ಸಾಮಾನ್ಯ ಮನುಷ್ಯನಿಂದ ಪವರ್ ಟಿ.ವಿ. ವರೆಗೆ….. ಏನು ನಡೆಯುತ್ತಿದೆ.

ಸುಮಾರು ಒಂದೂವರೆ ವರ್ಷ, ಅದಕ್ಕಿಂತ ಹಿಂದೆ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅದಕ್ಕಿಂತ ಹಿಂದೆ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಲೆಲ್ಲಾ ರಾಜ್ಯದಾದ್ಯಂತ ಪ್ರತಿಭಟನೆ ನಡೆಯುತಿತ್ತು, ಚರ್ಚೆ ನಡೆಯುತಿತ್ತು ಇಂದಿರಾ ಕ್ಯಾಂಟೀನ್ ಯಾಕೆ? ಬಡವರಿಗೆ ಅಕ್ಕಿ, ಹಾಲು, ಮೊಟ್ಟೆ, ಸಬ್ಸಿಡಿ ಎಲ್ಲವೂ ಯಾಕೆ ಎಂದು ಪರಿವಾರದ ಜನ ಪ್ರಶ್ನಿಸುತಿದ್ದರು. ಹಾಲು, ಮೊಟ್ಟೆ, ಅಕ್ಕಿ ಫಲಾನುಭವಿಗಳಿಗೆ ಕೂಡಾ ಅಂದಿನ ಸರ್ಕಾರ, ಮುಖ್ಯಮಂತ್ರಿ, ವ್ಯವಸ್ಥೆ ಬಗ್ಗೆ ಖಾರವಾಗಿ ಮಾತನಾಡುವಂತೆ ಉತ್ತೇಜಿಸಲಾಗುತಿತ್ತು. ಮುಂದೆ 2019 ರ ಮೊದಲು ಅನೇಕ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಲಾಯಿತು. ಆ ಅವಧಿಯಲ್ಲಿ ಸರ್ಕಾರಕ್ಕಾಗಿ ಪ್ರಯತ್ನಿಸಿದ ಪ್ರಮುಖರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಪ್ರಮುಖರು. ಈ ವಿಜಯೇಂದ್ರ ಶಾಸಕರೋ? ಮಂತ್ರಿಯೋ? ಸರ್ಕಾರದ , ಪ್ರಜಾಪ್ರಭುತ್ವ ವ್ಯವಸ್ಥೆಯ ಯಾವ ಸ್ಥಾನ-ಮಾನದಲ್ಲಿದ್ದಾರೋ ತಿಳಿದಿಲ್ಲ. ಆದರೆ ಪ್ರತಿದಿನದ ವಿದ್ಯಮಾನದಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿ.

ಇಂಥ ಬೇನಾಮಿ, ಅತಿಪ್ರಮುಖ ವ್ಯಕ್ತಿಗಳು ಎಸ್.ಎಂ. ಕೃಷ್ಣ, ದೇವೇಗೌಡ, ಬಂಗಾರಪ್ಪ, ಕುಮಾರಸ್ವಾಮಿ, ಸಿದ್ಧರಾಮಯ್ಯ, ರಾಮಕೃಷ್ಣ ಹೆಗಡೆ ಇವರೆಲ್ಲಾ ಮುಖ್ದಯಮಂತ್ರಿಗಳಿದ್ದಾಗಲೂ ಇರುತಿದ್ದರೊ? ಇದ್ದರೊ ಬಹುಶ: ಯಾರಿಗೂ ಗೊತ್ತಿಲ್ಲ. ಆದರೆ ಸ್ವಯಂ ಘೋಷಿತ ರಾಷ್ರೀಯವಾದಿಗಳೂ, ದೇಶಭಕ್ತರೂ, ಹಿಂದುತ್ವವಾದಿಗಳೂ ಆಗಿರುವ ಬಿ.ಜೆ.ಪಿ. ಆಡಳಿತದಲ್ಲಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿದ ಅವರ ಮಗ ವಿಜಯೇಂದ್ರ ಜಿಲ್ಲಾಧಿಕಾರಿಗಳೊಂದಿಗೆ ನೇರವಾಗಿ ಮಾತನಾಡುತ್ತಾರೆ. ಸಂಬರಗಿಯಂಥ ಯಡಿಯೂರಪ್ಪ ಪಾಳಯದ ವ್ಯಕ್ತಿಗಳು ಸರ್ಕಾರದ ಒಳ ಹೊರಗೆಲ್ಲಾ ವ್ಯವಹರಿಸುತ್ತಾರೆ. ಈ ವಿದ್ಯಮಾನ ನಡೆಯುತ್ತಿರುವಂತೆಯೇ ವಿಜಯೇಂದ್ರನವರ ಮೇಲೆ ಐದು ಸಾವಿರ ಕೋಟಿಯ ಆರೋಪ ಕೇಳಿ ಬರುತ್ತದೆ.

