ಸಿದ್ಧಾಪುರದ ಪೊಲೀಸ್ ಠಾಣೆಯಲ್ಲಿ ಸದಾ ಎರಡು ಗುಂಪುಗಳಿರುತ್ತವೆ ಎಂಬುದು ಬಹಿರಂಗ ಗುಟ್ಟು, ಈ ಗುಟ್ಟನ್ನು ಇಂದು ಮತ್ತೆ ಪುನರುಚ್ಛರಿಸಿದವರು
ಜಿಲ್ಲಾ ಬಿ.ಜೆ.ಪಿ. ಮಾಜಿ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್.
ಇಂದು ನಡೆದ ಪೊಲೀಸ್ ವರಿಷ್ಠಾಧಿಕಾರಿಗಳ ಜನಸಂಪರ್ಕ ಸಭೆಯಲ್ಲಿ ಸೇರಿದ್ದ ಅನೇಕರು ಥರಾವರಿ ದೂರು-ದುಮ್ಮಾನಗಳನ್ನು ಹೇಳಿಕೊಂಡರು. ಹೀಗೆ ದೂರು, ದುಮ್ಮಾನ, ಆರೋಪ ಮಾಡಿದವರಲ್ಲಿ ಕಿ.ಜಿ. ನಾಯ್ಕ ಹಣಜಿಬೈಲ್ ಒಬ್ಬರು.
ಹೀಗೆ ಕೆ.ಜಿ. ನಾಯ್ಕ ಹಣಜಿಬೈಲ್ ಪತ್ರ ಬರೆದವನು ನಾನಲ್ಲ ಎಂದು ಸಮಜಾಯಿಸಿಕೊಡಲು ಒಂದು ಪ್ರಬಲ ಕಾರಣವೇ ಇದೆ. ಸಿದ್ಧಾಪುರದ ಪೊಲೀಸ್ ಅಧಿಕಾರಿಗಳನ್ನು ಉದ್ದೇಶಿಸಿ, ಅವರ ಮೇಲೇ ಆರೋಪಿಸಿ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಎರಡ್ಮೂರು ಪತ್ರಗಳು ರವಾನೆಯಾಗಿವೆ, ಹೀಗೆ ಕೇ,ಜಿ,ನಾಯ್ಕರ ಹೆಸರು, ಸಹಿ ದುರುಪಯೋಗಮಾಡಿಕೊಂಡು ಇಂಥ ಪತ್ರ ಬರೆದ ಬೇನಾಮಿ ವ್ಯಕ್ತಿಯಾರೋ ಯಾರಿಗೂ ತಿಳಿದಿಲ್ಲ. ಆದರೆ ಈ ಬೇನಾಮಿ ಪತ್ರದ ಸಾರಾಂಶ ಇಲ್ಲಿಯ ಪೊಲೀಸ್ ಠಾಣೆಯ ಬಣ, ಗುಂಪುಗಾರಿಕೆ ಕುರಿತದ್ದು. ಇಂಥ ಬೇನಾಮಿ ಪತ್ರ ಬರೆಯುವ ಜಾಯಮಾನ ನನ್ನದಲ್ಲ, ಆದರೆ ನನ್ನ ಹೆಸರಿನಲ್ಲಿ ಬೇನಾಮಿ ಪತ್ರ ಬರೆದವರನ್ನು ಪತ್ತೆ ಹಚ್ಚದಿದ್ದರೆನಮಗೇ ಕೆಟ್ಟ ಹೆಸರು ಎಂದು ಕೆ.ಜಿ. ನಾ. ಸ್ಪಷ್ಟನೆನೀಡಿದರು. ಇಂಥ ಬೇನಾಮಿ ಪತ್ರದ ಮೂಲಕ ಕೆ.ಜಿ.ನಾಯ್ಕ ಹೆಸರು ಕೆಡಿಸಿ ಪೊಲೀಸರ ನಡುವೆ ಕಂದಕ ಸೃಷ್ಟಿಸುವ ದುರುದ್ದೇಶ ಹೊಂದಿದವರ್ಯಾರು? ಸಿದ್ಧಾಪುರದಲ್ಲಿ ನಡೆಯುತ್ತಿರುವ ಜಾತಿರಾಜಕೀಯ, ಬಣರಾಜಕೀಯ, ಶೂದ್ರವಿರೋಧಿ ಸಂಘಿದುಷ್ಟತನದ ಪಾಲು ಈ ಬೇನಾಮಿ ಪ್ರಕರಣದ ಹಿಂದಿದೆಯೆ? ಎನ್ನುವ ಪ್ರಶ್ನೆಗಳು ಈಗ ಎದ್ದಿವೆ. ಈ ಬಗ್ಗೆ ವಾಸ್ತವದ ವಿಡಿಯೋ samajamukhi.net ನ samaajamukhi ಯು ಟ್ಯೂಬ್ ಚಾನೆಲ್ ನಲ್ಲಿದೆ.https://www.youtube.com/watch?v=AnyDZWvOb4k&t=119s
(related)ಅಕ್ರಮ ಮದ್ಯ ಮಾರಾಟ ಮತ್ತು ಪ್ರವಾಸಿ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವ ವಿದ್ಯಮಾನವನ್ನು ನಿಯಂತ್ರಿಸುವುದು ಸೇರಿದಂತೆ ಸೈಬರ್ ಅಪರಾಧ ಮತ್ತು ಇತರ ಅಪರಾಧಗಳನ್ನು ತಡೆಯಲು ಕ್ರಮಕೈಗೊಳ್ಳುವುದಾಗಿ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಸಾದ ದೇವರಾಜ್ ತಿಳಿಸಿದ್ದಾರೆ. ಸಿದ್ಧಾಪುರ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಿದ ನಂತರ ಮಾತನಾಡಿದ ಅವರು ಅಕ್ರಮಮದ್ಯ ಮಾರಾಟ, ಸೈಬರ್ ಕ್ರೈಂ ಸೇರಿದಂತೆ ಕೆಲವು ವಿಚಾರಗಳ ಬಗ್ಗೆ ದೂರು ಬರುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆಯ ಕೆಲಸ ನಡೆಯುತ್ತಿರುತ್ತದೆ ಆದರೆ ಮದ್ಯ ಮಾರಾಟ ಮಾಡುವ ಜನರ ಮೇಲೆ ಕ್ರಮ ಜರುಗಿಸಲು ಸ್ಥಳಿಯ ಸಂಸ್ಥೆಗಳೀಗೆ ಅಧಿಕಾರವಿದೆ ಆ ಅಧಿಕಾರ ಬಳಸಿ ಅಕ್ರಮ ಮದ್ಯ ಮಾರಾಟ ತಡೆಯಬಹುದು ಎಂದರು.
ಸಭೆಯಲ್ಲಿ ತಾಲೂಕಿನ ಅಕ್ರಮಗಳು, ಅವ್ಯವಹಾರಗಳು, ಜನಸಾಮಾನ್ಯರಿಗಾಗುತ್ತಿರುವ ತೊಂದರೆ ಬಗ್ಗೆ ಚರ್ಚಿಸಲಾಯಿತು. ನಗರದಲ್ಲಿ ರಸ್ತೆ ಮೇಲೆ ವಾಹನ ನಿಲ್ಲಿಸುವುದು, ಮುಖ್ಯರಸ್ತೆಗಳಲ್ಲಿ ತ್ಯಾಜ್ಯ ಎಸೆಯುವುದು, ಅಮಾಯಕರಿಗೆ ಹೆಸರಿಸಿ ತೊಂದರೆ ಕೊಡುವುದು ಸೇರಿದಂತೆ ಕೆಲವು ತೊಂದರೆಗಳ ಬಗ್ಗೆ ಚರ್ಚೆ ನಡೆಯಿತು.https://www.youtube.com/watch?v=AnyDZWvOb4k&t=119s