

ಉತ್ತರ ಪ್ರದೇಶದ ಯೋಗಿ ಆಡಳಿತದ ಜಂಗಲ್ ರಾಜ್, ಕೇಂದ್ರದ ಮೋದಿ ಆಡಳಿತದ ಅರಾಜಕತೆ, ಜನವಿರೋಧಿ ಕಾನೂನುಗಳ ರಚನೆ,ಕೋಮುವಾದ ವಿಸ್ತರಿಸುವ ಆಡಳಿತ ಇವಗಳಿಂದ ಜನರಿಗಾಗುತ್ತಿರುವ ತೊಂದರೆಗೆ ಪ್ರತಿರೋಧವಾಗಿ ದೇಶದಾದ್ಯಂತ ಕಾಂಗ್ರೆಸ್ ಕರೆ ನೀಡಿದ್ದ ಮೌನ ಪ್ರತಿಭಟನೆ ಇಂದು ರಾಷ್ಟ್ರದಾದ್ಯಂತ ನಡೆಯಿತು.
ಈ ಮೌನಪ್ರತಿಭಟನೆಯ ಬೆಂಬಲವಾಗಿ ರಾಜ್ಯ, ಜಿಲ್ಲೆಗಳಲ್ಲಿ ಧರಣಿ ಸತ್ಯಾಗ್ರಹ ನಡೆಯಿತು. ಸಿದ್ಧಾಪುರದಲ್ಲಿ ಬ್ಲಾಕ್ ಕಾಂಗ್ರೆಸ್ ಆಯೋಜನೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಕಾರ್ಯಕರ್ತರು ನಗರದ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಕುಳಿತು ಮೌನ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರೀಯೆ ನೀಡಿದ ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ವಸಂತನಾಯ್ಕ ರಾಜ್ಯದಲ್ಲಿ ಬಿ.ಜೆ.ಪಿ. ಸರ್ಕಾರದ ಅದಕ್ಷತೆ, ರಾಷ್ಟ್ರದಲ್ಲಿ ಮೋದಿ ನೇತೃತ್ವದ ಸರ್ಕಾರದ ಉಡಾಪೆ ಗಳಿಂದ ಜನಸಾಮಾನ್ಯರಿಗೆ ಅನ್ಯಾಯವಾಗುತ್ತಿದೆ. ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಿ.ಜೆ.ಪಿ. ಸರ್ಕಾರ ವಿರೋಧ ಪಕ್ಷಗಳನ್ನು ಧಮನಿಸುತ್ತಿದೆ, ವಿರೋಧ ಪಕ್ಷಗಳ ನಾಯಕರಿಗಿಂತ ಹೆಚ್ಚು ಅಕ್ರಮ ಆಸ್ತಿ ಮಾಡಿರುವ ಯಡಿಯೂರಪ್ಪ, ವಿಜಯೇಂದ್ರ ಯಡಿಯೂರಪ್ಪ, ಸಿ.ಟಿ. ರವಿ ಸೇರಿದ ನಾಯಕರ ಮನೆ ಮೇಲೆ ಆದಾಯ ತೆರಿಗೆ, ಸಿ.ಆಯ್.ಡಿ., ಸಿ.ಬಿ.ಆಯ್. ದಾಳಿ ತನಿಖೆ ಗಳು ನಡೆಯುತ್ತಿಲ್ಲ ಯಾಕೆ? ಸ್ವಾತಂತ್ರ್ಯ ಗಳಿಸಿಕೊಟ್ಟ ಕಾಂಗ್ರೆಸ್ ಮೌನ, ಶಾಂತಿ-ಅಹಿಂಸೆಯಿಂದಲೇ ಬಿ.ಜೆ.ಪಿಯ ದುರಾಡಳಿತ, ಶ್ವೇಚ್ಛಾಚಾರ, ದುರಾಚಾರಗಳನ್ನು ಎದುರಿಸಲಿದೆ ಎಂದರು.




