ಕೊನೆಗೂ ನಿರ್ಮಾಣವಾಗಲಿದೆ ಕೋಡಕಣೆ,ಬ್ಯಾಡಗೋಡು ಸೇತುವೆ.

ಜೋಗ ಸಮೀಪದ ಕೋಡಕಣಿ ಮತ್ತು ಬ್ಯಾಡಗೋಡಿಗೆ ಅವಶ್ಯವಿದ್ದ ಕಿರುಸೇತುವೆಗೆ ಅಂತೂ ನಿರ್ಮಾಣ ಯೋಗ ಬಂದಂತಿದೆ. ಕಳೆದ ಹಲವು ವರ್ಷಗಳಿಂದ ಇದ್ದ ಹಲಗೇರಿ ಪಂಚಾಯತ್ ಕೋಡಕಣಿ ಹೋಬಳಿಯ ಪುರಾತನ ಗ್ರಾಮಗಳಾದಕೋಡಕಣಿ ಮತ್ತು ಬ್ಯಾಡಗೋಡುಗಳಿಗೆ ಅವಶ್ಯವಿದ್ದ ಸೇತುವೆ ವಿಚಾರ ಹಲವು ದಶಕಗಳ ಬೇಡಿಕೆಯಾಗಿತ್ತು. ಈಗ ಸರ್ಕಾರ ಮಂಜೂರು ಮಾಡಿರುವ 20 ಲಕ್ಷ ಅನುದಾನದಲ್ಲಿ ಈ ಸೇತುವೆಯ ಕಾಮಗಾರಿ ಪ್ರಾರಂಭವಾಗಲಿದೆ.

ಹಳೆಯ ಬೇಡಿಕೆ- ಕೋಡಕಣಿ, ಬ್ಯಾಡಗೋಡುಗಳಿಗೆ ಅತೀ ಅವಶ್ಯವಿದ್ದ ಸೇತುವೆಗೆ ಹಲವು ವರ್ಷಗಳಿಂದ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಜಿ.ಪಂ. ಅನುದಾನದಲ್ಲಿ ಹಣ ಮಂಜೂರಿಯಾಗಿತ್ತು. ಆದರೆ ಈ ಸೇತವೆ ನಿರ್ಮಾಣ ಪ್ರದೇಶದಲ್ಲಿ ಕೃಷಿ ಭೂಮಿಗೆ ತೊಂದರೆ ಆಗುವ ಹಿನ್ನೆಲೆಯಲ್ಲಿ ಸ್ಥಳಿಯರೊಬ್ಬರು ಆಕ್ಷೇಪಿಸಿದ್ದರು. ಆದರೆ ಈಗ ಈ ತೊಡಕು ನಿವಾರಣೆಯಾಗಿದ್ದು ಸದ್ಯ ಈ ಸೇತುವೆಯ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮಳವಳ್ಳಿ ತಿಳಿಸಿದ್ದಾರೆ.

ಪುರಾತನ ಜೈನ ಅವಶೇಷಗಳಿರುವ ಜೈನ ಮತಾವಲಂಬಿಗಳೇ ವಾಸವಿರುವ ಕೋಡಕಣಿ ಮತ್ತು ಈ ಕೋಡಕಣಿಗೆ ಸಮೀಪದ ಬ್ಯಾಡಗೋಡಿಗೆ ಮಳೆಗಾಲದಲ್ಲಿ ಸಂಪರ್ಕ ಕಡಿತವಾಗುತಿತ್ತು. ಮುಂದಿನ ಮಳೆಗಾಲದ ಒಳಗೆ ಈ ಗ್ರಾಮಗಳಿಗೆ ಸಂಪರ್ಕ ಸೇತುವೆ ನಿರ್ಮಾಣವಾಗುತ್ತಿರುವುದರಿಂದ ಈಗ್ರಾಮಗಳ ಮಳೆಗಾಲದ ಸಮಸ್ಯೆ ಈ ವರ್ಷಕ್ಕೆ ಅಂತ್ಯವಾದಂತಿದೆ.

