ಏಳು ಸಾಹಿತಿಗಳ ಪಾಠಗಳಿಗೆ ಕೋಕ್!‌ ಯಾರು ಆ ಸಾಹಿತಿ,ಬರಹಗಾರರು?

ರಾಜ್ಯ ಪಠ್ಯಕ್ರಮದಿಂದ ಏಳು ಸಾಹಿತಿಗಳ ಪಾಠಗಳನ್ನು ಕೈಬಿಡುವಂತೆ ಆದೇಶ: ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ

6, 9 ಮತ್ತು 10ನೇ ತರಗತಿಯ ಕನ್ನಡ ಪಠ್ಯಪುಸ್ತಕಗಳ ಪಠ್ಯಕ್ರಮದಿಂದ ಏಳು ಸಾಹಿತಿಗಳು/ವಿದ್ವಾಂಸರ ಪಾಠಗಳನ್ನು ಕೈಬಿಡುವಂತೆ ಕರ್ನಾಟಕ ಪಠ್ಯಪುಸ್ತಕ ಸೊಸೈಟಿ (KTS) ವ್ಯವಸ್ಥಾಪಕ ನಿರ್ದೇಶಕ ಮಾದೇಗೌಡ ಎಂಪಿ ಆದೇಶ ಹೊರಡಿಸಿ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

Representational image

ಬೆಂಗಳೂರು: 6, 9 ಮತ್ತು 10ನೇ ತರಗತಿಯ ಕನ್ನಡ ಪಠ್ಯಪುಸ್ತಕಗಳ ಪಠ್ಯಕ್ರಮದಿಂದ ಏಳು ಸಾಹಿತಿಗಳು/ವಿದ್ವಾಂಸರ ಪಾಠಗಳನ್ನು ಕೈಬಿಡುವಂತೆ ಕರ್ನಾಟಕ ಪಠ್ಯಪುಸ್ತಕ ಸೊಸೈಟಿ (KTS) ವ್ಯವಸ್ಥಾಪಕ ನಿರ್ದೇಶಕ ಮಾದೇಗೌಡ ಎಂಪಿ ಆದೇಶ ಹೊರಡಿಸಿ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. ಈ ಸಾಹಿತಿಗಳು ತಮ್ಮ ಪಾಠಗಳನ್ನು ಪ್ರಕಟಿಸಲು ನೀಡಿರುವ ಅನುಮತಿಯನ್ನು ಹಿಂತೆಗೆದುಕೊಂಡು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದ ಕಾರಣ ಮುಂದಿನ ಶೈಕ್ಷಣಿಕ ವರ್ಷದಿಂದ ಅವರ ಪಾಠಗಳನ್ನು ಪಠ್ಯದಿಂದ ಕೈಬಿಡಲಾಗಿದೆ.

10ನೇ ತರಗತಿಯ ಕನ್ನಡ ಪ್ರಥಮ ಭಾಷೆಯ ಪಠ್ಯಪುಸ್ತಕದಿಂದ ದೇವನೂರು ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಪಾಠವನ್ನು ಕೈಬಿಡುವಂತೆ ಆದೇಶ ನೀಡಲಾಗಿದೆ. ಡಾ ಜಿ ರಾಮಕೃಷ್ಣ ಅವರು ಬರೆದಿರುವ 10 ನೇ ತರಗತಿಯ ಪ್ರಥಮ ಭಾಷೆಯ ಕನ್ನಡ ಪಠ್ಯಪುಸ್ತಕದಿಂದ “ಭಗತ್ ಸಿಂಗ್” ಪಾಠ; ರೂಪ ಹಾಸನ ಅವರು ಬರೆದಿರುವ 9 ನೇ ತರಗತಿಯ ತೃತೀಯ ಭಾಷೆಯ ಪಠ್ಯಪುಸ್ತಕದಿಂದ “ಅಮ್ಮನಾಗುವೆಂದರೆ” ಕವಿತೆ.

ಈರಪ್ಪ ಎಂ ಕಂಬಳಿ ಅವರ 10ನೇ ತರಗತಿಯ ತೃತೀಯ ಭಾಷೆಯ ಪಠ್ಯಪುಸ್ತಕದಿಂದ “ಹೀಗೊಂದು ಉನ್ನತ ಪ್ರಯಾಣ” ಪಾಠ; ಸತೀಶ್ ಕುಲಕರ್ಣಿ ಅವರ 10 ನೇ ತರಗತಿಯ ತೃತೀಯ ಭಾಷೆಯ ಪಠ್ಯಪುಸ್ತಕದಿಂದ “ಕಟ್ಟತೇವ ನಾವು” ಕವಿತೆ; ಸುಕನ್ಯಾ ಮಾರುತಿಯವರ 10ನೇ ತರಗತಿಯ ದ್ವಿತೀಯ ಭಾಷೆಯ ಪಠ್ಯಪುಸ್ತಕದಿಂದ “ಎನಿ” ಕವಿತೆ; ದೊಡ್ಡ ಹುಲ್ಲೂರು ರುಕ್ಕೋಜಿ ರಾವ್ ಅವರ 6 ನೇ ತರಗತಿಯ ಪ್ರಥಮ ಭಾಷಾ ಪಠ್ಯಪುಸ್ತಕದಿಂದ “ಡಾ ರಾಜ್‌ಕುಮಾರ್” ಪಾಠವನ್ನು ಕೈಬಿಡುವಂತೆ ಕರ್ನಾಟಕ ಪಠ್ಯಪುಸ್ತಕ ಸೊಸೈಟಿ ಆದೇಶ ನೀಡಿದೆ. (ಕಪ್ರಡಾ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು ಥಳಿಸಿದ ಆರೋಪದ ಮೇಲೆ ಅರಣ್ಯಾಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಾದ ಮಾಹಿತಿ ಬಹಿರಂಗವಾಗಿದೆ. ನಾಣಿಕಟ್ಟಾ ಪ್ರದೇಶದಲ್ಲಿ ಆಗಂತುಕರು ಕಡವೆಯನ್ನು ಕೊಂದು ಪರಾರಿಯಾಗಿದ್ದರು. ಈ ಭೇಟೆ ಪ್ರಕರಣದ ಜಾಡು ಹಿಡಿದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *