

ಶಿಕ್ಷಕರು, ಪದವೀಧರರ ಪರವಾಗಿ ತಾನು ಮಾಡಿದ ಕೆಲಸಗಳನ್ನು ನೋಡಿ ಮತದಾರರು ಮತಹಾಕುವುದರಿಂದ ತಮ್ಮ ಗೆಲುವು ಖಾತ್ರಿ ಎಂದು ಅಭ್ಯರ್ಥಿ ಕುಬೇರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಡಿ.ಸಿ.ಸಿ. ಅಧ್ಯಕ್ಷ ಭೀಮಣ್ಣ ನಾಯ್ಕ,ಬ್ಲಾಕ್ ಅಧ್ಯಕ್ಷ ವಸಂತನಾಯ್ಕ ಮಳವಳ್ಳಿ, ಡಿ.ಸಿ.ಸಿ. ಕಾರ್ಯದರ್ಶಿ ಭಾಗವತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಈ ಮಾಧ್ಯಮಗೋಷ್ಠಿಯ ವಿಡಿಯೋ samaajamukhi ಯೂ ಟ್ಯೂಬ್ ಚಾನೆಲ್ ನಲ್ಲಿದೆ.
ಮೋದಿ ಮೋಸ
ಸುಳ್ಳುಭರವಸೆ, ವಚನಬೃಷ್ಟತೆಯಿಂದ ಪ್ರಧಾನಿ ಮೋದಿ ತಮ್ಮ ವರ್ಚಸ್ಸು,ತಮ್ಮ ಮೇಲಿನ ವಿಶ್ವಾಸ ಕಳೆದುಕೊಂಡಿದ್ದು ಇದರಿಂದಾಗಿ ಮುಂದಿನ ದಿನಗಳಲ್ಲಿ ಮೋದಿ ಮತ್ತು ಬಿ.ಜೆ.ಪಿ. ಸೋಲಿನ ಕಹಿ ಉಣ್ಣಲಿದ್ದಾರೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಎಚ್ಚರಿಸಿದರು. ಸಿದ್ಧಾಪುರದಲ್ಲಿ ಪಶ್ಚಿಮ ಪದವೀಧರರ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಲಯನ್ಸ್ ಕ್ಲಬ್ ಬಾಲಭವನದಲ್ಲಿ ಪ್ರಚಾರ ಭಾಷಣ ಮಾಡುವ ಮೊದಲು ಕಾಂಗ್ರೆಸ್ ಮುಖಂಡ ಆರ್.ಎಂ. ಹೆಗಡೆಯವರ ಮನೆಯಲ್ಲಿ ಕರೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಅತ್ಯಾಚಾರದ ಅಪರಾಧಿಗಳಿಗೆ ಸರ್ಕಾರ ಬೆಂಬಲ ನೀಡಿದೆ. ಕೋವಿಡ್ ನಿಭಾಯಿಸುವಲ್ಲಿ ಸೋತ ಸರ್ಕಾರ ತಮಗೆ ಮತ ಹಾಕಿದರೆ ಕೋವಿಡ್ ಚುಚ್ಚುಮದ್ದು ಉಚಿತ ಎನ್ನುತ್ತಿದೆ. ಮೋದಿ ಭರವಸೆಯ ಉದ್ಯೋಗ ಸೃಷ್ಟಿ ಎಲ್ಲಿ? ನೋಟ್ ಬ್ಯಾನ್ ನಂತರ ಆದ ತೊಂದರೆಗಳ ಬಗ್ಗೆ ಮೋದಿ ಮಾತನಾಡಿದ್ದಾರಾ? ರೈತರ ಆದಾಯ ದ್ವಿಗುಣ ಮಾಡುವುದು ಯಾವಾಗ? ಎಂದು ಪ್ರಶ್ನಿಸಿದ ಪಾಟೀಲ್ ಜನರಿಗೆ ಸುಳ್ಳುಭರವಸೆ ಕೇಳಿ ಸಾಕಾಗಿದೆ. ವಚನಬ್ರಷ್ಟತೆ,ಅರಾಜಕ ಆಡಳಿತ,ಸರ್ವಾಧಿಕಾರಗಳಿಂದ ಬೇಸತ್ತ ಜನತೆ ಪ್ರಜಾಪ್ರಭುತ್ವ ಉಳಿಸಿ, ಜಾತ್ಯಾತೀತ ಆಡಳಿತ ನೀಡುವವರ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷದಿಂದಲೇ ಮೋದಿ ಮತ್ತು ಬಿ.ಜೆ.ಪಿ.ಗಳ ಸೋಲಿನ ಸರಣಿ ಪ್ರಾರಂಭವಾಗುತ್ತದೆ ಎಂದರು.



