

ದೀವರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡುವುದು, ದೀವರ ಹಿತ ಕಾಪಾಡುವ ಪಕ್ಷ,ವ್ಯಕ್ತಿ,ಸರ್ಕಾರದ ಬೆಂಬಲಕ್ಕೆ ನಿಲ್ಲುವುದು ಸೇರಿದಂತೆ ಕೆಲವು ಠರಾವುಗಳನ್ನು ಮಾಡಿ ಸಂಬಂಧಿಸಿದವರ ಗಮನಕ್ಕೆ ತರುವ ಮತ್ತು ಅದಕ್ಕೆ ಹಕ್ಕೊತ್ತಾಯ ಮಾಡುವ ನಿರ್ಣಯವನ್ನು ಸಿದ್ಧಾಪುರ ನಾಮಧಾರಿ ಅಭಿವೃದ್ಧಿ ಸಂಘದ ವಿಶೇಶ ಸಭೆ ಅಂಗೀಕರಿಸಿದೆ.


ಇಂದು ಸಿದ್ಧಾಪುರ ಲಯನ್ಸ್ ಬಾಲಭವನದಲ್ಲಿ ನಡೆದ ಸಮಾಜದ ತುರ್ತು ಸಭೆಯಲ್ಲಿ ದೀವರು, ಈಡಿಗ ನಾಮಧಾರಿ ಅಭಿವೃದ್ಧಿ ಸಂಘದ ಯೋಜಿತ ಸಮೂದಾಯಭವನ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ವಿಶೇಶ ನಿಧಿಯಿಂದ ಮಂಜೂರಿಯಾದ 2 ಕೋಟಿ ರೂಪಾಯಿ ಅನುದಾನ ಬಳಕೆ, ಈ ಹಿಂದಿನ ಕಟ್ಟಡ ವಿಸ್ತರೀಕರಣ ಅದಕ್ಕೆ ಬೇಕಾದ ಅನುಕೂಲಗಳ ಕುರಿತು ಚರ್ಚೆ ನಡೆಯಿತು. ಇದೇ ಸಂದರ್ಭದಲ್ಲಿ ನಾಮಧಾರಿ ಸಮೂದಾಯ ಭವನ ನಿರ್ಮಾಣ, ಅದಕ್ಕೆ ಸಹಕರಿಸಿದ ಜನಪ್ರತಿನಿಧಿಗಳು, ವ್ಯಕ್ತಿಗಳಿಗೆ ಕೃತಜ್ಞತೆ ಹೇಳಿ ಅವರಿಗೆ ಸಮಾಜದಿಂದ ಅಭಿನಂದಿಸಲು ತೀರ್ಮಾನಿಸಲಾಯಿತು.
ಹಿಂದೆ ಮಂಜೂರಿಯಾದ ಅನುದಾನದ ಹಣ ತಡೆಹಿಡಿದಿರುವುದು, ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷರನ್ನು ಬದಲಿಸಲು ಪರೋಕ್ಷ ಕಾರ್ಯಾಚರಣೆ ನಡೆಸುತ್ತಿರುವವರು ಸೇರಿದಂತೆ ಸಮಾಜದ ಹಿತ, ಸಮೂದಾಯದ ಮುಖಂಡರ ಹಿತ ಕಾಯದ ವ್ಯಕ್ತಿಗಳು,ಶಕ್ತಿಗಳಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡಲು ಸಭೆಯಲ್ಲಿ ಸೇರಿದ ಸಮಾಜದ ಸಂಘದ ಸದಸ್ಯರು ಒಕ್ಕೋರಲಿನ ಬೆಂಬಲ ನೀಡಿದರು.
ಶಿರಸಿ ಕ್ಷೇತ್ರದ ಶಾಸಕರು,ವಿಧಾನಸಭಾಧ್ಯಕ್ಷರ ಹೆಸರು ಹೇಳದೆ ಅನಿವಾರ್ಯ ಸಂದರ್ಭಗಳಲ್ಲೂ ಅವರ ಹೆಸರನ್ನು ಉಲ್ಲೇಖಿಸದೆ ನಾಮಧಾರಿ ಸಂಘದ ಸದಸ್ಯರು, ಮುಖಂಡರು ಜಿಲ್ಲೆಯ ಇತರ ಶಾಸಕರು, ಸಂಸದರು, ಜನಪ್ರತಿನಿಧಿಗಳು,ಅಧಿಕಾರಿಗಳ ಸಹಕಾರ ಸ್ಮರಿಸಿದ್ದು ಸ್ಥಳಿಯ ಶಾಸಕರ ಜಾತ್ಯಾಂಧತೆ,ಧರ್ಮಾಂಧತೆಯ ಫಲಶೃತಿ ಎನ್ನುವ ಚರ್ಚೆ ಪರೋಕ್ಷವಾಗಿ ನಡೆಯಿತು.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