kadkeri news-ಸಿದ್ದಾಪುರ: ಇಂದಿನ ದಿನಮಾನಗಳಲ್ಲಿ ಆರೋಗ್ಯಯುತ ಸಮಾಜದ ನಿರ್ಮಾಣಅತ್ಯಗತ್ಯ. ಆರೋಗ್ಯಯುತವಾದಮಕ್ಕಳನ್ನು ಬೆಳೆಸುವುದು ನಮ್ಮ ರಕರ್ತವ್ಯ. ಮಹಿಳೆಯರು ಗರ್ಭಿಣಿಯರಿದ್ದಾಗಲೇ ಪೌಷ್ಟಿಕಯುತಆಹಾರವನ್ನು ಸೇವಿವುದರಿಂದಆರೋಗ್ಯವಂತ ಮಕ್ಕಳನ್ನು ಪಡೆಯಲು ಸಾಧ್ಯ.ಇಂತಹ ಕಾರ್ಯಕ್ರಮಗಳಿಂದ ಈಕುರಿತುಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆಎಂದುಜಿಲ್ಲಾ ಪಂಚಾಯತ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿಅಭಿಪ್ರಾಯಪಟ್ಟರು.
ಅವರುತಾಲೂಕಿನಕಡಕೇರಿಯಲ್ಲಿ ಬೇಡ್ಕಣಿಗ್ರಾಮಪಂಚಾಯತ ವ್ಯಾಪ್ತಿಯಎಂಟುಅಂಗನವಾಡಿ ಕೇಂದ್ರಗಳ ವತಿಯಿಂದ ನಡೆದ ಪೋಷಣ ಮಾಸಾಚರಣೆಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಪಿಡುಗುತೊಲಗಿಸಲು ಸರ್ಕಾರಗಳು ವಿವಿಧರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿವೆ. ಆದರೂ ನಾವು ಸಾಧಿಸಬೇಕಾದದ್ದುಇನ್ನೂಇದೆ.ಇಂತಹ ಕಾರ್ಯಕ್ರಮಗಳು ಕೇವಲ ಇಲಾಖೆಗೆ ಸೀಮಿತವಾಗಿರದೆ ಸಮಾಜಮುಖಿಯಾಗಿರಬೇಕು. ಇದರಿಂದಜನಜಾಗೃತಿಯಾಗಬೇಕು.ಇದಕ್ಕೆ ಶ್ರಮಿಸುವಅಂಗನವಾಡಿಕಾರ್ಯಕರ್ತೆಯರ ಪಾತ್ರ ಶ್ಲಾಘನೀಯಎಂದರು.
ಪ್ರಾಸಾವಿಕವಾಗಿ ಮಾತನಾಡಿದಹಿರಿಯ ವಲಯ ಮೆಲ್ವಿಚಾರಕಿರಾಜೇಶ್ವರಿ ಗವಿನಮಠಅಪೌಷ್ಟಿಕತೆಯನ್ನು ಹೋಗಲಾಡಿಸಿ ಸದೃಢ ಸಮಾಜದ ನಿರ್ಮಾಣ ಈ ಕಾರ್ಯಕ್ರಮದಉದ್ದೇಶ. ಕಿಶೋರಿಯರಿಂದ ಹಿಡಿದುಗರ್ಭಿಣಿಯರು, ಮಕ್ಕಳ ತಾಯಂದಿರು ಹಾಗೂ ಅಂಗನವಾಡಿ ಮಕ್ಕಳಿಗೆ ವಿವಿಧ ಹಂತದಲ್ಲಿ ಪೌಷ್ಠಿಕ ಆಹಾರವನ್ನು ನೀಡಲಾಗುತ್ತದೆ. ಜೊತೆಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುವುದುಎಂದರು.
ಬೇಡ್ಕಣಿಗ್ರಾಮ ಪಂಚಾಯತ ನಿಕಟಪೂರ್ವಉಪಾಧ್ಯಕ್ಷ ಉಮೇಶ ನಾಯ್ಕಅಧ್ಯಕ್ಷತೆ ವಹಿಸಿದ್ದರು.
ಇಂದು ನಡೆದ ಪೋಷಣಮಾಸಾಚರಣೆಕಾರ್ಯಕ್ರಮದಲ್ಲಿಗರ್ಭಿಣಿಯರಿಗೆ ಸೀಮಂತ, ಅನ್ನ ಪ್ರಾಸನ್ಯ, ಮೂರು ವರ್ಷತುಂಬಿದ ಮಗುವಿಗೆ ಅಂಗನವಾಡಿಕೇಂದ್ರಕ್ಕೆ ಸ್ವಾಗತ ಹಾಗೂ ಹುಟ್ಟುಹಬ್ಬ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು.
ಕಾರ್ಯಕ್ರಮದಲ್ಲಿ ವಲಯ ಮೆಲ್ವಿಚಾರಕಿ ಸುಜಾತ, ಮೆಲ್ವಿಚಾರಕಿಯರಾದಗೀತಾ, ಕವಿತಾ, ಆಯುಷ್, ತಾಲೂಕಾಒಕ್ಕೂಟದಅಧ್ಯಕ್ಷೆ ವೀಣಾ ಸಿ ಕಾನಳ್ಳಿಮಠ, ಅಂಗನವಾಡಿಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಇಂದಿರಾ ಟಿ ನಾಯ್ಕ ಪ್ರಾರ್ಥಿಸಿದರು, ಗೀತಾ ಕೆ ನಾಯ್ಕ ಸ್ವಾಗತಿಸಿದರು, ಗಾಯತ್ರಿ ಎಂ ಮಡಿವಾಳ ನಿರೂಪಿಸಿದರು, ಲಕ್ಷ್ಮೀಎಸ್ ನಾಯ್ಕ ವಂದಿಸಿದರು.

raameshwara krushi paeivaara-
ಸಿದ್ದಾಪುರ: ರೈತರಿಗೆ ಕೃಷಿಯಲ್ಲಿ ಕಷ್ಟ ಬಹಳಷ್ಟಿದೆ. ಪ್ರಕೃತಿಯ ಆಗುಹೋಗುಗಳನ್ನು ಅನುಭವಿಸುವವರು ನಾವು. ನಮ್ಮಲ್ಲಿರುವ ಸಣ್ಣ ಜಮೀನಿನಲ್ಲಿಯೇ ಪ್ರಯೋಗಶೀಲತೆಯನ್ನು ಬೆಳೆಸಿಕೊಂಡು ಹೊಸತನವನ್ನು ಕೃಷಿಯಲ್ಲಿ ತೊಡಗಿಸಿಕೊಂಡಾಗ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.

ಅವರು ತಾಲೂಕಿನ ಇಟಗಿಯಲ್ಲಿ ಜಲಾನಯನ ಇಲಾಖೆ, ಕೃಷಿ ಇಲಾಖೆ, ಸ್ಕೊಡ್ ವೆಸ್ಟ್ ಸಂಸ್ಥೆ ಸಹಯೊಗದಲ್ಲಿ ಶ್ರೀ ರಾಮೇಶ್ವರ ಕ್ರಷಿ ಪರಿವಾರ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ನ ರೈತ ಉತ್ಪಾದಕ ಸಂಸ್ಥೆಯ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ಯುವ ಯುವಜನತೆ ನಿಂತ ನೀರಾಗಿ ಯೋಚಿಸಿದರೆ ಪರಿಹಾರ ಸಿಗುವುದಿಲ್ಲ. ಹೊಸತನವನ್ನು ಯೋಚಿಸಬೇಕು. ಅದನ್ನು ಕಾರ್ಯಗತ ಮಾಡಬೇಕು. ಆಧುನಿಕತೆಯ ಸ್ಪರ್ಶವನ್ನು ನೀಡಬೇಕು. ಶ್ರಮ ಇಲ್ಲದೆ ಯಾವುದೇ ಯಶಸ್ಸು ಸಾಧ್ಯವಾಗುವುದಿಲ್ಲ ಯಾವುದೇ ಕಾರ್ಯಕ್ರಮ ಅನುಷ್ಠಾನವಾಗಲ್ಲ. ಕಷ್ಟದ ಮಧ್ಯೆಯೂ ಹೊಸತನವನ್ನು ರೂಢಿಸಿಕೊಳ್ಳಬೇಕು ಎಂದರು. ಪ್ರಕ್ರತಿಯಲ್ಲಿಯ ಆಗು ಹೋಗು ಪರಿಣಾಮ ಎದುರಿಸಿ ಕಾಲಕಾಲಕ್ಕೆ ಹೊಸ ತನದಲ್ಲಿ ಯೋಚಿಸಬೇಕು, ಸರಕಾರದ ಕೆಲಸ ಪಾರದರ್ಶಕ ವಾಗಿ ಆಗಬೇಕು, ಯಾವುದೇ ಸರಕಾರ ಜನರನ್ನು ಬಿಟ್ಟು ಹೋಗಲು ಸಾದ್ಯವಿಲ್ಲ, ಜೊತೆ ಜೊತೆಯಲ್ಲೇ ಹೋಗಬೇಕಾಗುತ್ತದೆ. ಸರ್ಕಾರದ ಕಾರ್ಯಗಳು ವಿಶ್ವಾಸಾರ್ಹತೆಯನ್ನು ಗಳಿಸಬೇಕಾದರೆ ಸರ್ಕಾರ ಸಂಸ್ಥೆಗಳ ಪಾತ್ರ ಅತಿಮುಖ್ಯ. ಸ್ಕೋಡ ವೇಸ್ ಸಂಸ್ಥೆ ಸರ್ಕಾರ , ಜನರು ಖಾಸಗಿ ಅವರ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ಸಾವಯವ ಪದಾರ್ಥಗಳನ್ನು ಬೆಳೆದರೆ ಬೇಡಿಕೆ ಹೆಚ್ಚಿದೆ ನಮ್ಮನ್ನು ನಾವು ಗುರ್ತಿಸಿಕೊಳ್ಳಬೇಕಾದರೇ ನಮ್ಮದೇ ಬ್ರಾಂಡ್ ಸ್ಕಷ್ಟಿಸಬೇಕು. ಇಟಗಿ ಬ್ರಾಂಡ್ ಜಿಲ್ಲಾ, ರಾಜ್ಯ, ದೇಶಮಟ್ಟದಲ್ಲಿ ಹೆಸರು ಗಳಿಸುವಂಥ ಆಗಲಿ ಎಂದರು.
ಸ್ಕೊಡ ವೇಸ್ ಸಂಸ್ಥೆ ಯ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ ಬಹಳ ವರ್ಷಗಳಿಂದ ಕೃಷಿ ಸಮಸ್ಯೆಗಳಿಗೆ ಪರಿಹಾರ ಸವಾಲಾಗಿತ್ತು. ರೈತರು ಸ್ವಾವಲಂಬಿಗಳಾಗುವ ದಿಶೆಯಲ್ಲಿ ಈ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ. ರೈತರು ಆರ್ಥಿಕವಾಗಿ ಸ್ವಾವಲಂಬಿ ಗಳಾಗಬೇಕು. ಕಾರವಾರ, ಹಾವೇರಿ ಮತ್ತು ಗದಗ ಜಿಲ್ಲೆಯ ಲ್ಲಿ ನಮ್ಮ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ. ರೈತರು ಸಾವಲಂಬಿ ಗಳ ಆಗುವ ದಿಶೆಯಲ್ಲಿ ಕಾನೂನಾತ್ಮಕವಾಗಿ ಹಾಗೂ ವ್ಯವಹಾರಿಕ ವಾಗಿ ಜಿಲ್ಲೆಯಲ್ಲಿ 5 ಸಂಸ್ಥೆಗಳನ್ನು ಕಟ್ಟಲಾಗುತ್ತದೆ. ಇದಕ್ಕಾಗಿ ಪಾರದರ್ಶಕ ಗುಣಮಟ್ಟದ ಸೇವೆಯನ್ನು ಒದಗಿಸಲು ಸಂಸ್ಥೆ ಸದಾ ಸಿದ್ಧವಿದೆ. ಈ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ರಾಜ್ಯಕ್ಕೆ ಮಾದರಿಯಾಗಲು ಕೈ ಜೋಡಿ ಸುವಂತೆ ರೈತರಿಗೆ ಕರೆ ನೀಡಿದರು.
ಇಟಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಹೆಗಡೆ, ಅಧ್ಯಕ್ಷತೆ ವಹಿಸಿದ್ದರು. ಕೃಷಿ ಪರಿವಾರದ ಅಧ್ಯಕ್ಷ ಗೋವಿಂದರಾಜು ಹೆಗಡೆ, ಮಾತನಾಡಿದರು. ಜಿ. ಪಂ. ಸದಸ್ಯ ನಾಗರಾಜ ನಾಯ್ಕ, ಮೊಕ್ತೇಸರ ಚಂದ್ರಶೇಖರ ಹೆಗಡೆ, ಸಹಾಯಕ ಕೃಷಿ ನಿರ್ದೇಶಕ ಪ್ರಶಾಂತ್ ಜಿ ಎಸ್, ಉಪಸ್ಥಿತರಿದ್ದರು. ಕೃಷಿ ಪರಿವಾರದ ಸಂಸ್ಥಾಪಕ ಅಧ್ಯಕ್ಷ ರಮಾನಂದ ಮಾಬ್ಲೇಶ್ವರ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮೇಘನಾ ಪ್ರಾರ್ಥಿಸಿದರು. ಗಜಾನನ್ ಹೆಗಡೆ ನಿರೂಪಿಸಿದರು. ರಮಾನಂದ ನಾಯ್ಕ ಹರಗಿ ವಂದಿಸಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *