

ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ಮತ್ತು ಜನಪರ ಕಾಯಿದೆ ತಿದ್ದುಪಡಿ ವಿರೋಧಿಸಿ ರಾಷ್ಟ್ರದಾದ್ಯಂತ ನಾನಾ ಕ್ಷೇತ್ರಗಳಲ್ಲಿ ಪ್ರತಿರೋಧದ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇಂದು ರಾಜ್ಯ ವಿದ್ಯುತ್ ನಿಗಮದ ನೌಕರರು ರಾಜ್ಯ ದಾದ್ಯಂತ ಒಂದು ದಿನದ ಸಾಂಕೇತಿಕ ಪ್ರತಿಭಟನೆಗೆ ನಡೆಸುತಿದ್ದಾರೆ.



Qಸಿದ್ಧಾಪುರದಲ್ಲಿ ಇದರ ಅಂಗವಾಗಿ ಕೆ.ಪಿ.ಟಿ.ಸಿ.ಎಲ್. ನೌಕರರ ಸಂಘಟನೆಯಿಂದ ಸಾಂಕೇತಿಕ ಪ್ರತಿಭಟನಾ ಧರಣಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ವಿದ್ಯುತ್ ಸರಬರಾಜು ನಿಗಮದ ನೌಕರರ ಸಂಘದ ಉಪಾಧ್ಯಕ್ಷ ಹೊನ್ನಪ್ಪ ಅಂಬಿಗ, ಅಧ್ಯಕ್ಷ ಗಣೇಶ್ ಗೌಡ ಮತ್ತು ಕೆ.ಪಿ.ಟಿ.ಸಿ.ಎಲ್. ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಾರಾಯಣ ಅಪ್ಪಿನಬೈಲ್ ಅಗತ್ಯ ಸೇವೆಗಳನ್ನು ಖಾಸಗೀಕರಿಸಬಾರದು. ನಮ್ಮ ನಿಗಮದಲ್ಲಿ ಕಳೆದ ಸರ್ಕಾರದ ಅವಧಿಯಲ್ಲಿ ಸಿಬ್ಬಂದಿಗಳನ್ನು ನೇಮಕಮಾಡಲಾಗಿದೆ. ಈಗ ಈಗಿನ ಸರ್ಕಾರ ನಿಗಮವನ್ನು ಖಾಸಗೀಕರಿಸಿ ನಿಯಮಗಳನ್ನು ತಿದ್ದುಪಡಿ ಮಾಡಿದರೆ ನೌಕರರಿಗೆ ಗ್ರಾಹಕರಿಗೂ ಅನ್ಯಾಯವಾಗುತ್ತದೆ. ಹಾಗಾಗಿ ನಾವು ಇಂದು ಸಾಂಕೇತಿಕ ಪ್ರತಿಭಟನೆ ಮಾಡುತಿದ್ದೇವೆ.
ಮುಂದೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ. ನಮ್ಮ ಸಂಘಟನೆ ಸರ್ಕಾರದ ಖಾಸಗೀಕರಣ ನೀತಿ ಮತ್ತು ನಿಗಮದ ಕಾಯಿದೆ, ನೀತಿ-ನಿಯಮಗಳ ತಿದ್ದುಪಡಿ ವಿರೋಧಿಸುತ್ತದೆ ಎಂದು ಸಮರ್ಥಿಸಿದರು.
