ಪಶ್ಚಿಮ ಪದವಿಧರ ಕ್ಷೇತ್ರ ಗೆಲ್ಲುವ ಅಭ್ಯರ್ಥಿ ಯಾರು?

ರಂಗೇರಿದ ಪಶ್ಚಿಮ ಪದವೀಧರ ಕೇತ್ರದ ಪರಿಷತ್‌ ಚುನಾವಣಾ ಕಣ..!ಕಾಂಗ್ರೆಸ್ ನ ಆರ್.ಎಂ.ಕುಬೇರಪ್ಪರೇ ಈ ಬಾರಿ ಗೆಲ್ಲುವ ಅಭ್ಯರ್ಥಿ.!!

ವಿಧಾನ ಪರಿಷತ್‌ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಸಮೀಪಿಸುತ್ತಿದ್ದಂತೆ ಕಣದಲ್ಲಿರುವ ಅಭ್ಯರ್ಥಿಗಳು ಅತ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದು, ನಾನಾ ಕಸರತ್ತುಗಳ ಮೂಲಕ ಪದವೀಧರರ ಓಲೈಕೆಗಾಗಿ ಹರಸಾಹಸ ಪಡುತ್ತಿದ್ದಾರೆ.ಅಂತಿಮವಾಗಿ ಕಣದಲ್ಲಿರುವ 11 ಅಭ್ಯರ್ಥಿಗಳು ಜಿಲ್ಲಾದ್ಯಂತ ಪಕ್ಷದ ಮುಖಂಡರು, ಕಾರ್ಯಕರ್ತರು, ಬೆಂಬಲಿಗರನ್ನು ಜತೆಯಲ್ಲಿರಿಸಿಕೊಂಡು ಮತದಾರರ ಓಲೈಕೆಗಾಗಿ ಅಲ್ಲಲ್ಲಿ ಸಭೆ, ಪಕ್ಷ ಸಂಘಟನೆ, ಮತದಾರರ ಭೇಟಿ, ಹಿರಿಯರ ಆಶೀರ್ವಾದ ಪಡೆಯುವಲ್ಲಿ ಶ್ರಮ ವಹಿಸುತ್ತಿದ್ದಾರೆ.

ಬಿಜೆಪಿಗೆ ಸರಕಾರದ ಬಲ–

ಬಿಜೆಪಿಯಿಂದ ಸ್ಪರ್ಧಿಸಿರುವ ಗದಗದ ಎಸ್‌.ವಿ. ಸಂಕನೂರ ಅವರು ಈಗಾಗಲೇ ಹಾವೇರಿ, ರಾಣೇಬೆನ್ನೂರ, ಹಿರೇಕೆರೂರ ಸೇರಿದಂತೆ ವಿವಿಧ ಕಡೆ ಚುರುಕಿನ ಪ್ರಚಾರ ಕೈಗೊಂಡಿದ್ದಾರೆ. ಪದವೀಧರರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನೂ ಮಾಮೂ ಲಿಯಾಗಿ ಎಲ್ಲರಿಗೂ ನೀಡುತ್ತಿದ್ದಾರೆ. ನಿರುದ್ಯೋಗಿ ಪದವೀಧರರಿಗೆ ಉದ್ಯೋಗ, ಉದ್ಯೋಗಮೇಳ ಆಯೋಜನೆ, ವಿವಿಧ ಇಲಾಖೆಯ ಸಿಬ್ಬಂದಿಗಳ ಸಮಸ್ಯೆಗೆ ಸ್ಪಂದಿಸಿರುವುದಾಗಿ ಸಂಕನೂರ ಹೇಳುತ್ತಿದ್ದು, ಇವು ಅವರ ಗೆಲುವಿಗೆ ಪ್ಲಸ್‌ ಪಾಯಿಂಟ್‌ ಆಗಲಿವೆ ಎಂದೇ ಎಂದು ಬಿಜೆಪಿ ಬೆಂಬಲಿಗರಲ್ಲಿ ವ್ಯಕ್ತವಾಗುವ ಅಭಿಪ್ರಾಯವಾಗಿದೆ.

ಕಾಂಗ್ರೆಸ್ ‘ಕೈ’ನ ಕುಬೇರಪ್ಪರಿಗೆ ಹಿರಿಯರ ಬಲ–ಇನ್ನು ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಆರ್‌.ಎಂ.ಕುಬೇರಪ್ಪನವರು ಸಹ ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರ ಬೆಂಬಲ ಪಡೆದಿದ್ದಾರಲ್ಲದೆ ಈಗಾಗಲೇ ಪದವೀಧರರು ಹಾಗೂ ಶಿಕ್ಷಣ ಕ್ಷೇತ್ರದಲ್ಲಿರುವ ಎಲ್ಲ ಸಮಸ್ಯೆಗಳನ್ನೂ ಈಡೇರಿಸುವ ಕುರಿತು ಪ್ರಣಾಳಿಕೆ ಬಿಡುಗಡೆ ಮಾಡಿದ್ದಷ್ಟೇ ಅಲ್ಲ ಪಕ್ಷ ಸಂಘಟನೆ ಹಾಗೂ ಸಭೆಗಳನ್ನು ಮಾಡುವ ಮೂಲಕ ಬೇರೆ ಬೇರೆ ಕಡೆಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ.ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಆಡಳಿತ ವೈಖರಿ ಹಾಗೂ ಜಾರಿಗೆ ತಂದಿದ್ದ ಯೋಜನೆಗಳು ಕುಬೇರಪ್ಪನವರ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂಬುದು ಕಾಂಗ್ರೆಸ್‌ ಆಪ್ತರಲ್ಲಿ ಕೇಳಿ ಬರುತ್ತಿರುವ ಅಂಶಗಳಾಗಿವೆ.

ಇನ್ನೊಂದೆಡೆ ಜೆಡಿಎಸ್‌ ಹಾಗೂ ಪಕ್ಷೇತರ ಅಭ್ಯರ್ಥಿಗಳು ಕೂಡ ತಮ್ಮ ಬೆಂಬಲಿಗರೊಂದಿಗೆ ಪ್ರಚಾರದಲ್ಲಿತೊಡಗಿಸಿಕೊಂಡಿದ್ದರೆ. ಒಟ್ಟಿನಲ್ಲಿ ಪಶ್ಚಿಮ ಪದವೀಧರರ ಚುನಾವಣಾ ಅಭ್ಯರ್ಥಿಗಳ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಅಕ್ಟೋಬರ್ 28 ರಂದು ನಡೆಯುವ ಮತದಾನದತ್ತ ಎಲ್ಲರ ದೃಷ್ಟಿ ನೆಟ್ಟಿದೆ.

ಈಗ ಕಣದಲ್ಲಿರುವ ಪ್ರಮುಖರು–* ಆರ್‌.ಎಂ ಕುಬೇರಪ್ಪ (ಕಾಂಗ್ರೆಸ್‌)* ಎಸ್‌.ವಿ ಸಂಕನೂರ (ಬಿಜೆಪಿ)* ಕಲ್ಲೂರ ಶಿವಶಂಕರಪ್ಪ ಚನ್ನಪ್ಪ (ಜೆಡಿಎಸ್‌)* ಬಿ.ಡಿ ಹಿರೇಗೌಡ್ರ* ಶಿವರಾಜ ಕಾಂಬಳೆ* ಸೋಮಶೇಖರ ಉಮರಾಣಿ* ಬಸವರಾಜ ಗುರಿಕಾರ* ಬಸವರಾಜ ಎಸ್‌ ತೆರದಾಳಈ ಪೈಕಿ ಈ ವಿಧಾನ ಪರಿಷತ್ ಚುನಾವಣೆ ನಡೆದಿರುವುದು ಕಾಂಗ್ರೆಸ್ ನ ಆರ್.ಎಂ.ಕುಬೇರಪ್ಪ ಹಾಗೂ ಬಿಜೆಪಿಯ ಎಸ್.ವಿ.ಸಂಕನೂರರ ನಡುವೆಯೇ. ಇಲ್ಲಿ ಜೆಡಿಎಸ್ ಕೂಡ ಆಟಕುಂಟು ಲೆಕ್ಕಕ್ಕಿಲ್ಲದ್ದು. ಇನ್ನೂ ಈ ಪಕ್ಷೇತರರು ಹೆಸರಿಗೆ ಮಾತ್ರ ಅಭ್ಯರ್ಥಿಗಳು.

ಹೀಗೆ ನಡೆಯಲಿರುವ ಈ ಚುನಾವಣೆಯಲ್ಲಿ ಮುಖ್ಯವಾಗಿ ಕಾಂಗ್ರೆಸ್ ನ ಆರ್.ಎಂ.ಕುಬೇರಪ್ಪ ಗೆಲ್ಲುವ ಕುದುರೆಯಾಗಿದ್ದಾರೆಂದೇ ಈ ವಿಧಾನ ಪರಿಷತ್ ನಿಯಮಿತ ಅಂಕೆ-ಸಂಖ್ಯೆಯ ಮತದಾರರೇ ಹೇಳುತ್ತಿದ್ದಾರೆ.ಇರಲಿ. ಈ ಬಿಜೆಪಿಯ ಎಸ್.ವಿ.ಸಂಕನೂರರಲ್ಲವೆ ಗೆಲ್ಲುವ ಅಭ್ಯರ್ಥಿ ಎಂದು ಕೆಲ ಜನರು ಕೇಳಬಹುದು. ಅಲ್ಲವೆಂಬುದೇ ಅನಿವಾರ್ಯ ಉತ್ತರವಾಗುತ್ತದೆ ಈ ವಿಧಾನ ಪರಿಷತ್ ಚುನಾವಣೆ.ಕಾರಣವೇಕೆಂದರೆ ಈ ಚುನಾವಣೆಗೂ ಮುಂಚಿನ ಈ ಚುನಾವಣೆಗಳಲ್ಲಿ ಇದೇ ಕ್ಷೇತ್ರದಿಂದ ಅವಿರತವಾಗಿ ಗೆದ್ದು ಬರುತ್ತಿದ್ದ ಷ್ಟೇ ಅಲ್ಲ, ಸರ್ಕಾರದಲ್ಲಿ ಸಚಿವರಾಗಿ ಖಾಯಂ ಮೆರೆಯುತ್ತಿದ್ದ ಎಚ್.ಕೆ.ಪಾಟೀಲರು ಈಗಿಲ್ಲ. ಅವರು ಹಿಂಬಾಗಿಲಿನ ರಾಜಕೀಯ ಮಾಡುತ್ತಾರೆ ಎಚ್.ಕೆ.ಪಾಟೀಲ ಎಂಬ ಅಪವಾದಿಂದ ಪಾರಾಗಬೇಕಿತ್ತು. ಹಾಗಾಗಿ ಎಚ್.ಕೆ.ಪಾಟೀಲರು ಕಳೆದ ವಿಧಾನ ಸಭಾ ಚುನಾವಣೆಗೆ ನಿಂತು ಅದು ಹೇಗೋ ಗೆದ್ದು ಬಂದರು. ಈ ಹಿಂಬಾಗಿಲ ರಾಜಕೀಯದ ಪಟ್ಟದಿಂದ ಪಾರಾದರು. ಈಗ ಈ ಚುನಾವಣೆಯಲ್ಲೂ ಎಚ್.ಕೆ.ಪಾಟೀಲ ತಮ್ಮ ಹಿಂದಿದ್ದ ಆ ಚುನಾವಣಾ ಮತಗಳನ್ನು ಈಗ ಅದೇ ಕಾಂಗ್ರೆಸ್ ನ ಆರ್.ಎಂ.ಕುಬೇರಪ್ಪರಿಗೆ ಧಾರೆ ಎರೆಯುವುದು ಅನಿವಾರ್ಯವಾಗಿದೆ.

ಕಾಂಗ್ರೆಸ್ ಪಕ್ಷಕ್ಕೆ.ಇದೂ ಒಂದು ಮುಖ್ಯ ಕಾರಣವಾದರೂ ಆರ್.ಎಂ.ಕುಬೇರಪ್ಪ ಅವರು ತಾವೇ ಈವರೆಗೆ ಸಂಪಾದಿಸಿಕೊಂಡ ಮತಗಳು ಬೇರೇ ಇವೆ. ಇವೆಲ್ಲವೂ ಸೇರಿ ಈ ಬಾರಿ ಕಾಂಗ್ರೆಸ್ ನ ಆರ್.ಎಂ.ಕುಬೇರಪ್ಪನವರನ್ನು ಗೆಲುವಿನ ದಡ ಮುಟ್ಟಿಸುತ್ತವೆ.ಅಲ್ಲದೇ ಆರ್.ಎಂ.ಕುಬೇರಪ್ಪ ಈ ಮೊದಲು ಇದೇ ಬಿಜೆಪಿಯಲ್ಲಿ ಕೆಲಸ ಮಾಡಿದವರು. ಆ ಕಾರಣದಿಂದ ಬಿಜೆಪಿಯಲ್ಲಿಯೂ ಆರ್.ಎಂ.ಕುಬೇರಪ್ಪರ ಮತಗಳಿವೆ ಸ್ವಂತಕ್ಕೆ. ಆ ಮತಗಳೂ ಈ ಬಾರಿ ಆರ್.ಎಂ.ಕುಬೇರಪ್ಪರನ್ನು ಕೈಹಿಡಿಯುತ್ತವಲ್ಲದೇ ಗೆಲುವಿನ ದಡ ಮುಟ್ಟಿಸುತ್ತವೆ ಎಂದೇ ಎಲ್ಲರ ಲೆಕ್ಕಾಚಾರವಾಗಿದೆಯಲ್ಲದೇ ಲೆಕ್ಕಾಚಾರದಲ್ಲಿ ಬರುವ ಬಿಜೆಪಿಯ ಈ ಎಸ್.ಬಿ.ಸಂಕನೂರರ ಮತಗಳೂ ಅನಿವಾರ್ಯವಾಗಿ ಆರ್.ಎಂ.ಕುಬೇರಪ್ಪರನ್ನು ಗೆಲುವಿನ ದಡ ಮುಟ್ಟಿಸುತ್ತವೆ ಎಂಬುದೇ ಅನಿವಾರ್ಯ ಎಲ್ಲರದೂ ಎಣಿಕೆಯಾಗಿದೆ.

