರು ಸಮಷ್ಠಿ ಮನಸ್ಥಿತಿಯವರಾಗಿದ್ದರೆ ಇವೆಲ್ಲಾ ತಪ್ಪುಗಳಾಗಲ್ಲ.. ನಮ್ಮ ಅಭಿಪ್ರಾಯವೇತಪ್ಪಿದ್ದರೆ ಕ್ಷಮೆ ಇರಲಿ. ಸೂಕ್ತವೆನಿಸಿದರೆ ಪ್ರಕಟಿಸಿ.
-ಇಂತಿ ತಮ್ಮ ಪ್ರೀತಿಯ ಸಮಾಜದ ಪ್ರತಿನಿಧಿ, ಪ್ರತ್ಯಕ್ಷದರ‍್ಶಿ (ಹೆಸರು ಪ್ರಕಟಿಸುವುದು ಬೇಡ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *