ಹಾರ್ನ್ ಬಿಲ್ ಅಥವಾ ಮಂಗಟ್ಟೆ ಪಕ್ಷಿ ಗೂಡಿಗಾಗಿ ತನ್ನ ರೆಕ್ಕೆ ಉದುರಿಸಿಕೊಳ್ಳುತ್ತದೆ. ಹೊರಹೋದ ಗಂಡು ಮರಳಿ ಗೂಡಿಗೆ ಬಾರದಿದ್ದರೆ ಹೆಣ್ಣು ಹಾರ್ನ್ ಬಿಲ್ ಸಾಯುತ್ತದೆ.! ಹೆಣ್ಣು ಹಾರ್ನ್ ಬಿಲ್ ಸತ್ತರೆ ಗಂಡು ಆತ್ಮಾರ್ಪಣೆ ಮಾಡುತ್ತದೆ. ಈ ಸೋಜಿಗ ಪ್ರಾಣಿ, ಪಕ್ಷಿ ಪ್ರಪಂಚದ ವಿಸ್ಮಯಗಳಲ್ಲೊಂದು
ರುಚಿ,ಅಭಿರುಚಿ,ಅಸಾಧಾರಣತೆ,ಅಸೀಮತೆ ಮನುಷ್ಯನಿಂದ ಮನುಷ್ಯನಿಗೆ ಭಿನ್ನ.
ಪ್ರಾಣಿ, ಪಕ್ಷಿ ಪ್ರಪಂಚ ಕೂಡಾ ಲೋಕೊ ಭಿನ್ನ ರುಚಿ, ವಿಭಿನ್ನ ವಿಚಿತ್ರ ಎನ್ನುವಂತಿರುತ್ತದೆ. ಗೀಜಗನ ಗೂಡು ಮನುಷ್ಯರನ್ನು ಆಕರ್ಷಿಸುವಷ್ಟು ಜಗತ್ತಿನ ಯಾವ ವೈಶಿಷ್ಟ್ಯವೂ ಯಾರನ್ನೂ ಆಕರ್ಷಿಸಲಾರದು ಎಂದು ಬದುಕಿದವರು ನಾವು. ಕೇದಿಗೆ ಬನದಲ್ಲಿ ಗೂಡು ಕಟ್ಟುವ ಗೀಜಗ ನಿಜಕ್ಕೂ ವಿಸ್ಮಯ ಪ್ರಪಂಚದ ಪಕ್ಷಿ. ಇಂಥ ಗೀಜಗನನ್ನೇ ಮೀರಿಸುವ ಮತ್ತೊಂದು ಪಕ್ಷಿ ಮಂಗಟ್ಟೆ ಅಥವಾ ಮಲಬಾರ್ ಹಾರ್ನ್ಬಿಲ್ಲ ಎನ್ನುವ ವಿಶೇಶ ಅನೇಕರಿಗೆ ತಿಳಿದಿರಲಾರದು.
ಪಶ್ಚಿಮಘಟ್ಟ ತಪ್ಪಲಿನಲ್ಲಿ ನಿರ್ಜನ, ನಿಶ್ಯ ಬ್ಧದ ಕಾಡಲ್ಲಿ ಕುಳಿತು ಅಸೀಮ ದಾಂಪತ್ಯ ಪಾವಿತ್ರತೆಗೆ ಸಾಕ್ಷಿಯಾಗುವ ಈ ಹಾರ್ನ್ ಬಿಲ್ ನ ಕೆಲವು ಪ್ರಬೇದಗಳು ಉತ್ತರ ಕನ್ನಡ ಜಿಲ್ಲೆಯ ಜೊಯಡಾ, ಗಣೇಶ್ ಗುಡಿ, ದಾಂಡೇಲಿ, ಯಲ್ಲಾಪುರ, ಕೈಗಾ, ಗೋವಾ ಭಾಗಗಳಲ್ಲೆಲ್ಲಾ ಕಂಡು ಬರುತ್ತವೆ. ಆ ಭಾಗದ ಇಂಥ ವೈಶಿಷ್ಟ್ಯಗಳನ್ನು ನಮಗೆ, ಜಗತ್ತಿಗೆ ತಿಳಿಸುತ್ತಿರುವ ಗ್ರೀನ್ ಇಂಡಿಯಾದ ಮಹೇಂದ್ರ ಕುಮಾರ ಗಣೇಶ್ ಗುಡಿಯ ಹಾರ್ನ್ಬಿಲ್ಲ್ ರೆಸಾರ್ಟ್ ಪರಿಚಯಿಸಿರುವಂತೆ ಆ ಭಾಗದ ಅನೇಕ ಜೀವವೈವಿಧ್ಯಗಳನ್ನು ಪರಿಚಯಿಸಿದ್ದಾರೆ.
ಮಹೇಂದ್ರರ ಮಾತಿನಲ್ಲಿ ಈ ವೈಶಿಷ್ಟ್ಯಗಳನ್ನು ಜನರಿಗೆ ಕೇಳಿಸಬೇಕೆಂದೇ ನಾವು ನಮ್ಮ samaajamukhi ಯು ಟ್ಯೂಬ್ ನಲ್ಲಿ ಅವರ ವೈಶಿಷ್ಟ್ಯ, ಹಾರ್ನ್ ಬಿಲ್ ವಿಶೇಶತೆಗಳನ್ನು ಮಾತನಾಡಿಸಿದ್ದೇವೆ. samajamukhi ಯು ಟ್ಯೂಬ್ ಚಾನೆಲ್ ಮತ್ತು samajamukhi.net ನ್ಯೂಸ್ ಪೋರ್ಟಲ್ ಗಳಿಗೆ subscribe ಆಗುವ ಮೂಲಕ ನಮಗೂ ನೆರವಾಗಿ ನಿಮ್ಮ ಜ್ಞಾನದಾಹ ತೀರಿಸಿಕೊಳ್ಳಿ. ಅಂದಹಾಗೆ- ಹಾರ್ನ್ ಬಿಲ್ ಅಥವಾ ಮಂಗಟ್ಟೆ ಪಕ್ಷಿ ಗೂಡಿಗಾಗಿ ತನ್ನ ರೆಕ್ಕೆ ಉದುರಿಸಿಕೊಳ್ಳುತ್ತದೆ. ಹೊರಹೋದ ಗಂಡು ಮರಳಿ ಗೂಡಿಗೆ ಬಾರದಿದ್ದರೆ ಹೆಣ್ಣು ಹಾರ್ನ್ ಬಿಲ್ ಸಾಯುತ್ತದೆ.! ಹೆಣ್ಣು ಹಾರ್ನ್ ಬಿಲ್ ಸತ್ತರೆ ಗಂಡು ಆತ್ಮಾರ್ಪಣೆ ಮಾಡುತ್ತದೆ. ಈ ಸೋಜಿಗ ಪ್ರಾಣಿ, ಪಕ್ಷಿ ಪ್ರಪಂಚದ ವಿಸ್ಮಯಗಳಲ್ಲೊಂದು.