ಹೀಗಿದ್ದರೂ ಆರ್.ಎಂ.ಕುಬೇರಪ್ಪರಿಗೆ ಶಿಕ್ಷಕರ ಮತಕ್ಷೇತ್ರದ ಅನಾದಿಕಾಲದಿಂದಲೂ ಎದುರಾಗಿರುವ ಬದ್ಧ ವೈರಿಯಾದ ಬಸವರಾಜ ಹೊರಟ್ಟಿಯ ಮತಗಳು ಆರ್.ಎಂ.ಕುಬೇರಪ್ಪರನ್ನು ಸೋಲಿಸಲು ಹೊಂಚು ಹಾಕಿರುವುದೂ ಇದೆ. ಈ ಹೊರಟ್ಟಿಯ ಮತಗಳು ಆರ್.ಎಂ.ಕುಬೇರಪ್ಪರನ್ನು ತುಸು ದಣಿಸಬಹುದೇ ಹೊರತುಪಡಿಸಿ ಏನೂ ಮಾಡಲಾರವು ಎಂಬ ಲೆಕ್ಕಾಚಾರವಿದೆ . ಅದಕ್ಕೆ ಕಾರಣ ಎಂದಿನ ಎಚ್.ಕೆ.ಪಾಟೀಲರ ಮತಗಳು ಅವರದೇ ಕಾಂಗ್ರೆಸ್ ನ ಆರ್.ಎಂ.ಕುಬೇರಪ್ಪರನ್ನು ಗೆಲ್ಲಿಸಬೇಕೆಂಬ ಹೈಕಮಾಂಡ್ ನ ಎಚ್ಚರಿಕೆಯೂ ಮಾತಗಳಾಗಿ ಈ ಬಾರಿ ಕೆಲಸ ಮಾಡಲಿವೆ. ಕಾಂಗ್ರೆಸ್ ನ ಆರ್.ಎಂ.ಕುಬೇರಪ್ಪರು ಎಂದಿನ ತಮ್ಮ ಬದ್ಧ ವೈರಿಯಾದ ಜೆಡಿಎಸ್ ನ ಬಸವರಾಜ ಹೊರಟ್ಟಿಯು ತಮ್ಮ ಪಕ್ಷದ ಅಭ್ಯರ್ಥಿಗಿಂತ ಬಿಜೆಪಿಯ ಎಸ್.ಬಿ.ಸಂಕನೂರರನ್ನು ಗೆಲಿಸುವ ಹವಣಿಕೆಯಲ್ಲಿದ್ದಾರೆ. ಆದರೆ ಬಿಜೆಪಿಯ ಎಸ್.ಬಿ.ಸಂಕನೂರರನ್ನು ಗೆಲ್ಲಿಸುವ ಎಲ್ಲಾ ಪ್ರಯತ್ನಗಳನ್ನೂ ಮೀರಿಸುತ್ತವೆ ಬಸವರಾಜ ಹೊರಟ್ಟಿಯ ಹವಣಿಕೆ .ಹಾಗಾಗಿ ಉಳಿದೆಲ್ಲಾ ಪ್ರಯತ್ನ, ಹರಸಾಹಸಗಳೇನೇ ಇರಲಿ, ಒಟ್ಟಾರೆ ಕಾಂಗ್ರೆಸ್ ನ ಆರ್.ಎಂ.ಕುಬೇರಪ್ಪ ಬಿಜೆಪಿಯ ಎಸ್.ಬಿ.ಸಂಕನೂರರನ್ನು ಸೋಲಿಸಿ ಕಾಂಗ್ರೆಸ್ ಪಕ್ಷಕ್ಕೆ ಒಂದು ಸ್ಥಾನವನ್ನು ತಂದುಕೊಡುತ್ತದೆಯಷ್ಟೇ ಅಲ್ಲ ಆರ್.ಎಂ.ಕುಬೇರಪ್ಪರ ಅನಾದಿಕಾಲದ ಆಸೆಯಾದ ಪರಿಷತ್ ಪ್ರವೇಶಿಸುವ ಕನಸು ನನಸಾಗಲಿದೆ..!

-# ಕೆ.ಶಿವು.ಲಕ್ಕಣ್ಣವರ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *