

ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಮೊದಲು ಮೇಲ್ ಉಸ್ತುವಾರಿ ಸಮಿತಿ ನೇಮಕ ಮಾಡಿ ನಂತರ ಅದನ್ನು ಸರ್ಕಾರದ ನಿಯಂತ್ರಣಕ್ಕೆ ತಂದು ಕೊನೆಗೆ ಅದನ್ನು ವೈದಿಕರ ಮಠ,ಮಂದಿರಕ್ಕೆ ವಹಿಸುವ ಹಿನ್ನೆಲೆಯಲ್ಲಿ ಶೇಷಗಿರಿ ಭಟ್ಟರ ಕುಟುಂಬ ದಾಂಧಲೆ ಎಬ್ಬಿಸಿದ್ದು ಈ ಗಲಾಟೆ ಮೂಲಕ ವೈದಿಕರ ಪರವಾಗಿರುವ ಸರ್ಕಾರ ಶೂದ್ರವಿರೋಧಿ ಕಾರ್ಯಾಚರಣೆ ಅಂಗವಾಗಿ ಗಲಾಟೆ, ದೊಂಬಿ ಮಾಡಿರುವ ಶೇಷಗಿರಿಭಟ್ಟರ ಕುಟುಂಬವನ್ನು ರಕ್ಷಿಸುತ್ತಿರುವುದನ್ನು ನೋಡಿದರೆ ಇವೆಲ್ಲಾ ಪೂರ್ವನಿಯೋಜಿತ ಪುರೋಹಿತಶಾಹಿ ತಂತ್ರಗಳು ಎಂದು ಸ್ಫಷ್ಟವಾಗುತ್ತದೆ ಎಂದು ಆರೋಪಿಸಿರುವ ಕೆಲವು ಸಂಘಟನೆಗಳು ರಾಜ್ಯ ಸರ್ಕಾರ ಬಹುಸಂಖ್ಯಾತ ಹಿಂದುಳಿದವರ ವಿರುದ್ಧ ಕಾರ್ಯಾಚರಿಸುತ್ತಿದೆ. ಇದಕ್ಕೆ ತಕ್ಕ ಉತ್ತರ ನೀಡುವ ಶಕ್ತಿ ಹಿಂದುಳಿದ ವರ್ಗಗಳು, ಈ ವರ್ಗಗಳ ಸಂಘಟನೆಗಳಿಗಿದೆ ಎಂದಿವೆ.
ವಲಸೆ ವೈದಿಕರು, ಮೂಲನಿವಾಸಿ ಶೂದ್ರರ ಕಾಳಗಕ್ಕೆ ಕಾರಣವಾಗಿದ್ದ ಸಾಗರ ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಸರ್ಕಾರ ವಶಕ್ಕೆ ಪಡೆಯುವ ಮೂಲಕ ತನ್ನ ವೈದಿಕ ಪ್ರೇಮ ಮೆರೆದಿದೆ.
ಸಿಗಂದೂರಿನಲ್ಲಿ ಕುಟುಂಬ ಕಲಹ. ಜಾತಿ ಕಲಹ, ಶೂದ್ರ ಅವಿವೇಕತನವನ್ನು ಬಳಸಿಕೊಂಡ ವಲಸೆ ವೈದಿಕರು ದೇವಾಲಯವನ್ನು ನೇರವಾಗಿ ತಮ್ಮ ಹಿಡಿತಕ್ಕೆ ಅಥವಾ ಪರೋಕ್ಷವಾಗಿ ತಮ್ಮ ಹಿಡಿತಕ್ಕೆ ಪಡೆಯಲು ಹವಣಿಸುತಿದ್ದರು. ಈ ಷಡ್ಯಂತ್ರದ ಭಾಗವಾಗಿ ಶೇಷಗಿರಿ ಭಟ್ಟರ ಕುಟುಂಬ ಚೌಡೇಶ್ವರಿ ದೇವಾಲಯದಲ್ಲಿ ಹೊಡೆದಾಡಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದು ಹಳೆ ಕತೆ. ಆದರೆ ಶಾಂತಿ ಕದಡಿದ ಭಟ್ಟರ ಕುಟುಂಬವನ್ನು ಬಂಧಿಸಿ, ಬೆಂಡೆತ್ತುವ ಬದಲು ಸರ್ಕಾರ ರಾಮಪ್ಪರ ನೇತೃತ್ವದ ಆಡಳಿತ ಮಂಡಳಿಯನ್ನು ಅಮಾನತ್ತು ಮಾಡಿ ವೈದಿಕರಿಗೆ ಸಹಕರಿಸಿದೆ. ರಾಮಪ್ಪ ಕುಟುಂಬದ ಶೂದ್ರ ಹುಂಬತನ, ಕೆಲವು ವ್ಯಕ್ತಿಗಳು, ಸಂಘಟನೆಗಳ ಸ್ವಾರ್ಥವನ್ನು ಬಳಸಿಕೊಂಡ ವೈದಿಕರು ಸರ್ಕಾರದ ಮೇಲೆ ಪ್ರಭಾವ ಬೀರಿ ದೇವಸ್ಥಾನದ ಆಡಳಿತ, ಮೇಲುಸ್ತುವಾರಿ ಜವಾಬ್ಧಾರಿಯನ್ನು ಸರ್ಕಾರಕ್ಕೆ ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯಾದ್ಯಂತ ವಿರೋಧ ವ್ಯಕ್ತವಾಗಿದ್ದು ಶೂದ್ರರು, ಬಹುಸಂಖ್ಯಾತರ ವಿರುದ್ಧವಿರುವ ರಾಜ್ಯ ಬಿ.ಜೆ.ಪಿ. ಸರ್ಕಾರ ಸ್ಥಳಿಯ ಬಹುಸಂಖ್ಯಾತರಿಗೆ ಅನ್ಯಾಯ ಮಾಡಿದೆ. ಗೋಕರ್ಣ ದೇವಾಲಯ ಆಪೋಶನ ಮಾಡಿ ಸಿಗಂದೂರಿನ ಮೇಲೆ ಕಣ್ಣಿಟ್ಟಿದ್ದ ಹೊಸನಗರ ಮಠ ಮತ್ತವರ ವೈದಿಕ ಪರಿವಾರ ಸಿಗಂದೂರು ವಿವಾದ,ಈ ಬೆಳವಣಿಗೆಗಳಿಗೆ ಕಾರಣವಾಗಿದ್ದು. ಶೂದ್ರವಿರೋಧಿ ವೈದಿಕರ ಸರ್ಕಾರ ಮತ್ತು ಅವರ ಪರಿವಾರದ ವಿರುದ್ಧ ಜನಾಂದೋಲನ ಮಾಡಿ ವಲಸೆ ವೈದಿಕರ ಬಹುಸಂಖ್ಯಾತರ ವಿರೋಧಿ ಸರ್ಕಾರ ಮತ್ತವರ ಬೆಂಬಲಿಗರ ವಿರುದ್ಧ ಹೋರಾಟ ರೂಪಿಸುವುದಾಗಿ ಎಚ್ಚರಿಸಿದೆ. ಸರ್ಕಾರದ ಈ ಕ್ರಮದ ವಿರುದ್ಧ ರಾಜ್ಯ ಬಿ.ಎಸ್. ಎನ್.ಡಿ.ಪಿ., ರಾಷ್ಟ್ರೀಯ ಈಡಿಗ ಒಕ್ಕೂಟ ಸೇರಿದಂತೆ ಅನೇಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
