
ಸಿದ್ಧಾಪುರದ ಉಂಚಳ್ಳಿ ಜಲಪಾತ ನೋಡಲು ಹುಬ್ಬಳ್ಳಿಯಿಂದ ಬುಧವಾರ ಬಂದಿದ್ದ ಯುವಕ-ಯುವತಿಯರಿದ್ದ ಕಾರೊಂದು ಅಘನಾಶಿನಿ ನದಿಯ ಉಪ ಹೊಳೆಯೊಂದಕ್ಕೆ ಬಿದ್ದು ಕಾರಿನಲ್ಲಿದ್ದ ನಾಲ್ವರು ಮೃತಪಟ್ಟ ದುರ್ಘಟನೆ ನಡೆದಿರುವುದು ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ.

ಕೋಡ್ನಮನೆ ಬಳಿ ಹಳ್ಳಕ್ಕೆ ಬಿದ್ದ ಹುಬ್ಬಳ್ಳಿಯ ಕಾರಿನಲ್ಲಿ ಒಟ್ಟೂ 6 ಜನರಿದ್ದು ಅವರಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರ ಶವಗಳನ್ನು ಮೇಲೆತ್ತಲಾಗಿದ್ದು ಉಳಿದ ಇಬ್ಬರ ಸ್ಥಿತಿ-ಗತಿಯ ಬಗ್ಗೆ ಅಧೀಕೃತ ವರ್ತಮಾನ ತಿಳಿದಿಲ್ಲ. ಹುಬ್ಬಳ್ಳಿಯಿಂದ ಉಂಚಳ್ಳಿ ಜಲಪಾತಕ್ಕೆ ಪ್ರವಾಸಕ್ಕೆ ಬಂದವರು ಪ್ರವಾಸ ಮುಗಿಸಿ ಬುಧವಾರ ರಾತ್ರಿ ಹುಬ್ಬಳ್ಳಿಗೆ ಮರಳುವಾಗ ಈ ದುರ್ಘಟನೆ ನಡೆದಿದೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ವಿಳಂಬವಾಗಿ ಮಾಹಿತಿ ದೊರೆತಿದೆ. ಹುಬ್ಬಳ್ಳಿ ಮೂಲದ ಅಕ್ಷತಾ,ನಿಶ್ಚಲ್, ಸುಷ್ಮಾ ರೋಶನ್ ಸೇರಿದ ಒಟ್ಟೂ 6 ಜನರಿದ್ದರು ಎನ್ನಲಾಗಿದೆ.
ಈ ಘಟನೆಯ ವರದಿ ತಿಳಿಯುತ್ತಲೇ ಸ್ಥಳಕ್ಕೆ ತೆರಳಿದ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಶ್ರಮವಹಿಸಿ ನಾಲ್ವರ ಶವಗಳನ್ನು ಮೇಲಕ್ಕೆತ್ತಿದ್ದಾರೆ ಎನ್ನಲಾಗಿದೆ.




_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
