

ಸ್ಥಳಿಯ ಶಾಸಕರು ಮತ್ತು ತಾಲೂಕು ಪಂಚಾಯತ್ ಅಧ್ಯಕ್ಷರು ಅಧಿಕಾರಿಗಳಿಗೆ ಸಲುಗೆ ಕೊಟ್ಟಿದ್ದು ಇದರಿಂದಾಗಿ ತಾಲೂಕಿನಲ್ಲಿ ನೋಡೋಣ, ಮಾಡೋಣ ಎನ್ನುವ ಅಧಿಕಾರಿಗಳು ಹೆಚ್ಚಾಗಿದ್ದು ಇದರಿಂದಾಗಿ ಜನಸಾಮಾನ್ಯರ ಬೇಡಿಕೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ ಎಂದು ತಾ.ಪಂ. ಸದಸ್ಯ ನಾಶಿರ್ ಖಾನ್ ಆರೋಪಿಸಿದರು.
ಬುಧವಾರ ಇಲ್ಲಿಯ ತಾ.ಪಂ. ಸಭಾಭವನದಲ್ಲಿ ನಡೆದ ಮಾಸಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ನಾಶಿರ್ ಖಾನ್ ನಮ್ಮ ಜಿಲ್ಲೆಯ ಹಣೆಬರಹ ಸರಿ ಇಲ್ಲ. ಶಾಸಕರ ಸಭೆಯಲ್ಲಿ ಅಧಿಕಾರಿಗಳು ಕಾರಣ ಹೇಳಿ ಶಾಸಕರನ್ನು ಸುಮ್ಮನಿರಿಸುತ್ತಾರೆ, ಇಲ್ಲಿ ಅಧ್ಯಕ್ಷರು ಕೇಳಿದಂತೆ ಮಾಡಿ, ಹೇಳಿದಂತೆ ಮಾಡಿ ನಮಗೆ ಕೂಡ್ರಿಸುತ್ತಾರೆ.
ಹೀಗೆ ಶಾಸಕರು, ಅಧ್ಯಕ್ಷರ ಮೃಧು ನೀತಿಯಿಂದಾಗಿ ತಾಲೂಕಿಗೆ ಅನ್ಯಾಯವಾಗುತ್ತಿದೆ. ನಾವು ಮಾತನಾಡಿದ್ದಕ್ಕೆ ಅಧಿಕಾರಿಗಳ ಉತ್ತರ ಇಲ್ಲ, ಅಧ್ಯಕ್ಷರು ಮಾಡಿ, ನೋಡಿ ಎನ್ನುತ್ತಾರೆ. ಶಾಸಕರು ಅಧಿಕಾರಿಗಳಿಗೆ ಇದನ್ನು ಮಾಡಲು ಸಾಧ್ಯವೆ? ಎಂದು ಕೇಳುತ್ತಾರೆ. ಕೆಲವು ಸಭೆಗಳಿಗೆ ನಮ್ಮ ಸದಸ್ಯರೇ ಬರುವುದಿಲ್ಲ. ಅವರ ಕ್ಷೇತ್ರ, ಊರುಗಳ ತೊಂದರೆ ನಮಗೆ ಗೊತ್ತೆ? ಮೇಲಿನಿಂದ ಕೆಳಗಿನ ವರೆಗೆ ಜನಪ್ರತಿನಿಧಿಗಳು ಉಪೇಕ್ಷೆ ಮಾಡುವುದರಿಂದ ಅಧಿಕಾರಿಗಳು ನಿರ್ಲಕ್ಷ ಮಾಡುತ್ತಾರೆ. ಹೀಗಾಗಿ ತಾಲೂಕು ಜಿಲ್ಲೆಯ ಸ್ಥಿತಿ ಚಿಂತಾಜನಕವಾಗಿದೆ ಎಂದರು.
* ಅಡಿಕೆ ಕೊಳೆ ರೋಗದ ಬಗ್ಗೆ ರೈತರೇ ಇಲಾಖೆಗೆ ಅರ್ಜಿ ನೀಡಬೇಕು – ತೋಟಗಾರಿಕಾ ಇಲಾಖೆ ಅಧಿಕಾರಿ
- ಕೃಷಿ ಯಂತ್ರೋಪಕರಣಗಳ ಬಳಕೆ ಆಗುತ್ತಿಲ್ಲ ರೈತರ ಅನುಕೂಲಕ್ಕಾಗಿ ಸರ್ಕಾರದ ಧನಸಹಾಯದ ಯಂತ್ರೋಪಕರಣಗಳನ್ನು ಪೂರೈಸುವ ಧ.ಗ್ರಾ. ಯೋಜನೆ ಸರ್ಕಾರದ ಹಣ ಪಡೆದು ರೈತರಿಗೆ ನೆರವಾಗುವ ಬದಲು ರೈತರಿಗೆ ದ್ರೋಹ ಮಾಡುತ್ತಿದೆ. -ತಾ.ಪಂ. ಅಧ್ಯಕ್ಷರು