ನಂತರ ದಿಢೀರಾಗಿ ಸುದ್ದಿಯಾದ ಗಾಂಜಾ-ಡ್ರಗ್ಸ್ ವ್ಯವಹಾರದಲ್ಲಿ ಇದೇ ವಿಜಯೇಂದ್ರರ ಆಪ್ತರೆನ್ನುವ ಸಂಬರಗಿ, ಇಂದ್ರಜಿತ್ ರಂಥವರೆಲ್ಲಾ ಸುದ್ದಿಯ ಕೇಂದ್ರ ಬಿಂದುವಾಗುತ್ತಾರೆ. ಇದನ್ನೆಲ್ಲಾ ಬಹಿರಂಗಮಾಡುತಿದ್ದ ಪವರ್ ಟಿ.ವಿ. ಪ್ರಸಾರ ನಿಲ್ಲಿಸಲಾಗುತ್ತದೆ. ವಾಸ್ತವದಲ್ಲಿ ವಿಜಯೇಂದ್ರ ಯಡಿಯೂರಪ್ಪ ಶಕ್ತಿವಂತರು, ಇವರನ್ನು ಬೆಂಬಲಿಸುವ ಪರಿವಾರ ರಾಷ್ಟ್ರೀಯವಾದಿಗಳು, ದೇಶಭಕ್ತರು! ಇವರ ಬೆಂಬಲಕ್ಕೆ ಎಂದಿನಂತೆ ಮಾಧ್ಯಮಸಮೂಹ. ಇಂಥ ವ್ಯವಸ್ಥೆಯನ್ನು ರಾಮರಾಜ್ಯ,ಪ್ರಜಾಪ್ರಭುತ್ವ ಎನ್ನಲಾಗುತ್ತದೆ. ಇಂಥದ್ದೊಂದು ಫ್ಯಾಸಿಸ್ಟ್ ವ್ಯವಸ್ಥೆ ರೂಪಿಸಲು ಪ್ರಯತ್ನಿಸುತ್ತಿರುವ ಪರಿವಾರದ ಜನ ಸದಾ ಕಾಂಗ್ರೆಸ್, ನೆಹರೂ ವಿರೋಧ ಮಾಡುತ್ತಾ ಇರುತ್ತಾರೆ. ಇವರೆಲ್ಲರಿಗೆ ನಾಯಕ ಪ್ರಧಾನಿ ನರೇಂದ್ರಮೋದಿ.

ಈಗ ಜನ ಈ ವಿದ್ಯಮಾನವನ್ನೂ ಸೇರಿ ಕೃಷಿ ಉತ್ಫನ್ನ ಮಾರುಕಟ್ಟೆ ನಿಯಮ ತಿದ್ದುಪಡಿ ಯಾಕೆ? ಭೂಸುಧಾರಣೆ ಮಸೂದೆ ತಿದ್ದುಪಡಿ ರೈತರಿಗೆ ಹೇಗೆ ಪೂರಕ. ಕಾರ್ಮಿಕ ಕಾನೂನುಗಳ ತಿದ್ದುಪಡಿ ಯಾಕೆ ಬೇಕು? ಮುಂದುವರಿದು ಸರ್ಕಾರ, ಆಡಳಿತ ನಿಮ್ಮ ಮೂಗಿನ ನೇರಕ್ಕೆ ನಡೆಯುತ್ತಿದೆ ಎಂದು ಪವರ್ ಟಿ.ವಿ. ಪ್ರಸಾರ ನಿಲ್ಲಿಸಿದರಲ್ಲ ಕರೋನಾ ಸಮಸ್ಯೆಯಿಂದ ಬಳಲುತ್ತಿರುವ ಜನರನ್ನು ಕೇಳದ ಆಸ್ಫತ್ರೆಗಳನ್ನೂ ನಿಲ್ಲಿಸಿಬಿಡಿ ನಂತರ ರೇಷನ್,ಪೆಟ್ರೋಲ್ ಎಲ್ಲಾ… ಕಡೆಗೆ ರಾಮನ ರಾಮಾಯಣ, ಮಹಾಭಾರತ ಕಾಲದಲ್ಲಿ ಇವೆಲ್ಲಾ ಇತ್ತೆ? ಎಂದು ಕೇಳಿ.

ಅಂದಹಾಗೆ ಬಿ.ಜೆ.ಪಿ. ಒಳಜಗಳದಿಂದಾಗಿ, ಯಡಿಯೂರಪ್ಪ ಮತ್ತವರ ಕುಟುಂಬವನ್ನು ನಿಯಂತ್ರಿಸುವ ಕಾರಣಕ್ಕಾಗಿ ಬಿ.ಜೆ.ಪಿ.ಯ ಸನಾತನವಾದಿ ವಲಸೆ ಆರ್ಯರ ಗುಂಪು ಇಂಥ ಆಟಗಳನ್ನೆಲ್ಲಾ ಆಡುತ್ತಿದೆಯಾ? ಇಂಥ ಅನೇಕ ಸಂಕಟದ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಕನಿಷ್ಟ ಒಂದು ವರ್ಷದಿಂದ ಕಳೆಯುತ್ತಿರುವ ದುರ್ದಿನಗಳನ್ನು ವಿರೋಧಿಸುತ್ತಾ ಇಂಥ ಅವ್ಯವಸ್ಥೆಯ ಅಚ್ಚೆದಿನ, ರಾಮರಾಜ್ಯ ಭಾರತಕ್ಕೆ, ಕರ್ನಾಟಕಕ್ಕೆ ಬೇಕಿತ್ತಾ? ಎಂದು ಪ್ರಶ್ನಿಸುತ್ತಾ ಹೌದೆಂದಾದರೆ….. ತಾಲೂಕಾ ಮಟ್ಟದ ಅವ್ಯವಸ್ಥಿತ ಆಸ್ಫತ್ರೆ, ಬಸ್ ನಿಲ್ಧಾಣಗಳಿಂದ ಪ್ರಾರಂಭವಾಗಿ ಬೆಂಗಳೂರು, ದೆಹಲಿಯ ಶಕ್ತಿ ಕೇಂದ್ರಗಳು ಅಲ್ಲಿಯ 10 ಜನಪಥ್ ಗಳು ಎಲ್ಲವೂ ಸರಿ ಯಾಕೆಂದರೆ ಇಂಥ ವ್ಯವಸ್ಥೆಯನ್ನು ಶತಮಾನಗಳಷ್ಟು ಹಿಂದೆ ನೀಷೆ, ಬ್ರೆಕ್ಟ್ ಸೇರಿದಂತೆ ಅನೇಕ ಸಾಹಿತಿಗಳು, ಕವಿಗಳು ಪ್ರಶ್ನಿಸಿದ್ದರು. ಅಂದಹಾಗೆ ಈ ವ್ಯವಸ್ಥೆಯನ್ನೂ ಉಪಾಯದಿಂದ ಸಮರ್ಥಿಸುತ್ತಾ ಮತ್ತೆ ಇವರೇ ಧರ್ಮವಂತರು, ದೇಶಪ್ರೇಮಿಗಳು, ರಾಷ್ಟ್ರೀಯವಾದಿಗಳೆಂದು ಪ್ರಚಾರ ಕೊಡುವವರು ಅಂಥವರನ್ನು ಬೆಂಬಲಿಸುವವರನ್ನು ಜನ ಎಲ್ಲಿಡಬೇಕು? ಎಂಥಾ ಗೌರವ ಕೊಡಬೇಕು ಎನ್ನುವುದನ್ನು ಮತಗಳಿಂದ ನಿರ್ಧರಿಸಬೇಕು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *